ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೭ ಸರ್ಗ ೪೮.] ಯುದ್ಧಕಾಂಡವು. ಸುವುದಕ್ಕೆ ತಕ್ಕ ನಿಯಾಮಕರಿಲ್ಲದುದಕ್ಕಾಗಿ, ಹಿಂದುಮುಂದು ತೋರದೆ ತತ್ತಳಿಸುತಿದ್ದುವು. ಈಗ ಈವಾನರಸೇನೆಯ ಸ್ಥಿತಿಯು ಹಾಗಿಲ್ಲ' ಈ ಸೈನಿಕ ರು, ಮನಸ್ಸಿನಲ್ಲಿಭಯಸಂಭ್ರಮಗಳೊಂದೂ ಇಲ್ಲಿದೆ, ತಮ್ಮ ಮಹೊತ್ಸಾ ಹವನ್ನೂ ಬಿಡದೆ, ಈಗ ನಾನು ನಿನಗೆ ಯಾರನ್ನು ಬದುಕಿರುವರೆಂದು ದೃಢ ವಾಗಿ ತಿಳಿಸುತ್ತಿರುವೆನೋ ಆ ರಾಮಲಕ್ಷ್ಮಣರಿಬ್ಬರನ್ನೂ ಸಂತೋಷ ದಿಂದಲೂ ಎಚ್ಚರಿಕೆಯಿಂದಲೂ ರಕ್ಷಿಸುತ್ತಿರುವರು. ಹೀಗೆ ಸ್ಪಷ್ಟವಾಗಿ ತಿಳಿದುಬರುವ ಈ ಚಿತ್ರಗಳಿಂದ, ಈ ಸಹೋದರರಿಬ್ಬರೂ ಬದುಕಿರುವ ರೆಂದು ನೀನು ದೃಢವಾಗಿ ನಂಬಬಹುದು ನೀನು ಅವರನ್ನು ಪ್ರಾಣದೊಡ ನೆ ಮಲಗಿರುವಂತೆಯೇ ಭಾವಿಸಿ ಚೆನ್ನಾಗಿ ನೋಡು ಎಲೆ ಸೀತೆ ನಿನ್ನಲ್ಲಿರುವ ಸ್ನೇಹದಿಂದಲೇ ನಾನು ಇಷ್ಟು ದೂರದವರೆಗೆ ಹೇಳುತ್ತಿರುವೆನು, ಇದುವರೆ ಗೋ ಸುಳ್ಳೆಂಬುದು ನನ್ನ ಬಾಯಿಂದ ಹೊರಟುದಿಲ್ಲ ಮುಂದೆಯೂ ಯಾ ವಾಗಲೂ ಹೊರಡುವ ಸಂಭವವಿಲ್ಲ ನೀನು ನಿನ್ನ ದೃಢವಾದ ಪಾತಿವ್ರತ್ಯ ದಿಂದ ಸಮಸ್ಯಜನಗಳ ಮನಸ್ಸಿಗೂ ಉಲ್ಲಾಸವನ್ನು ಂಟುಮಾಡುವ ಸು ಸ್ವಭಾವವುಳ್ಳವಳಾದುದರಿಂದಲೇ ನನಗೂ ನಿನ್ನಲ್ಲಿ ಮನಸ್ಸು ನಟ್ಟು ಹೋ ಗಿರುವುದು ಯುದ್ಧದಲ್ಲಿ ದೇವೇಂದ್ರನೊಡಗೂಡಿ,ದೇವಾಸುರರೇ ಬಂದರೂ ಈ ರಾಮಲಕ್ಷ್ಮಣರನ್ನು ಗೆಲ್ಲುವುದು ಸಾಧ್ಯವಲ್ಲ. ಇವರಿಬ್ಬರೂ ಈಗ ಬ ದುಕಿರುವುದಕ್ಕೆ ಸೂಚಕಗಳಾದ ಚಿಹ್ನಗಳೂ ಚೆನ್ನಾಗಿ ಕಾಣುತ್ತಿರುವುವು. ಇವುಗಳನ್ನು ನೋಡಿಯೇ ನಾನು ನಿನಗೆ ನಿರ್ಧರವಾಗಿ ಹೇಳುತ್ತಿರುವೆನು ಎಲೆ ಸೀತೆ' ಮತ್ತೊಂದು ಮುಖ್ಯಸೂಚನೆಯುಂಟು ಅದನ್ನೂ ನೀನು ಚೆನ್ನಾಗಿಗ ಮನಿಸಿನೋಡು ಇವರಿಬ್ಬರೂ ಮೂರ್ಛಿತರಾಗಿದ್ದರೂ,ಇವರಮುಖದ ಕಳೆ ಯು ಸ್ವಲ್ಪವಾದರೂ ಕಂದದಿರುವುದು ನೋಡು ಆಯುಸ್ಸುತೀರಿ ಪ್ರಾ ಣವನ್ನು ಬಿಟ್ಟವರ ಮುಖವು, ಅಕ್ಷಣವೇ ಬಹಳವಿಕಾರವನ್ನು ಹೊಂದುವು ದು ಇವರ ಮುಖದಲ್ಲಿ ಅಂತಹ ವಿಕಾರವೇನೂ ಕಾಣುವುದಿಲ್ಲ. ಆದುದರಿಂ ದ ಎಲೆ ಸೀತೆ' ನೀನು ಈ ರಾಮಲಕ್ಷ್ಮಣರ ವಿಷಯವಾದ ನಿನ್ನ ದುಃಖ ವನ್ನು ಬಿಟ್ಟುಬಿಡು, ಅವರು ಹತರಾದರೆಂಬ ಭ್ರಾಂತಿಯನ್ನೂ ಬಿಡು'ಮನಸ್ಸಿ ನಲ್ಲಿ ಧೈಲ್ಯವನ್ನು ಹೊಂದು' ಈಮಹಾತ್ಮರು ಬದುಕಿರುವುದೇನೂ ಆಶಕ್ಯವ g"ಎಂದಳು ದೇವಕಸ್ಥೆಯಂತಿದ್ದ ಆ ಸೀತೆಯು ತ್ರಿಜಟೆಯು ಹೇಳಿದ ಈಸ