ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೪.] ಯುದ್ಧಕಾಂಡವು. ೨೦೮೭ ಅಲ್ಲಲ್ಲಿ ಸುವಾಸನೆಯುಳ್ಳ ಜೇನನ್ನು ಕುಡಿಯುವರು' ಹೀಗೆ ಸಂತೋಷದಿಂದ ದಕ್ಷಿಣಾಭಿಮುಖವಾಗಿ ನಡೆದು ಬಂದರು, ಮತ್ತು ಆ ವಾನರಸೈನ್ಯದಲ್ಲಿ, ವಿ ನೋದಾರವಾಗಿ ಫಲಪುಷ್ಪಗಳಿಂದ ತುಂಬಿದ ದೊಡ್ಡ ಮರಗಳನ್ನೇ ಕೈ ಯಿಂದ ಕಿತ್ತು ಅವುಗಳನ್ನು ಹೊತ್ತತರುವವರು ಕೆಲವರು ತಮ್ಮ ಬಲದ ಕೊಬ್ಬಿನಿಂದ ಒಬ್ಬರನ್ನೊಬ್ಬರು ಹಿಡಿದು ಮೇಲಕ್ಕೆ ಹಾಕುವವರು ಕೆಲ ವರು ' ಬಿಳುವವರನ್ನು ಕೈಯಿಂದಾತುಕೊಳ್ಳುವವರು ಕೆಲವರು ನಿಂತಿದ್ದ ವರನ್ನು ಕೆಳಕ್ಕೆ ತಳ್ಳುವವರು ಕೆಲವರು' ಹೀಗೆ ಆ ವಾನರರೆಲ್ಲರೂ ಬಹಳ ವಿ ನೋದದಿಂದ ಪ್ರಯಾಣಮಾಡಿ ಬರುತಿದ್ದರು ಮತ್ತು ಕೆಲವು ವಾನರರು ಆಗಾಗ ರಾಮನ ಸಮೀಪಕ್ಕೆ ಬಂದು “ನಾವು ಲಂಕೆಯಲ್ಲಿ ರಾವಣನನ್ನೂ. ಅಲ್ಲಿನ ಸಮಸ್ಕರಾಕ್ಷಸರನ್ನೂ ಕೊಂದೇಬರಬೇಕು” ಎಂದು ವೀರವಾದದಿಂ ದ ಗರ್ಜಿಸುತಿದ್ದರು, ವೀರನಾದ ನೀಲನೂ, ಋಷಭನೂ, ಕುಮುದನೂ, ಅನೇಕವಾನರಸಮೂಹದೊಡನೆ ಸೇನೆಗೆ ಮುಂಭಾಗದಲ್ಲಿ ಹೊರಟು, ದಾರಿ ಯನ್ನು ಶೋಧಿಸುತ್ತ ಬಂದರು ವಾನರರಾಜನಾದ ಸುಗ್ರೀವನ, ರಾಮ ನೂ, ಲಕ್ಷಣನೂ, ಬಲಾಡ್ಯರಾಗಿಯೂ, ಭಯಂಕರರಾಗಿಯೂ ಇದ್ದ ಬ ಹಳಮಂದಿ ವಾನರರೊಡನೆ ಸೇನೆಯ ಮಧ್ಯಭಾಗದಲ್ಲಿ ಬರುತಿದ್ದರು, ವೀರ ನಾದ ಶತಬಲಿಯೆಂಬ ವಾನರನು ಹತ್ತು ಕೋಟಿವಾನರಸೈನ್ಯವನ್ನು ತನ್ನ ಸಹಾಯಕ್ಕಿಟ್ಟುಕೊಂಡು ಅಲ್ಲಿನ ಸಮಸ್ಯಸೈನ್ಯಕ್ಕೂ ತಾನೇ ಮುಖ್ಯರಕ್ಷ ಕನಾಗಿ ನಿಂತಿದ್ದನು. ಕೇಸರಿಯೆಂಬ ವಾನರೋತ್ತಮನೂ, ಪನಸನೂ, ಗಜನೂ, ಬಲಾಢನಾದ ಆರ್ಕನೂ ನೂರುಕೋಟಿ ವಾನರರೊಡಗೂಡಿ, ಒಂದು ಪಕ್ಕದಲ್ಲಿ ಅ ಸೈನ್ಯವನ್ನು ರಕ್ಷಿಸುತಿದನು ಸುಷೇಣ ಜಾಂಬವಂತರಿ ಬ್ಬರೂ ಅನೇಕಭಲ್ಲೂಕಗಳೊಡನೆ ಸೇರಿ ಸುಗ್ರೀವನನ್ನು ಮುಂದಿಟ್ಟು ಕೊಂ ಡು ಆ ವಾನರಸೇನೆಯ ಹಿಂಭಾಗವನ್ನು ಕಾಯುತಿದ್ದರು. ಈ ಸಮಸ್ಯವಾ ನರಸೈನ್ಯಕ್ಕೂ ಮುಖ್ಯಾಧಿಪತಿಯಾದ ವೀರನಾದ ನೀಲನು, ಆ ಸೈನ್ಯದ ನಾ ಲ್ಕು ಕಡೆಗಳಿಗೂ ತಿರುಗುತ್ತ,ಸುತ್ತಲೂ ಎಚ್ಚರಿಕೆಯಿಂದ' ಕಾಯುತಿದ್ದನು. ದರೀಮುಖನೂ, ಪ್ರಜಂಫುನೂ, ರಂಭನೂ, ರಭಸನೂ, ಆ ಸೇನೆಯನ್ನು ಸುತ್ತಿ ಸುತ್ತಿ ಆಗಾಗ ಆ ಸೈನಿಕರನ್ನು ತ್ವರೆಪಡಿಸುತ್ತ ಬಂದರು. ಹೀಗೆ