ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೨ ಶ್ರೀಮದ್ರಾಮಾಯಣವು - [ಸರ್ಗ ೪೮. ಸಾಮಾಜ್ಯದಲ್ಲಿ ಅಭಿಷಿಕ್ಯರಾಗುವರೆಂದು ನಾನು ಚೆನ್ನಾಗಿ ಕೇಳಿಬಲ್ಲೆ ನು, ಇವೆಲ್ಲವೂ ನನ್ನಲ್ಲಿ ಮಾತ್ರ ನಿಷ್ಪಲಗಳಾದುದೇಕೆ' ಹಾದೈವವೆ ' ಲೋಕ ದಲ್ಲಿ ಮಂದಭಾಗ್ಯಯರಾದ ಸ್ತ್ರೀಯರು ಯಾವ ದುರ್ಲಕ್ಷಣಗಳಿದ್ದರೆ ವೈ ಧವ್ಯವನ್ನು ಹೊಂದುವರೋ, ಅಂತಹ ದುರ್ಲಕ್ಷಣಗಳು ನನ್ನ ದೇಹದಲ್ಲಿ ಎಲ್ಲಿ ಹುಡುಕಿದರೂ ಸ್ವಲ್ಪ ಮಾತ್ರವೂ ಕಾಣುವುದಿಲ್ಲ. ಆದುದರಿಂದ ಈಗ ನನ್ನಲ್ಲಿ ಕಾಣುವ ಶುಭಲಕ್ಷಣಗಳೂ ನಿಷ್ಪಲಗಳೆಂದೇ ಎಣಿಸಬೇಕಾಯಿ ತಲ್ಲವೆ? ಧ್ವಜಕುಲಿಶಾದಿಶುಭಲಕ್ಷಣಗಳೊಡನೆ ಸ್ತ್ರೀಯರ ದೇಹದಲ್ಲಿ ಕಾಣು ವ ಪದ್ಯ ರೇಖೆಗಳು, ತಮ್ಮ ಹೆಸರಿಗೆ ತಕ್ಕಂತೆ ಅವರ ದೇಹದಲ್ಲಿ ಪದ್ಮಯ « (ಭಾಗ್ಯಲಕ್ಷ್ಮಿಯನ್ನೆಲ್ಲ ನೆಲೆಗೊಳಿಸುವುವೆಂದು ಕ್ಷಣಶಾಸ್ತ್ರಗಳೆಲ್ಲವೂ ಹೇಳುವುವು ಈಗ ರಾಮನು ಹತನಾದುದರಿಂದ ನನ್ನಲ್ಲಿಮಾತ್ರ ಆ ಶಾಸ್ತ್ರ ವಚನಗಳೂ ಅಸತ್ಯವೆನಿಸಿಕೊಂಡುವು ನನ್ನ ಕ್ಲಿಯಾದರೋ ಸಾಮುದ್ರಿಕ ಶಾಸೊಕ್ಕಗಳಾದ ಯಾವ ಲಕ್ಷಣಗಳಿಗೂ ಸ್ವಲ್ಪವಾದರೂ ನ್ಯೂನತೆಯಿ ಲ್ಲ ನನ್ನ ತಲೆಕೂದಲುಗಳೆಲ್ಲವೂ ಸೂಕ್ಷಗಳಾಗಿಯೂ, ಸಮವಾಗಿ ಒಂದೇ ಅಳತೆಯುಳ್ಳವುಗಳಾಗಿಯೂ, ಕಪ್ಪಾಗಿಯೂ ಇರುವುವು. ನನ್ನ ಹುಬ್ಬುಗ ಳೆರಡೂ ಒಂದಕ್ಕೊಂದು ಕೂಡಿರದೆ ಪ್ರತ್ಯೇಕವಾಗಿರುವುವು. * ನನ್ನ ಮೊಳ ಕಾಲುಗಳೆರಡೂ ಸ್ವಲ್ಪವಾದರೂ ಕೂದಲಿಲ್ಲದೆ ದುಂಡಗಿರುವುದು ನನ್ನ ಹಲ್ಲುಗಳೆಲ್ಲವೂ ದಟ್ಟವಾಗಿ ಒಂದಕ್ಕೊಂದು ಸೇರಿರುವುದೇ ಹೊರತು, ನಡು ನಡುವೆ ಸಂದುಬಿಟ್ಟು ವಿರಳವಾಗಿಲ್ಲ' ಕಣ್ಣುಗಳಿಗೆ ಸಮೀಪವಾದ ನನ್ನ ಹಣೆ ಯಪಾರ್ಶ್ವವೂ, ನನ್ನ ಕಣ್ಣುಗಳೂ, ನನ್ನ ಕೈ ಕಾಲುಗಳೂ, ನನ್ನ ಹಿಮ್ಮಡಿ ಗಳೂ, ನನ್ನ ತೊಡೆಗಳ ಲಕ್ಷಣಾನುಸಾರವಾಗಿ ಉಬ್ಬಿರುವುವು + ನನ್ನ ಬೆರ ಭುಗಳೆಲ್ಲವೂ ದುಂಡಗಿರುವ ಉಗುರುಗಳಿಂದ ಕೂಡಿ, ನುಣುಪಾಗಿ, ಅವ ಯವಸನ್ನಿ ವೇಶಕ್ಕೆ ತಕ್ಕ ಸಮಪ್ರಮಾಣವುಳ್ಳವುಗಳಾಗಿರುವುವು ನನ್ನ ಸ್ವ

  • ಇಲ್ಲಿ 'ರೋಮಹೀನೇ ಶುಭೇ ಸ್ನಿಗೇ ಯಜೃಂಭೇ ಕ್ರಮವರ್ತುಲೇ 1 ಸಾ ರಾಜಪ ಭವತಿ ವಿಸಿರೇ ಸುಮನೋಹರೇ” ಎಂದು ಸ್ಮಾಂದವಚನವು

↑ ಇಲ್ಲಿ “ಸ್ಮಗ್ಲಾಸ್‌ಮುನ್ನ ಶಾಸ್ತತ್ರ ವೃತ್ತಾ: ಪಾದನಖಾ ಶುಭಾ...!” ಎಂ ದು ಸ್ಮಾಂದವಚನವು