ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೩ ಶ್ರೀಮದ್ರಾಮಾಯಣ [ಸರ್ಗ, ೪೯. ಮಾಧಾನವಾಕ್ಯವನ್ನು ಕೇಳಿ, ಅವಳಿಗೆ ಕೈಮುಗಿಯುತ್ತ ಅಮ್ಮ ತ್ರಿಜಟೆ ! ನೀನು ಹೇಳಿದಂತೆಯೇ ಅವರು ಕ್ಷೇಮದಿಂದ ಬದುಕಿರಲಿ”ಎಂದಳು ಆಗಲೇ ತ್ರಿಜಟೆಯು ಮನೋವೇಗವುಳ್ಳ ಆ ಪುಷ್ಪಕವಿಮಾನವನ್ನು ಹಿಂತಿರುಗಿಸಿ, ದುಃಖಿತಳಾದ ಸೀತೆಯನ್ನು ಸಮಾಧಾನಪಡಿಸುತ್ತ ಲಂಕಾಪುರಿಗೆ ಕರೆತ ದಳು, ಅಲ್ಲಿ ರಾಕ್ಷಸಸ್ತಿಯರೆಲ್ಲರೂ ಸೀತೆಯನ್ನೂ , ತ್ರಿಜಟೆಯನ್ನೂ ಪುಷ್ಟಕದಿಂದಿಳಿಸಿ ಅಶೋಕವನಕ್ಕೆ ಸೇರಿಸಿದರು ಅನೇಕ ವೃಕ್ಷಸಮೂಹಗ ಳಿಂದ ಕೂಡಿದುದಾಗಿಯೂ, ರಾವಣನಿಗೆ ಮುಖ್ಯವಿಹಾರೋದ್ಯಾನವಾಗಿ ಯೂ ಇದ್ದ ಅಶೋಕವನವನ್ನು ಪ್ರವೇಶಿಸಿದಮೇಲೆಯೂ ಸೀತೆಯು, ತಾ ನು ಆ ರಾಜಪುತ್ರರನ್ನು ನೋಡಿ ಬಂದ ರೀತಿಯನ್ನೆ ಮನಸ್ಸಿನಲ್ಲಿ ಚಿಂತಿಸು ತ್ಯ, ಬಹಳವಾಗಿ ದುಃಖಪಡುತಿದ್ದಳು ಇಲ್ಲಿಗೆ ನಾಲ್ವತ್ತೆಂಟನೆಯಸರ್ಗವು -•~~ - | | ರಾಮನು ಸ್ವಲ್ಪವಾಗಿ ಮರ್ಛ ತಿಳಿದೆದ್ದು, ಲ ಕ್ಷಣವನ್ನು ಕುರಿತು ದುಃಖಿಸಿದುದು, ಮತ್ತು ಸು | ಗ್ರೀವನನ್ನು ಕಿಮ್ಮಿಂದೆಗೆ ಹಿಂತಿರುಗಿ ಹೋಗುವಂತೆ ಹೇಳಿದುದು, ವಿಭೀಷಣನು ವಾನರಸೈನ್ಯಕ್ಕೆ ಧೈಯ್ಯ ವನ್ನು ಹೇಳಿ ನಿಲ್ಲಿಸಿ, ತಿರುಗಿ ರಾಮನ ಬಳಿಗೆ ° ಬಂದುದು ಭಯಂಕರಗಳಾದ ನಾಗಪಾಶಗಳಲ್ಲಿ ಕಟ್ಟುಬಿದ್ದು, ಹಾವುಗಳಂತ ನಿ ಟ್ಟುಸಿರುಬಿಡುತ್ತ, ರಕ್ತದಿಂದ ತೊಯ್ಯ, ನೆಲದಲ್ಲಿ ಮಲಗಿದ್ದ ಮಹಾತ್ಮ ರಾದ ದಶರಥಕುಮಾರರನ್ನು , ಸುಗ್ರೀವನೇ ಮೊದಲಾಗಿ ಮಹಾಬಲಶಾಲಿಗ ಳಾದ ವಾನರೋತ್ತಮರೆಲ್ಲರೂ ಸುತ್ತಿನಿಂತು, ದುಃಖದಿಂದ ಕೊರಗುತಿ ಡೈರು, ಇಷ್ಟರಲ್ಲಿ ವಿಗ್ಯವಂತನಾದ ರಾಮನು ನಾಗಪಾಶದಿಂದ ಬದ್ಧ ನಾಗಿದ್ದರೂ, ಧೀರನಾದುದರಿಂದ ಸ್ವಲ್ಪ ಕಾಲದಲ್ಲಿಯೇ ' ಮೂರ್ಛತಿಳಿದು ಚೇತರಿಸಿಕೊಂಡನು. ಹೀಗೆ ಮೂರ್ಛತಿಳಿದ ರಾಮನು, ತನ್ನ ಪಕ್ಕದಲ್ಲಿ ಬಾಣದಿಂದ ನಾಟಲ್ಪಟ್ಟಮೈಯುಳ್ಳವನಾಗಿ, ರಕ್ತದಿಂದ ತೊಯ್ದು, ಸಂ ಕಟದಿಂದ ಕಂಡಿದ ಮುಖವುಳ್ಳ ತನ್ನ ತಮ್ಮನಾದ ಲಕ್ಷ್ಮಣನನ್ನು ನೋ ಡಿ, ದು:ಖವನ್ನು ತಡೆಯಲಾರದೆ ವಿಲಪಿಸುವನು. ಹಾ ಕಷ್ಟವೆ ! ನನ್ನ ಪ್ರಿ