ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೪೯.] ಯುದ್ದ ಕಾಂಡವು. ೨೩೩ ಯಸಹೋದರನಾದ ಲಕ್ಷಣನು ಹೀಗೆ ಯುದ್ಧದಲ್ಲಿ ಶತ್ರುಗಳಿಂದ ನಿರ್ಜಿ ತನಾಗಿ, ನೆಲದಲ್ಲಿ ಮಲಗಿರುವುದನ್ನು ನಾನು ಕಣ್ಣಾರೆ ನೋಡುತ್ತಿರುವೆನ ಬ್ಲಾ' ಇನ್ನು ನನಗೆ ಸೀತೆಯಿಂದಾಗಬೇ ಕಾದುದೇನು? ನನಗೆ ಪ್ರಾಣಗಳಿ ದ್ರೂ ಫಲವೇನು? ಈ ಭೂಲೋಕದಲ್ಲಿ ಹುಡುಕಿದಪಕ್ಷದಲ್ಲಿ, ಸೀತೆಗೆ ಸಾಟಿ ಯಾದ ಪತ್ನಿ ಯನ್ನು ಹೇಗಾದರೂ ಸಂಪಾದಿಸಿಕೊಳ್ಳಬಹುದು ಆದರೆ ನನಗೆ ಪ್ರಾಣಸಹಾಯಕನಾಗಿಯೂ, ಯುದ್ಧಸಮರ್ಥನಾಗಿಯೂ ಇರು ವ, ಈ ಲಕ್ಷಣನಂತಕ ಪ್ರಿಯಸಹೋದರನನ್ನು ಪಡೆ ಯುವುದು ಸಾಧ್ಯವೆ ? ಎಂದಿಗೂ ಸಾ ಧ್ಯವಲ್ಲ ' ಸುಮಿತ್ರಾನಂದವರ್ಧನನಾದ ಈ ಲಕ್ಷಣನು ಪ್ರಾಣವನ್ನು ಬಿಟ್ಟಿರುವುದೇ ನಿಜವಾದ ಪಕ್ಷದಲ್ಲಿ, ನಾನೂ ಈಗ ವಾನರರ ಕಣ್ಣಿದಿರಾಗಿಯೇ ಗ್ರಾಣಗಳನ್ನು ಬಿಟ್ಟು ಬಿಡದೆ ರು ಹಾ ' ಮುಂದೆ ಗತಿ ಯೇನು? ನಾನು ಅಯೋಧ್ಯೆಗೆ ಹೋಗಿ ನನ್ನ ತಾಯಿಯಾದ ಕಸಿಗೆ ಏ ನೆಂದು ಪ್ರತ್ಯುತ್ತರವನ್ನು ಕೊಡಲಿ' ಕೈಕೇಯಿಗಾದರೂ ಏನೆಂದು ಸಮಾ ಧಾನವನ್ನು ಹೇಳಲಿ' ಲಕ್ಷಣವಿಲ್ಲದೆ ನಾನು ಮಾತ್ರವೇ ಅಲ್ಲಿಗೆ ಹೋದ ಪಕ್ಷದಲ್ಲಿ, ಅಲ್ಲಿ ತನ್ನ ಪ್ರಿಯಪತ್ರವನ್ನು ಕಣ್ಣಾರೆ ನೋಡಬೇಕೆಂದು ತತ್ತಳಿ ಸಿ ತವಕಿಸುತ್ತಿರುವ ಆ ಸುಮಿತ್ರಾದೇವಿಯ, ತಮ್ಮನನ್ನ ಗಲಿ ಬಂದ ನನ್ನ ನ್ನು ನೋಡಿ, ನು ೧ದ ಈ ೩೦ಪ್ರಿಯವಾರ್ತೆಯನ್ನೂ ಕೇಳಿದಮೇಲೆ, ಕರುವ ನ್ನು ಕಳೆದುಕೊಂಡ ಹಸುವಿನಂತೆ ದುಃಖದಿಂದ ತತ್ತಳಿಸುತ್ತ ಕುರರಿಯಂ ತೆ ಕೂಗತೊಡಗಿದರೆ, ಅವಳನ್ನು ನಾನು ಯಾವ ವಿಧದಿಂದ ಸಮಾಧಾನಪಡಿ ಸಲಿ' ಶತ್ರುಘ್ನು ಸಹಾಯಕನಾದ ಭರತನಿಗೆ ನಾನೇನೆಂದು ಹೇಳಲಿ ! ನ ನೊಡನೆ ಕಾಡಿಗೆ ಬಂದ ಲಕ್ಷ ಣನನ್ನು ಬಿಟ್ಟು, ಈಗ ನಾನೊಬ್ಬನೇ ಹಿಂತಿ ರುಗಿ ಅಯೋಧ್ಯೆಗೆ ಹೋದರೆ, ಸುಮಿತ್ರೆಯು ನನ್ನನ್ನು ನೋಡಿ (ರಾಮಾ ! ನೀನು ನಿನ್ನೊಡನೆ ಲಕ್ಷಣನನ್ನೂ ಕಾಡಿಗೆ ಕರೆದುಕೊಂಡು ಹೋದವನಲ್ಲ. ವೆ? ಹಿಂತಿರುಗಿ ಬರುವಾಗ ಅವನನ್ನು ಬಿಟ್ಟು ನೀನು ಮಾತ್ರವೇ ಬಂದೆಯಾ? ಎಂದು ನನ್ನನ್ನು ನಿಂದಿಸದೆ ಬಿಡುವಳಿ ? ಆಯೋ' ಅದನ್ನು ಕೇಳಿ ನಾನು ಹೇಗೆ ಸಹಿಸಲಿ? ಆ ಮಾತನ್ನು ನಾನು ಕೇಳಲಾರೆನು ಇನ್ನು ಮೇಲೆ ನನಗೆ ಬದುಕಿನಲ್ಲಿಯ ಆಸೆಯಿಲ್ಲ, ಇಲ್ಲಿಯೇ ನಾನೂ ಪ್ರಾಣವನ್ನು ಕಳೆದುಕೊ ಳ್ಳುವೆನು? ಹಾ' ಲಕ್ಷ ಣನನ್ನು ಕಾಡಿಗೆ ಕರೆದುಕೊಂಡು ಬರುವ ದುಷ್ಕಾ 150