ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೫o } ಯುದ್ದ ಕಾಂಡವು ೨೩೮೬ ದ್ರನೊಡಗೂಡಿದ ದೇವಗಂಧಾದಿಗಳಿಂದಾಗಲಿ ಸಾಧ್ಯವಲ್ಲ. ಆ ಬಾಣರೂ ಪಗಳಾದ ಸರ್ಪಗಳು ಬಹಳತೀಕದಂಷ್ಟ್ರಗಳಿಂದಲೂ, ಕೂರವಿಷಗ ಳಿಂದಲೂ ಕೂಡಿರುವುವು. ಇಂದ್ರಜಿತ್ತಿನ ಮಾಯಾಪ್ರಭಾವದಿಂದ ಆ ಸರ ಗಳೇ ಬಾಣರೂಪಗಳಾಗಿ ನಿನ್ನ ನ್ನು ಬಾಧಿಸುತ್ತಿದ್ದುವು. ರಾಮಾ ' ನೀನು ಧರ್ಮಜ್ನು ' ಸತ್ಯಪರಾಕ್ರಮನು ! ನಿನ್ನ ತಮ್ಮನಾದ ಈ ಲಕ್ಷಣನೂ ಕೂಡ ಯುದ್ಧದಲ್ಲಿ ಎಂತಹ ಶತ್ರುಗಳನ್ನಾ ದರೂ ಧ್ವಂಸಮಾಡಬಲ್ಲವನು. ಆದುದರಿಂದ ನೀವಿಬ್ಬರೂ ಮಹಾಭಾಗ್ಯಶಾಲಿಗಳು! ನಿಮಗೆ ಯಾರಿಂದ ಲೂ, ಎಂದಿಗೂ ಭಯವಿಲ್ಲವು ನೀವು ಹೀಗೆ ನಾಗಪಾಶದಲ್ಲಿ ಕಟ್ಟುಬಿದ್ದಿರು ವರೆಂಬ ವೃತ್ತಾಂತವನ್ನು ಕೇಳಿದೊಡನೆ, ನಾನು ನಿಮ್ಮಲ್ಲಿರುವ ಸ್ನೇಹ ದಿ೦ದ, ಮಿತ್ರಥರ್ಮವನ್ನ ನುಸರಿಸಿ, ವೇಗದಿಂದಿಲ್ಲಿಗೆ ಬಂದೆನು, ಮಹಾ ಭಯಂಕರವಾದ ಆ ನಾಗಾಸಬಂಧವನ್ನೂ ಬಿಡಿಸಿದೆನು. ಇನ್ನು ಮೇಲೆ ನೀವು ಬಹಳ ಎಚ್ಚರಿಕೆಯಿಂದ ಆಯಾ ಅಸ್ತ್ರಗಳಿಗೆ ತಕ್ಕ ಪ್ರತ್ಯಸ್ತಗಳನ್ನು ಬಿಡುವುದರಲ್ಲಿ ಬಹಳ ಜಾಗರೂಕರಾಗಿರಬೇಕು ಇಲ್ಲಿನ ರಾಕ್ಷಸರೆಲ್ಲರೂ ಬಹಳವಾಗಿ ಕಪಟಯುದ್ಧವನ್ನು ಮಾಡತಕ್ಕವರು ಅದೇ ಅವರಿಗೆ ಸ್ವಭಾ ವವು ಶೂರರಾಗಿಯೂ, ಶುದ್ಧ ಸ್ವಭಾವವುಳ್ಳವರಾಗಿಯೂ ಇರುವ ನೀವು ಎಷ್ಟು ಮಾತ್ರವೂ, ಕಪಟಿಯುದ್ದಕ್ಕೆ ಪ್ರವರ್ತಿಸುವವರಲ್ಲ ಆದರೇನು ? ನಿಮ್ಮ ಯಜಸ್ವಭಾವವೇ ನಿಮಗೆ ಯಾವಾಗಲೂ ಬೆಂಬಲವಾಗಿರುವುದು. ಆದರೆ ನೀವು ಈ ರಾಕ್ಷಸರನ್ನು ಮಾತ್ರ ಯುದ್ಧದಲ್ಲಿ ಎಷ್ಟು ಮಾತ್ರವೂ ನಂಬಬಾರದು, ಅವರು ಕಪಟ ಯದ್ಧ ಮಾಡುವವರೆಂಬುದಕ್ಕೆ ಈಗಲೇ ನಿಮಗೆ ಚೆನ್ನಾಗಿ ನಿದರ್ಶನವು ಕಾಣಿಸಿತ್ತುವೆ?” ಎಂದನು ಗರುತ್ಯಂತನು ಹೀಗೆಂದು ಹೇಳಿ ತನ್ನ ಮಿತ್ರಭಾವವನ್ನು ತೋರಿಸುವುದಕ್ಕೆ ತಕ್ಕಂತೆ, ರಾಮ ನನ್ನಾಲಿಂಗಿಸಿಕೊಂಡು, ತಾನು ಹಿಂತಿರುಗಿ ಹೋಗುವುದಕ್ಕೆ ಅವನ ಅನು ಜ್ಞೆಯನ್ನು ಪಡೆಯುವುದಕ್ಕಾಗಿ ತಿರುಗಿ ರಾಮನನ್ನು ಕುರಿತು ಎಲೆ ಪ್ರಿ ಯಮಿತ್ರನೆ' ಸೀನು ಸಮಸ್ತಧರ್ಮಗಳನ್ನೂ ಬಲ್ಲವನು ಶತ್ರುಗಳಲ್ಲಿಯೂ ದೋಷವನ್ನೆಣಿಸದೆ ಅವರನ್ನು ಪ್ರೇಮಿಸತಕ್ಕವನು ಇನ್ನು ನಾನು ಹೋಗಿ ಬರುವನು ನನಗೆ ಅನುಮತಿ ಯನ್ನು ಕೊಡು. ಎಲೆ ವೀರನೆ : ನಮ್ಮಿಬ್ಬರಿಗೂ ಹಿಂದೆ ಯಾವಕಾಲದಲ್ಲಿ ಹೇಗೆ ಸ್ನೇಹವುಂಟಾಯಿತೆಂಬ ವಿಷಯವನ್ನು ತಿಳಿ