ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫೨.] ಯುದ್ಧಕಾಂಡವು ೨೩೯೫ ಸುತ್ತ, ಕಂಡಕಂಡ ರಾಕ್ಷಸರನ್ನು ನಾನಾಕಡೆಗಳಲ್ಲಿ ಪ್ರಹರಿಸುತಿದ್ದರು ಹೀಗೆ ವಾನರರು ನಾನಾವಿಧತಿಲೆಗಳನ್ನೂ ವೃಕ್ಷಗಳನ್ನೂ ಹಿಡಿದು ರಾಕ್ಷಸರನ್ನೂ, ರಾಕ್ಷಸರು ವಿವಿಧಾಯುಧಗಳನ್ನು ಹಿಡಿದು ವಾನರರ ನ್ಯೂ ಪ್ರಹರಿಸುತ್ತಿರಲು, ಈ ವಾನರರಾಕ್ಷಸರ ಯುದ್ಧವು ಮಹಾಭಯಂ ಕರವಾಗಿಯೂ, ಅತ್ಯಾಪ್ತ ರೂವಾಗಿಯೂ ಕಾಣಿಸಿತು ಹೀಗಿರುವಾಗ ಕ್ರಮಕ್ಕೆ ಮವಾಗಿ ವಾನರರ ಕೈ ಮೇಲಾಯಿತು ಜಯಶಾಲಿಗಳಾದ ವಾನರರ ಕೈ ಯಿಂದ ಹತರಾದ ಕೆಲವು ರಾಕ್ಷಸರು ಕೈಕಾಲು ಮುಂತಾದ ಅವಯವಗ್ರ ಳೇ ಕಾಣದಂತೆ ನಜ ಗುಜ್ಜಾಗಿ ಕೆಳಗೆ ಬಿದ್ದರು ಕೆಲವು ರಾಕ್ಷಸರು ಬಾ ಯಿಂದ ರಕ್ತವನ್ನು ಕಕ್ಕುತಿದ್ದರು ಕೆಲವು ವಾನರರು ಅಲ್ಲಲ್ಲಿ ತಮ್ಮ ಕೈಗೆ ಸಿಕ್ಕಿದ ಕೆಲವು ರಾಕ್ಷಸರನ್ನು ಹಿಡಿದು, ಅವರ ಪಾರ್ಶ್ವಭಾಗಗಳನ್ನು ಹಿಡಿ ದು ಎರಡುತುಂಡಾಗಿ ಸಿಗಿದು ಹಾಕುತಿದ್ದರು ಕೆಲವರನ್ನು ಮರದ ಕೊಂಬೆಗಳಿಂದ ಬಡಿದು ಕೊಂದು ಹೆಣಗಳನ್ನು ರಾಶಿಹಾಕುತಿದ್ದರು ಕೆಲವರನ್ನು ಶಿಲೆಗಳಿಂದ ಚೂರ್ಣ ಮಾಡಿದರು ಕೆಲವರನ್ನು ಹಲ್ಲುಗಳಿಂದ ಸಿಗಿದುಹಾಕಿದರು ಅಲ್ಲಲ್ಲಿ ವಾನರರು ಬೀಸಿಬಡಿದ ಪತàಖರಗಳಿಂದ ಮುರಿದುಬಿದ್ದ ಧ್ವಜಗಳೂ, ಸತ್ತು ಬಿದ್ದ ಕತ್ತೆಗಳೂ, ಚೂರ್ಣಮಾಡಲ್ಪಟ್ಟ ರಥಗಳೂ, ಉರುಳಾಡುತಿದ್ದ ರಾಕ್ಷಸರ ದೇಹಗಳೂ,ನೆಲಕ್ಕುರುಳಿದ ಪಕ್ವತಾ ಕಾರಗಳಾದ ಆನೆಗಳೂ, ಕತ್ತರಿಸಿಬಿದ್ದ ಕುದುರೆಗಳೂ, ಮೂರ್ಛಿತರಾದ ರಾವುತರೂ, ಆ ರಣಭೂಮಿಯ ಸಮಸ್ತಭಾಗಗಳಲ್ಲಿಯೂ ಎಡೆಬಿಡದೆ ತುಂ ಬಿದರು ಅಲ್ಲಲ್ಲಿ ಭಯಂಕರಪರಾಕ್ರಮಿಗಳಾದ ಕೆಲವು ವಾನರರು, ಮ ಹಾವೇಗದಿಂದ ಆಗಾಗ ಮೇಲೆ ಹಾರಿ, ತಮ್ಮ ಕೂರುಗುರುಗಳಿಂದ ರಾ ಕಸರ ಮುಖಗಳನ್ನು ಪರಚುತ್ತಿರಲು, ಅದರಿಂದ ಅನೇಕರಾಕಸರು, ಅಂದ ಗೆಟ್ಟ ಮುಖಗಳಿಂದಲೂ, ಕೆದರಿದ ಕೂದಲುಗಳಿಂದಲೂ ವಿಕಾರರೂಪ ವುಳ್ಳವರಾಗಿ, ರಕ್ತಗಂಧದೊಡನೆ ಮೂರ್ಛಿತರಾಗಿ ನೆಲಕ್ಕೆ ಬಿದ್ದರು. ಈ ವಾನರರ ಚೇಷ್ಟೆಯನ್ನು ನೋಡಿ ಕೆಲವು ರಾಕ್ಷಸರು, ಮಿತಿಮೀರಿ ಕೋಪ ಗೊಂಡು,ಭಯಂಕರಧ್ವನಿಯಿಂದ ಗರ್ಜಿಸುತ್ತ, ವಜ್ರಾಯುಧಗಳಂತೆ ಕ ಶಿವಸ್ಪರ್ಶವುಳ್ಳ ತಮ್ಮ ಅಂಗೈಗಳನ್ನು ಮೇಲೆತ್ತಿಕೊಂಡು ಆ ವಾನರರ ನ್ನು ಇದಿರಿಸಿ ಹೋದರು. ಹೀಗೆ ರಾಕ್ಷಸರು ತಮ್ಮ ಮೇಲೆ ನುಗ್ಗಿ ಬರುವು