ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೪.] ಯುದ್ದ ಕಾಂಡವ. ೨೦೮೫ ಹಿಂದನುಮೋದಿಸಲು, ಕಾರಿನಿಪುಣನಾದ ರಾಮನು, ತಿರುಗಿ ಸುಗ್ರೀವನನ್ನು ಕುರಿತು ಎಲೆ ವಾನರೇಂದ್ರನೆ ಮುಂದೆ ದಾರಿಯನ್ನು ನೋಡುವುದಕ್ಕಾ ಗಿ ನೀಲನು ಈ ಸಮಸ್ತವಾನರಸೈನ್ಯಕ್ಕೂ ಮುಂದಾಗಿ ಹೋಗಲಿ ! ವೇಗ ಶಾಲಿಗಳಾದ ನೂರುಸಾವಿರಮಂದಿ ವಾನರರು ಅವನ ಸಹಾಯಕ್ಕಾಗಿ ಅವನ ಸಂಗಡಲೇ ಹೋಗಬೇಕು ! " ಎಂದನು ಇಷ್ಟರಲ್ಲಿಯೇ ನೀಲನು ಸಮೀಪದಲ್ಲಿ ಬಂದು ನಿಲ್ಲಲು, ಅವನನ್ನು ನೋಡಿ ರಾಮನು (ಎಲೆ ಸೇನಾ ಪತೀ ' ಫಲಮೂಲಸಮೃದ್ಧಿಯಿಂದಲೂ, ತಂಪಾದ ಮರಗಳ ಸಾಲಿ ನಿಂದಲೂ, ಶೀತಲವಾದ ನೀರಿನಿಂದಲೂ ಕೂಡಿ, ವಿಶೇಷವಾಗಿ ಜೇನು ಸಿಕ್ಕ ತಕ್ಕೆ ದಾರಿಯನ್ನು ನೋಡಿ, ಆ ದಾರಿಯಿಂದ ಈ ನಮ್ಮ ಸಮಸ್ಯವಾನರ ಸೈನ್ಯವನ್ನೂ ಸಾಗಿಸಬೇಕು ನಾವು ಬರುವುದನ್ನು ತಿಳಿದರೆ, ದುರಾತ್ಮರಾದ ರಾಕ್ಷಸರು, ಧಾರಿಯಲ್ಲಿ ಸಿಕ್ಕಬಹುದಾದ ಫಲಮೂಲಗಳಿಗೂ, ಪಾನದ್ರ ವ್ಯಗಳಿಗೂ ವಿಷಾದಿಗಳನ್ನು ಸೇರಿಸಿ ಕೆಡಿಸಬಹುದು ಅದಕ್ಕವಕಾಶವಿಲ್ಲದಂ ತೆ ನೀನು ಯಾವಾಗಲೂ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಮತ್ತು ನಮ್ಮ ಶತ್ರುಗಳು ನಾವು ಬರುವುದನ್ನು ತಿಳಿದರೆ, ಅಲ್ಲಲ್ಲಿ ರಹಸ್ಯವಾದ ನಿಮ್ಮ ಪ್ರದೇಶಗಳಲ್ಲಿಯೂ, ಜಲದುರ್ಗಗಳಕ್ಲಿಯೂ, ಕಾಡುಗಳಲ್ಲಿಯೂ, ಅವಕಾಶ ವನ್ನು ನೋಡಿ, ನಮ್ಮನ್ನು ಕೊಲ್ಲುವುದಕ್ಕಾಗಿ ತಮ್ಮ ಸೈನ್ಯಗಳನ್ನಿರಿಸಬಹು ದು, ಆದುದರಿಂದ ನಮ್ಮ ವಾನರರು ಮೇಲೆ ಹಾರಿ ಆಕಾಶದಿಂದಲೇ ಆಯಾಸ್ಥಳಗಳನ್ನು ಚೆನ್ನಾಗಿ ಪರೀಕ್ಷಿಸಿ ನೋಡುತ್ತ, ಎಚ್ಚರಿಕೆಯಿಂದ ಹೋ ಗಬೇಕು ನಮ್ಮ ಸೈನ್ಯದಲ್ಲಿ ಯಾವುದು ನಿಸ್ಸಾರವೆಂದು ನಿನಗೆ ತೋರಬಹು ದೋ ಅದನ್ನು ಇಲ್ಲಿನ ಕಾರಕ್ಕಾಗಿ ಇಲ್ಲಿಯೇ ನಿಲ್ಲಿಸಿಡು? ನೀಲಾ' ಈಗ ನಾ ವು ಪ್ರಯತ್ನಿ ಸುವ ಕಾರವೇನೋ ಬಹಳ ಭಯಂಕರವಾದುದು ! ಆದುದ ರಿಂದ ನಮ್ಮ ಸೈನಿಕರೆಲ್ಲರೂ ತಪ್ಪದೆ ಎಚ್ಚರಿಕೆಯಿಂದ ತಮ್ಮ ತಮ್ಮ ವೀಡ್ಯ ವನ್ನು ಪಯೋಗಿಸಬೇಕು, ಸಮುದ್ರ ಪ್ರವಾಹದಂತೆ ವಿಸ್ತಾರವಾಗಿಯೂ ಭಯಂಕರವಾಗಿಯೂ ಇರುವ ನಮ್ಮ ಮುಖಸೈನ್ಯವನ್ನು ನಡೆಸಿಕೊಂಡು ಹೋಗುವುದಕ್ಕಾಗಿ, ಮಹಾಬಲಾಡ್ಯರಾದ ಸಾವಿರಾರುಮಂದಿ ವಾನರವೀರ ರನ್ನು ನಿಯಮಿಸಬೇಕು, ಗೋಸಮೂಹದ ಮುಂದೆಹೋಗುವ ಮಹಾವೃತ