ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೯o ಶ್ರೀಮದ್ರಾಮಾಯಣವು [ಸರ್ಗ ೫೧. ಲಾಗಿ ಲಂಕೆಯೊಳಗಿದ ರಾವಣನಿಗೂ, ಇತರರಾಕ್ಷಸರಿಗೂ ಕೇಳಿಸಿತು ಹರ್ಷಸೂಚಕವಾದ ಈ ಗಂಭೀರಧ್ವನಿಯು ಕಿವಿಗೆ ಬಿದ್ದೊಡನೆ, ರಾವಣನು ಬೆಜ್ಜರಗೊಂಡು, ತನ್ನನ್ನು ಸುತ್ತಿದ್ದ ಮಂತ್ರಿಗಳನ್ನು ನೋಡಿ, ('ಆಹಾ' ಇ ದೇನು ? ವಾನರರೆಲ್ಲರೂ ಹೀಗೆ ಒಟ್ಟಾಗಿ ಸಂಭ್ರಮದಿಂದ ಗರ್ಜಿಸುವುದ ಕೈ ಕಾರಣವೇನು? ಮೇಘಗಳು ಗುಡುಗುವಂತೆ ಮಹಾಧ್ವನಿಯಿಂದ ಸಿಂಹ ನಾದವನ್ನು ಮಾಡುತ್ತಿರುವರಲ್ಲಾ ! ಓಹೋ ! ಇವರಿಗೇನೋ ಬಹಳವಾಗಿ ಸಂತೋಷವೂ ಹುಟ್ಟಿದಂತಿದೆ ' ಇದು ನಿಜವು ? ಇದರಲ್ಲಿ ಸಂದೇಹವಿಲ್ಲ ? ವರ ಅಟ್ಟಹಾಸಕ್ಕೆ ಸಮುದ್ರವೇ ಕೈಭಹೊಂದಿದಂತಾಗಿರುವುದು ಇದೇ ನಾಶ ರೆವು ! ಅಲ್ಲಿ ಸಹೋದರರಾದ ರಾಮಲಕ್ಷ ಇರಿಬ್ಬರೂ ತೀಕ್ಷ ಬಾಣಗಳಿಂದ ಬದ್ಧರಾಗಿ ಶರತಲ್ಪದಲ್ಲಿ ಮಲಗಿರುವದೆಂದರೇನು ? ವಾನರರು ಸಂತೋಷದಿಂದುಬ್ಬಿ ಮಹಾಧ್ವಸಿಯಿಂದ ಹಿಗೆ ಸಿಂಹನಾದಮಾಡುವು ದೆಂದರೇನು ? ಇವು ಒಂದಕ್ಕೊಂ” ಕ್ಕೆ ಕೇವಲವಿರುದ್ಧವಲ್ಲವೆ ? ಒಂದು ವೇಳೆ ರಾಮಲಕ್ಷ ಇರಿಬ್ಬರಿಗೂ ಅಕಸ್ಮಾತ್ತಾಗಿ ಆ ಶರಬಂಧವೇನಾದರೂ ಬಿಟ್ಟು ಹೋಗಿರಬಹುದೆ ? ಈ ವಾನರರ ಅಟ್ಟಹಾಸಧ್ವನಿಯನ್ನು ಕೇಳಿ ದರೆ ಹಾಗೆಯೇ ಊಹಿಸಬೇಕಾಗಿದೆ” ಎಂದನು ರಾವಣನು ಮಂತ್ರಿಗೆ ಳೊಡನೆ ಈ ಮಾತನ್ನು ಹೇಳಿ ಸಮೀಪದಲ್ಲಿದ್ದ ರಾಕ್ಷಸಯೋಧರನ್ನು ಕು ರಿತು, “ಎಲೆ ರಾಕ್ಷಸರೆ ! ಈಗ ಆ ವಾನರರೆಲ್ಲರಿಗೂ ಮಹಾವ್ಯಸನಕಾಲವು ಬಂದೊದಗಿರುವಾಗ, ಅವರು ಇಷ್ಟು ಸಂತೋಷದಿಂದಿರುವುದಕ್ಕೆ ಕಾ ರಣವೇನೆಂಬುದನ್ನು ನೀವು ತೀಘ್ರದಲ್ಲಿಯೇ ತಿಳಿದು ಬಂದು ನನಗೆ ಹೇಳ ಬೇಕು.” ಎಂದು ಆಜ್ಞೆ ಮಾಡಿದನು. ಈ ರಾಜಾಜ್ಞೆಯನ್ನು ಕೇಳಿದೊಡನೆ, ಅಲ್ಲಿದ್ದ ರಾಕ್ಷಸರು ಸಂಭ್ರಮದಿಂದೆದ್ದು, ಪ್ರಾಕಾರದ ಮೇಲೇರಿನಿಂತು ಅತ್ತಲಾಗಿ ಮಹಾತ್ಮನಾದ ಸುಗ್ರೀವನಿಂದ ರಕ್ಷಿತವಾಗಿ ನಿಂತಿದ್ದ ದೊಡ್ಡ ವಾನರಸೇನೆಯನ್ನು ಕಂಡರು, ಮತ್ತೆ ಅಲ್ಲಿ ಮಹಾನುಭಾವರಾದ ರಾಮಲ ಹಣರಿಬ್ಬರೂ ಭಯಂಕರವಾದ ನಾಗಪಾಶದಿಂದ ಮುಕ್ತರಾಗಿ ಸುಖಂ ದ ನಿಂತಿರುವುದನ್ನೂ ನೋಡಿದರು. ಈ ಸನ್ನಿವೇಶಗಳನ್ನು ನೋಡಿದೊಡನೆ ಅವರೆಲ್ಲರಿಗೂ ಮನಸ್ಸಿನಲ್ಲಿ ಬಹಳ ವಿಷಾದವು ಹುಟ್ಟಿತು. ಆ ಫೋರರಾ ಕ್ಷಸರೆಲ್ಲರೂ ಆಗಲೇ ಭಯದಿಂದ ಎದೆಗುಂದಿದವರಾಗಿ, ಪ್ರಾಕಾರದಿಂದ ಕೆ