ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೮೨ ಶ್ರೀಮದ್ರಾಮಾಯಣವು [ಸರ್ಗ ೫೦. ಣ್ಣುಗಳನ್ನರಳಿಸುತ್ತ, ತಾವುತಾವು ಕೈಯಲ್ಲಿ ಹಿಡಿದಿದ್ದ ಕಲ್ಲುಮರಗಳೇ ಮೊ ದಲಾದ ಯುದ್ಧ ಸಾಧನಗಳನ್ನೂ ಕೆಳಕ್ಕೆ ಬಿಸುಟು, ದಿಕ್ಕು ದಿಕ್ಕಿಗೆ ಪಲಾಯ ನ ಮಾಡುತ್ತಿರುವರು ನೋಡು ! ಇದರಲ್ಲಿ ಒಬ್ಬರನ್ನೊಬ್ಬರು ನೋಡಿಯೂ ನಾಚಿಕೆಯಿಲ್ಲದೆ, ಹಿಂತಿರುಗಿಯೂ ನೋಡದೆ, ತಮ್ಮ ಪ್ರಾಣಸಂರಕ್ಷಣೆ ಯಲ್ಲಿರುವ ಆತುರಕ್ಕಾಗಿ ಒಬ್ಬರನೊಬ್ಬರು ತಳ್ಳಿಕೊಂಡು, ವೇಗದಿಂದೂ ಡುವುದನ್ನು ನೋಡು ' ಅಲ್ಲಲ್ಲಿ ನೆಲದಮೇಲೆ ಬಿದ್ದಿರುವವರನ್ನೂ ಲಕ್ಷಮಾ ಡದೆ, ಅವರ ಮೇಲೆ ಕಾಲಿಟ್ಟು ದಾಟಿಹೋಗುತ್ತಿರುವರು ನೋಡು !” ಎಂದನು ಇಷ್ಟರಲ್ಲಿ ವೀರನಾದ ವಿಭೀಷಣನು ಗದಾಪಾಣಿಯಾಗಿ ಬಂದು ಸುಗ್ರೀವನ ನ್ಯಾಶೀರ್ವದಿಸಿ ರಾಮವನ್ನು ನೋಡಿದನು. ಆಗ ಸುಗ್ರೀವನು ವಾನರರೆಲ್ಲರೂ ವಿಭೀಷಣನನ್ನು ನೋಡಿಯೇ ಭಯಪಟ್ಟು ಪಲಾಯನಮಾ ಡುವರೆಂದು ತಿಳಿದು, ತನ್ನ ಸಮೀಪದಲ್ಲಿದ್ದ ಭಲ್ಲೂಕರಾಜನಾದ ಜಾಂಬ ವಂತನನ್ನು ನೋಡಿ “ಎಲೈ ಆರನೆ' ಆದೋ' ನಮ್ಮ ವಾನರಸೈನ್ಯಗಳೆಲ್ಲವೂ ಈ ವಿಭೀಷಣನು ಬಂದುದನ್ನು ನೋಡಿ, ಇಂದ್ರಜಿತ್ತೆಂಬ ಭ್ರಾಂತಿಯಿಂದ ಭಯಪಟ್ಟು ಓಡುತ್ತಿರುವರು. ನೀನು ಅವರಿಗೆ ಆ ಭಯವನ್ನು ತಪ್ಪಿಸಿ ( ಈಗ ಬಂದವನು ವಿಭೀಷಣದೇ ಹೊರತು, ಇಂದ್ರಜಿತ್ಯ” ವೆಂದು ಧೈಯ್ಯ ವನ್ನು ಹೇಳಿ ತಡೆದು ನಿಸ್ಲಿಸು” ಎಂದನು ಸುಗ್ರೀವಾಜ್ಞೆಯನ್ನು ಕೇಳಿ ದೊಡನೆ ಜಾಂಬವಂತನು ವೇಗದಿಂದೋಡಿ, ಪಲಾಯನಮಾಡುತಿದ್ದ ಆ ವಾನರರನ್ನೆಲ್ಲಾ ಅಡ್ಡಗಟ್ಟಿ ನಿಲ್ಲಿಸಿ, ಸಮಾಧಾನವನ್ನು ಹೆಳಿ ಹಿಂತಿರುಗಿಸಿದ ನು, ಆ ವಾನರರೆಲ್ಲರೂ ಜಾಂಬವಂತನ ಮಾತನ್ನು ಕೇಳಿ, ವಿಭೀಷಣದರ್ಶನ ದಿಂದ ತ ಮಗುಂಟಾ ನ ಭ ಯವನ್ನು ಬಿಟ್ಟು, ಹಿಂತಿರುಗಿ ಬಂದು ತ ತ್ಯ ಸ್ಥಳದಲ್ಲಿ ನಿಂತರು ಇತಲಾಗಿ ಧರ್ಮಾತ್ಮನಾದ ವಿಭೀಷಣರು, ರಾಮು ಲಕ್ಷಣರ ಅಂಗಾಂಗಗಳಲ್ಲಿ ಯೂ, ಬಾಣಗಳು ನಾಟಿರುವುದನ್ನು ನೋಡಿ, ವ್ಯಸನದಿಂದ ಕದಲಿದ ಇಂದ್ರಿಯಗಳುಳ್ಳವನಾದನು. ಹಾಗಿದ್ದರೂ ಅವನು ಸಮಯೋಚಿ ತಬುದ್ಧಿಯುಳ್ಳವ ನಾದುದರಿಂದ, ಥೈರಗೆಡದೆ, ಬೆರಸೆ ಯಲ್ಲಿ ನೀರನ್ನು ತಂದು, ಆ ರಾಮಲಕಣ ಕಣಗಳು, ತೊಡೆ ರು ದುಃಖದಿಂದ ಕುಗ್ಗಿದ ಮನಸ್ಸುಳ್ಳವನಾ ನಿಂತು ವಿಲಪಿಸುವರು ( ಆ ಕಾ' ಇದೆನನರ್ಥವ? ಇವರಿಬ್ಬರೂ ಎಣೆಯಿಲ್ಲದ ಬಲಪರಾಕ್ರಮವುಳ್ಳವರು ?