ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮೩ ಸರ್ಗ ೫೦. | ಯುದ್ಧಕಾಂಡವು. ಯುದ್ಧಪ್ರಿಯರು ? ಹೀಗಿದ್ದರೂ ರಾಕ್ಷಸರ ಕಪಟಿಯುದ್ಧಕ್ಕೆ ಸಿಕ್ಕಿ ಈ ದು ರವಸ್ಥೆಯನ್ನು ಹೊಂದಿರುವರಲ್ಲಾ! ಇವರಿಬ್ಬರೂ ಧರ್ಮಯುದ್ಧವನ್ನೇ ನ ಡೆಸತಕ್ಕವರೇ ಹೊರತು, ಕಪಟಯುದ್ಧಕ್ಕೆ ಎಂದಿಗೂ ಪ್ರವರ್ತಿಸುವವರ ಲ್ಲ ವೆಂಬುದನ್ನು ತಿಳಿದೇನನ್ನಣ್ಣನ ಮಗನಾದ ಇಂದ್ರಜಿತ್ತು, ರಾಕ್ಷಸರಿಗಸ ಹಜವಾದ ಕುಟಿಲಬುದ್ದಿಯನ್ನೇ ಅವಲಂಬಿಸಿ, ಕಪಟ ಯುದ್ಧವನ್ನು ಮಾಡಿ ಇವರನ್ನು ವಂಚಿಸಿಬಿಟ್ಟನು ದುಪ್ಪುತ್ರನಾಗಿಯೂ, ದುರಾತ್ಮ ನಾಗಿಯೂ ಇರುವ ಆ ಇಂತ್ರಜಿತ್ತು, ಇವರವಿಷಯದಲ್ಲಿ ಬಹಳ ಮೋಸವನ್ನು ಮಾಡಿ ದನು ಆಹಾ ' ಇವರ ಸತ್ಯಾವಯವಗಳಲ್ಲಿಯೂ ರಕ್ತವು ಸರಿಯುತ್ತಿರು ವುದು, ಸಲ್ವಾಂಗಗಳಲ್ಲಿ ಯೂ ಬಾ ಇಗಳು ನಾಟಿರುವುದರಿಂದ ನೆಲದಮೇಲೆ ಮಲಗಿರುವ ಶಲ್ಯಮಗಳಂತೆ ಕೆ ಇತ್ತಿರುವರು ನಾನು ಯಾರ ಪರಾ ಕ್ರಮದ ಬಲದಿಂದಲೇ ಪ್ರತಿಷ್ಠೆಯನ್ನು ಹೊಂದಿ ವೃದ್ಧಿಗೆ ಬರಬೇಕೆಂದು ನಂಬಿದ್ದೆನೆ , ಅಂತಹ ಪರುಷಸಿಂಹರಾದ ರಾಮಲಕ್ಷ್ಮಣರಿಬ್ಬರೂ, ತ ಮ್ಮ ದೇಹವನ್ನು ಬಿಡುವುದಕ್ಕಾಗಿ, ಈ •ರ್ಫುನಿಯನ್ನ ವಲಂಬಿಸಿರು ವರಲ್ಲಾ ಇನ್ನು ನನಗೆ ರಾಜ್ಯದಾಸಯೂ ಹೋಯಿತು' ಇನ್ನು ನನ್ನ ಕೂರಿ ಕೆಗಳೆಲ್ಲವೂ ವಿಫಲವಾದುವು ' ಇನ್ನು ನಾನು ಬದುಕಿದ್ದರೂ ಅನೇಕವಿಪತ್ತು ಗಳಿಗೆ ಗುರಿಯಾಗಬೇಕಾಗುವುದು. ನನ್ನ ಹಗೆಯಾದ ರಾವಣನೂ ತನ್ನ ಪ್ರತಿಜ್ಞೆಯನ್ನು ಮುಗಿಸಿಕೊಂಡುಬಿಟ್ಟ ನು ಅವನ ಕೋರಿಕೆಯೂ, ನೆರ ವೇರಿತು ” ಎಂದು ವಿಲಪಿಸುತಿದ್ದನು ಆಗ ವಾನರರಾಜನಾದ ಸುಗ್ರೀವನು ಎಂತಹ ವ್ಯಸನಗಳಸ್ಲಿಯೂ ಎದೆಗುಂದದ ಧೀರಸ್ವಭಾವವುಳ್ಳವನಾದುದರಿo ದ, ದುಃಖಿಸುತಿದ್ದ ವಿಭೀಷಣನನ್ನು ಆಲಿಂಗಿಸಿಕೊಂಡು, “ ಎಲೆ ಧರ್ಮ ಜ್ಞನೆ ' ದುಃಖಸಬೇಡ' ರಾಮಲಕ್ಷ್ಮಣರಿಗೆ ಅಪಾಯವೇನೂ ಇರಲಾರದು. ನಿನಗೆ ಲಂಕಾರಾಜ್ಯವು ಕೈಸೇರುವುದರಲ್ಲಿಯೂ ಸಂದೇಹವಿಲ್ಲ ಇಷ್ಟು ಮಾ ತ್ರಕ್ಕೆ ರಾವಣನೂ, ಅವನ ಮಗನಾದ ಇಂದ್ರಜಿತ್ಯ ಕೃತಕೃತ್ಯರಾದ ರಂಗಣಿಸಬೇಡ ಇಂದ್ರಜಿತ್ತಿನ ಸರ್ಪಾಸನಳು ಇವರಿಗೆ ಮರಣಾಂತವಾ ದ ಭಾದೆಯನ್ನುಂಟುಮಾಡುವುದೆಂಬ ಶಂಕೆಯನ್ನು ಬಿಡು ? ಇವರಿಬ್ಬರೂ ಕೆವಲ ಮೂರ್ಛಿತರಾಗಿರುವುದು ಮಾತ್ರವೇ ಹೊರತು ಬೇರೆಯಲ್ಲ ಇನ್ನು ಸ್ವಲ್ಪ ಕಾಲದಲ್ಲಿಯೇ ಇವರು ಮೂರ್ಛತಿಳಿದೆದ್ದು, ಯುದ್ಧದಲ್ಲಿ ರಾವಣನ