ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೮ ಶ್ರೀಮದ್ರಾಮಾಯಣವು [ಸರ್ಗ, ೪. ವೀರದಿಂದ ಕೊಬ್ಬಿದ ಆ ವಾನರರೆಲ್ಲರೂ ಪ್ರಯಾಣಹೊರಟುಬರು ವಾಗ, ಮುಂದೆ ಸ್ವಲ್ಪ ದೂರದಲ್ಲಿ, ಬಗೆಬಗೆಯ ಗಿಡುಬಳ್ಳಿಗಳಿಂದ ತುಂಬಿ ದ ಸಹ್ಯಪಲ್ವೇತವನ್ನೂ ,ಅರಳಿದ ತಾವರೆಗಳಿಂದ ತುಂಬಿದ ಅಲ್ಲಿನ ಕೆರೆಕೊಳ ಗಳನ್ನೂ ಕಂಡರು, ಸಮುದ್ರ ಪ್ರವಾಹದಂತೆ ಅಪಾರವಾಗಿಯೂ, ಭಯಂ ಕರವಾಗಿಯೂ ಇದ್ದ ಆ ದೊಡ್ಡ ವಾನರಸೈನ್ಯವು, ರೌದ್ರಕೋಪವುಳ್ಳ ರಾಮನ ಆಜ್ಜಿಗೆ ಭಯಪಟ್ಟು, ಅಕ್ಕ ಪಕ್ಕಗಳಲ್ಲಿರುವ ಗ್ರಾಮಗಳಿಗಾಗಲಿ, ನಗರಗಳಿಗಾಗಲಿ ಪ್ರವೇಶಿಸದೆ, ನೆಟ್ಟಗೆ ತನ್ನ ದಾರಿಯನ್ನು ಹಿಡಿದು, ಸ ಮುದ್ರದ ಮೊರೆತದಂತೆ ದೊಡ್ಡ ಗರ್ಜನೆಗಳನ್ನು ಮಾಡುತ್ತ ಮುಂದೆ ಸಾ ಗಿತು. ರಾಮನ ಪಕ್ಕದಲ್ಲಿ ಬರುತಿದ್ದ ವಾನರವೀರರೆಲ್ಲರೂ ಅವನ ಮುಖೋ ಲ್ಯಾಸಕ್ಕಾಗಿ, ಕಶೆಯಿಂದ ಹೊಡೆದ ಕುದುರೆಗಳಂತೆ ಹಾರಿಹಾರಿ ನಡೆ ಯು ತಿದ್ದರು. ಆಂಜನೇಯನ ಮತ್ತು ಅಂಗದನ ಹೆಗಲನ್ನೇರಿ ಕುಳಿತಿದ್ದ ರಾಮಲಕ್ಷ್ಮಣರಿಬ್ಬರೂ, *ಶುಕ್ರಬೃಹಸ್ಪತಿಗಳೆಂಬ ದೊಡ್ಡ ಗ್ರಹಗಳೊಡ ಗೆ ಸೇರಿದ ಚಂದ್ರಸೂರರಂತೆ ಶೋಭಿಸುತಿದ್ದರು ಧರಾತ್ಮನಾದ ರಾ ಮನು, ಸುಗ್ರೀವನಿಂದಲೂ, ಲಕ್ಷ್ಮಣನಿಂದಲೂ ಗೌರವಿಸಲ್ಪಡುತ್ತ, ಸ ಮಸ್ತವಾನರಸೇನೆಯೊಡನೆ ದಕ್ಷಿಣಾಭಿಮುಖವಾಗಿ ಬರುತಿದ್ದನು ಹೀಗೆ ಎ ಲ್ಲರೂ ಸೇರಿ ಬರುತ್ತಿರುವಾಗ, ಶಕುನಶಾಸ್ತ್ರಗಳಲ್ಲಿ ಚೆನ್ನಾಗಿ ನೆನಪುಳ್ಳವನಾ ಗಿಯೂ,ಕಾಲೋಚಿತಪ್ರತಿಭೆಯುಳ್ಳವನಾಗಿಯೂ ಇರುವ ಲಕ್ಷಣನು, ಅ೦ ಗದನಮೇಲೆ ಕುಳಿತು ಬರುತಿದ್ದ ಹಾಗೆಯೇ ಸಮೀಪದಲ್ಲಿದ್ದ ರಾಮನನ್ನು ಕುರಿತು, ಶುಭವಾಕ್ಯದಿಂದ (ಅಣ್ಣಾ' ಇನ್ನು ಮೇಲೆ ನೀನು ಕೈತಪ್ಪಿ ಹೋ ಗಿರುವ ಸೀತೆಯನ್ನೂ ಪಡೆದು, ರಾವಣನನ್ನೂ ಕೊಂದು, ನಿನ್ನ ಇಷ್ಟಾರ್ಥವ ನ್ಯೂ ಕೈಗೂಡಿಸಿಕೊಂಡು,ಭಾಗ್ಯಸಮೃದ್ದವಾದ ನಮ್ಮ ಅಯೋಧ್ಯೆಗೆ ಹಿಂತಿ ರುಗುವುದರಲ್ಲಿ ಸಂದೇಹವೇ ಇಲ್ಲ ' ಆಕಾಶದಲ್ಲಿಯೂ, ಭೂಮಿಯಲ್ಲಿಯೂ, ಕಾಣಬಹುದಾದ ಈ ದೊಡ್ಡ ದೊಡ್ಡ ಶುಭಶಕುನಗಳೆಲ್ಲವೂ, ನಿನ್ನ ಕಾರಸಿ

  • ಇಲ್ಲಿ ಶುಕ್ರಬೃಹಸ್ಪತಿಗಳೊಡಗೂಡಿದ ಚಂದ್ರಸರರೆಂಬುದರಿಂದ, ನಾ ಲ್ಯುಗ್ರಹಗಳ ಸೇರುವೆಯು ಬಹುಜನವಿನಾಶಹೇತುವಾಗುವಂತೆ, ರಾಮಲಕ್ಷ್ಮಣರಿಬ್ಬ ರಿಗೂ ಹನುಮದಂಗದರೊಡನೆ ಸಂಬಂಧವು ಅನೇಕಶತ್ರುವಿನಾಶಹೇತುವೆಂದು ಸ ಚಿತವು