ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೮ ಶ್ರೀಮದ್ರಾಮಾಯಣವು [ಸರ್ಗ ೪೬. ರ ಮಧ್ಯದಲ್ಲಿ ತನ್ನ ಶತ್ರುಗಳಾದ ರಾಮಲಕ್ಷಣರು ಹತರಾದರೆಂದು ಕೇ ಳಿದೊಡನೆಸಂತೆ Jಷವನ್ನು ತಡೆಯಲಾರದೆ,ಜಗ್ಗನೆ ಆಸನದಿಂದ ಮೇಲೆದ್ದು ಮುಂದೆ ಬಂದು, ತನ್ನ ಮಗನಾದ ಇಂದ್ರಜಿತ್ತನ್ನು ತನ್ನ ಎರಡು ಕೈಗಳಿಂ ದಲೂ ಆಲಿಂಗಿಸಿಕೊಂಡು, ಉಕ್ಕಿಬರುವ ಸಂತೋಷದಿಂದ ಆತನ ತಲೆಯ ನಾ ಫಾಣಿಸಿ, “ಎಲೈ ವತ್ರನೆ' ನೀನು ಆ ರಾಮಲಕ್ಷ್ಮಣರನ್ನು ಕೊಂ ದಬಗೆಯೆನು?” ಎಂದು ಕೇಳಿದನು. ಆಗ ಇಂದ್ರಜಿತ್ತು ತನ್ನ ತಂದೆಯಾದ ರಾವಣನ ಮುಂದೆ, ತಾನು ರಾತ್ರಿಯುದ್ಧದಲ್ಲಿ ರಾಮಲಕ್ಷ್ಮಣರನ್ನು ನಾ ಗಪಾಶದಿಂದ ಕಟ್ಟಿಕೆಡಹಿದ ಕ್ರಮಗಳೆಲ್ಲವನ್ನೂ ಇದ್ದುದಿದ್ಯಂತೆ ಯಧಾಸ್ಥಿ ತವಾಗಿ ತಿಳಿಸಿದನು ಆಗ ರಾವಣನು ಮಹಾರಥನಾದ ಇಂದ್ರಜಿತ್ತಿನ ಮಾ ತನ್ನು ಕೇಳಿ, ಮಿತಿಮೀರಿದ ಸಂತೋಷದಿಂದ ಇದುವರೆಗೂ ತನಗೆ ರಾಮನ ವಿಷಯವಾಗಿ ಮನಸ್ಸಿನಲ್ಲಿದ್ದ ಭಯವನ್ನು ನಿಶೇಷವಾಗಿ ಬಿಟ್ಟು, ತ ಇನ್ನು ಕೃತಾರ್ಥನನ್ನಾಗಿ ಭಾವಿಸಿಕೊಂಡು, ಬಾರಿಬಾರಿಗೂ ತನ್ನ ಮಗನ ಪ ರಾಕ್ರಮವನ್ನೆತ್ತಿ ಕೊಂಡಾಡುತಿದ್ದನು ಇಲ್ಲಿಗೆ ನಾಲ್ವತ್ತಾರನೆಯಸರ್ಗವು. ( ರಾವಣಾಜ್ಞೆಯಿಂದ ರಾಕ್ಷಸನ್ನಿಯರು ಸೀತೆಯ 1 ನ್ನು ಪುಷ್ಪಕವಿ ಯಾವದಮೇಲೇರಿಸಿದುದ್ಧಭೂಮಿ, ? 1 ಗೆ ಕರೆತಂದು, ನಾಗಪಾಶಬದ್ಧರಾಗಿ ಬಿದ್ದಿದ್ದ ರಾ ಮಲಕ್ಷ್ಮಣರನ್ನು ತೋರಿಸಿದುದು ° ) ಹೀಗೆ ರಾವಣಪುತ್ರನಾದ ಇಂದ್ರಜಿತ್ತು ರಾಮಲಕ್ಷ್ಮಣರನ್ನು ಜಯಿಸಿ ದುದರಿಂದ ತಾನು ಕೃತಾರ್ಥನೆಂದು ಭಾವಿಸಿ, ಹಿಂತಿರುಗಿ ಲಂಕೆಗೆ ಹೋದ ಮೇಲೆ, ಇತ್ತಲಾಗಿ ಹನುಮಂತನೂ, ಅಂಗದನೂ, ನೀಲನೂ, ಸುಷೇಣ ನೋ, ಕುಮುದನೂ, ನಲನೂ, ಗವಾಕ್ಷನ್ನೂ, ಗವಯನೂ, ಶರಭನೂ, ಜಾಲ ಬವಂತನೂ, ಗಂಧಮಾದನನೂ, ಋಷಭಸ್ಕಂಧನೂ, ರಂಭಾ, ಶಶವಲಿ, ಪೃಥು, ಮೊದಲಾದ ಅನೇಕ ವಾನರಸಿಂಹರು ದು:ಖಿತರಾಗಿ,ರಾಮನಸುತ್ತ ಲೂ ಸೇರಿನಿಂತು ಅವರಿಬ್ಬರನ್ನೂ ರಕ್ಷಿಸುತಿದ್ದರು. ಇತರ ವಾನರಯೋಧ ಪತಿಗಳು ತಮ್ಮ ತಮ್ಮ ಸೇವೆಗಳನ್ನು ವ್ಯೂಹಗಳಾಗಿ ಕಟ್ಟಿ, ನಾನಾಕಡೆಗಳ ಕ್ಲಿಯೂ ಎಚ್ಚರಿಕೆಯಿಂದ ನೋಡುತ್ತ,ದೊಡ್ಡ ದೊಡ್ಡ ಮರಗಳನ್ನು ಕೈಯ