ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮೦ ಶ್ರೀಮದ್ರಾಮಾಯಣವು [ಸರ್ಗ, ೪೯. ಗಳನ್ನು ನಡೆಸಿದರು. ಹಾಗೆಯೇ ಈ ಗವಯನೂ, ಗವಾಕ್ಷನೂ, ಶರಭ ಗಜನೂ, ಇನ್ನೂ ಇತರ ವಾನರವೀರರೆಲ್ಲರೂ, ನನಗಾಗಿ ತಮ್ಮ ಪ್ರಾಣಗ ಳನ್ನೂ ಲಕ್ಷಮಾಡದೆ, ಯುದ್ಧಮಾಡಿದರು ಸುಗ್ರೀವಾ! ಯಾರು ಎಷ್ಟು ಪ್ರಯತ್ನ ಮಾಡಿದರೇನು ? ದೈವವನ್ನತಿಕ್ರಮಿಸಬೇಕೆಂದರೆ ಮನುಷ್ಯರಿಗೆ ಸಾಧ್ಯವೆ? ಎಂದಿಗೂ ಸಾಧ್ಯವಲ್ಲ ! ಎಲೆ ಪರಂತಪನೆ ಮನಃಪೂಕವಾಗಿ ಶ್ರೇಯಸ್ಸನ್ನು ಕೋರುವ ಆಪ್ತಮಿತ್ರನಿಂದ, ಎಷ್ಟು ದೂರದವರಗೆ ಸಹಾ ಯವನ್ನು ಮಾಡಲು ಸಾಧ್ಯವೋ, ಅಷ್ಟರವರೆಗೂ, ನೀನೂ ನನ್ನ ವಿಷಯದ ಈ ನಿಧ್ವಂಚನೆಯಾಗಿ ಸಹಾಯವನ್ನು ಮಾಡಿಬಿಟ್ಟಿರುವೆ ! ನೀನು ಧರ್ಮಜ್ಯ ನಾಗಿಯೂ, ಅಧರ್ಮಭೀರುವಾಗಿಯೂ ಇದ್ದು,ನನಗೆ ಮಾಡಿದಸಹಾಯಕ್ಕಾ ಗಿ ನಾನು ಎಷ್ಟು ಕೃತಜ್ಞತೆ ಮನ್ನು ತೋರಿಸಿದರೂ ಸಾಲದು ” ಎಂದು ಹೇಳಿ ಆಮೇಲೆ ಅಲ್ಲಿ ಸಮಸ್ಯವಾನರವೀರರನ್ನೂ ನೋಡಿ, (ಎಲೆ ವಾನರೋ ತೃಮರೆ ! ನೀವು ನನ್ನ ವಿಷಯದಲ್ಲಿ ನಡೆಸಬೇಕಾದ ಮಿತ್ರಕಾರವನ್ನು ಸಿ ರ್ವಂಚನೆಯಾಗಿ ನಡೆಸಿಬಿಟ್ಟಿರುವಿರಿ ಇನ್ನು ನೀವು ಯಥೇಷ್ಯವಾಗಿ ನಿಮ್ಮ ನಿಮ್ಮ ನಿವಾಸಗಳಿಗೆ ಹಿಂತಿರುಗಬಹುದು ನಿಮಗೆ ನಾನು ಅನುಚ್ಛೆಯನ್ನು ಕೊಟ್ಟಿರುವೆನು” ಎಂದನು ಹೀಗೆ ರಾಮನು ದುಃಖದಿಂದ ಹೇಳಿದ ಮಾತನ್ನು ಕೇಳಿ, ಅಲ್ಲಿದ್ದ ಸಮಸ್ಯೆ ವಾನರರೂ, ದುಃಖದಿಂದ ಕೆಂಪೇರಿದ ಕಣ್ಣುಳ್ಳವ ರಾಗಿ ಕಣ್ಣೀರುಬಿಡುತಿದ್ದರು ಇಷ್ಟರಲ್ಲಿ ವಿಭೀಷಣನು ಗದಾಪಾಣಿಯಾಗಿ ಅಲ್ಲಲ್ಲಿ ಓಡಿಹೋಗುತ್ತಿದ್ದ ವಾನರಸೈನ್ಯಗಳೆಲ್ಲವನ್ನೂ ತಡೆದು ನಿಲ್ಲಿಸಿ, ವೇಗದಿಂ ದ ಹಿಂತಿರುಗಿ ರಾಮನಿದ್ದ ಸ್ಥಳಕ್ಕೆ ಬಂದನು. ಕಾಡಿಗೆಯ ರಾತಿಯಂತೆ ಕಪ್ಪಾದ ಮೈಯುಳ್ಳ ವಿಭೀಷಣನು ಗದೆಯನ್ನು ಕೈಯಲ್ಲಿ ಹಿಡಿದು ವೇಗದಿಂ ದ ಬರುವುದನ್ನು ನೋಡಿ, ರಾಮಲಕ್ಷ್ಮಣರನ್ನು ಸುತ್ತಿನಿಂತಿದ್ದ ವಾನರರೆ ಲ್ಲರೂ, ಅವನೇ ಇಂದ್ರಜಿತ್ತೆಂದು ಭ್ರಮಿಸಿ, ಭಯದಿಂದ ಪಲಾಯನಮಾ ಡುವುದಕ್ಕೆ ತೊಡಗಿದರು ವಿಭೀಷಣನಾದರೋ, ಇತ್ತಲಾಗಿ ಪ್ರಜ್ಞೆಯಿಲ್ಲದೆ ಕೊಳೆಮುಚ್ಚಿದ ಮೈಯುಳ್ಳವರಾಗಿ, ನಿಶ್ಲೇಷ್ಯನಾಗಿ, ಶರತಲ್ಪದಲ್ಲಿ ಮಲ ಗಿದ್ದ ರಾಮಕ್ಷರನ್ನು ನೋಡಬೇಕೆಂಬ ಆತ್ಯಾತುರದಿಂದ ಬರುತಿದ್ದ ನು. ಆ ವಾನರರೆಲ್ಲರೂ, ಅಲ್ಲಿ ರಾಮಲಕ್ಷ್ಮಣರು ಅನುಭವಿಸುತ್ತಿದ್ದ ದುರ ವಸ್ಥೆಯನ್ನೂ ,ತಮ್ಮ ಕಡಗೆ ಬರುತಿದ್ದ ವಿಭೀಷಣನ ಆತುರವನ್ನೂ ನೋಡಿ