ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೦೪ ಶ್ರೀಮದ್ರಾಮಾಯಣ [ಸರ್ಗ, ೫೪ ದಂಷ್ಟ್ರನಿಗೂ ದೊಡ್ಡ ಯುದ್ಧಕ್ಕೆ ಮೊದಲಾಯಿತು ಇಬ್ಬರಿಗೂ ಮೇಲೆ ಮೇಲೆ ಕೋಪವು ಹೆಚ್ಚು ತಿತ್ತು. ಸಿಂಹವೂ, ಆನೆಯೂ ಹೋರಾಡುವಂತೆ ಇಬ್ಬರೂ ಕಲಹಕ್ರೀಡೆಯನ್ನು ತೊಡಗಿದರು ಇಷ್ಟರಲ್ಲಿ ಬಲಾಢನಾದ ವಜ್ರದಂಷ್ಯನು, ಆನೆಯನ್ನು ಅಂಕುಶದಿಂದ ತಿವಿಯುವಂತೆ ಸಾವಿರಾ ಣಗಳನ್ನು ಅಂಗದನ ಮರ್ಮಸ್ಥಾನಗಳಿಗೆ ಗುರಿಯಿಟ್ಟು ಹೊಡೆದನು ಇದರಿಂ ದ ಅಂಗದನ ಸಾಂಗಗಳಲ್ಲಿಯೂ ರಕ್ತವು ಕಿತ್ತುಕೊಂಡಿತು ಆಗ ಬಲಾಢ ನಾಗಿಯೂ, ಭಯಂಕರಪರಾಕ್ರಮವುಳ್ಳವನಾಗಿಯೂ ಇದ್ದ ಅಂಗದನ್ನು, ಅಷ್ಟೊಂದು ಬಾಣಪ್ರಯೋಗಗಳನ್ನೂ ಲಕ್ಷಮಾಡದೆ, ಒಂದು ದೊಡ್ಡ ಮರವನ್ನು ಕಿತ್ತು ತಂದು, ವಜ್ರದಂಷ್ಟ್ರನಮೇಲೆ ಬೀಸಿದನು ವಜ್ರದಂ «ನು ತನಗಿದಿರಾಗಿ ಬರುತಿದ್ದ ಆ ದೊಡ್ಡ ವೃಕ್ಷವನ್ನು ನೋಡಿಯ, ಥೈಲ್ಯವನ್ನು ಬಿಡದೆ, ತನ್ನ ಬಾಣಗಳಿಂದ ಆ ವೃಕ್ಷವನ್ನು ಸಹಪ್ರಭಾಗಗಳಾಗಿ ಖಂಡಿಸಿ ನೆಲಕ್ಕೆ ಕಡಹಿದನು, ಅಂಗದನು ವಜ್ರದಂಷ್ಯನ ಈ ಅದ್ಭುತ ಪರಾಕ್ರಮವನ್ನು ನೋಡಿ ವಿಸ್ಮಯಪಡುತ್ತ, ಬೇರೊಂದದೊಡ್ಡ ಪಕ್ವತ ವನ್ನೆತ್ತಿಕೊಂಡು ಬಂದು, ವಜ್ರದಂಷ್ಟ್ರ ನಕಡೆಗೆ ಬಿಸುಟು, ದೊಡ್ಡ ಸಿಂಹ ನಾ ದವನ್ನೂ ಮಾಡಿದನು ಈ ಪರತವು ತನಗಿದಿರಾಗಿ ಬರುವುದನ್ನು ನೋಡಿ ವಜ್ರದಂಷ್ಯನು, ಅದು ತನ್ನ ಮೇಲೆ ಬಿಳುವಷ್ಟರಲ್ಲಿಯೇ ಗದೆಯನ್ನು ಕೈಗೆ ತಿಕೊಂಡು ರಥದಿಂದ ಹಾರಿ ನೆಲದಮೇಲೆ ನಿಂತನು ಇಷ್ಟರಲ್ಲಿ ಅಂಗದನು ಮುಂದೆನು, ವಜ್ರದಂಷ್ಯನ ಕೈಯಲ್ಲಿದ್ದ ಗದೆಯನ್ನು ಕಿತ್ತುಕೊಂಡು, ಅದರಿಂದಲೇ ಅವನ ರಥವನ್ನು , ಅದರಚಕ್ರಗಳೊಡನೆ ಯೂ, ಅದರಮೂಕಿ ಯೊಡನೆಯೂ, ಅದರಕುದುರೆಗಳೊಡನೆ ಯ ತುಂಡುತುಂಡಾಗಿಬಿಳುವಂತೆ ಹೊಡೆಯೆ ಕೆಡಹಿದನು ಆಮೇಲೆ ವೀರನಾದ ಅ೦ಗದನು ವೃಕ್ಷಗಳಿಂದ ತುಂಬಿದ ಬೇರೊಂದು ದೊಡ್ಡ ಪಕ್ವತವನ್ನು ಕಿತ್ತು ತಂದು ವಜ್ರದಂಷ್ಟ್ರನ ತಲೆಯಮೇಲೆ ಬೀಸಿದನು ಇದರ ಪ್ರಹಾರದಿಂದ ವಜ್ರದಂಷ್ಯನುರಕ್ತ ವನ್ನು ಕಾರುತ್ತ ಮೂರ್ಛಿತನಾದನು ಮುಹೂರ್ತಕಾಲದವರೆಗೆ ಪ್ರಜ್ಞೆ ಯಿಲ್ಲದೆ ನಿಟ್ಟುಸಿರುಬಿಡುತ್ತ, ತಾನು ಹಿಡಿದಿದ್ದ ಬೇರೊಂದು ಗದೆಯನ್ನು ಹಿಡಿದಂತೆಯೇ ಸಬ್ಬನಾಗಿದ್ದನು. ಕ್ಷಣಕಾಲದಲ್ಲಿಯೇ ಆ ರಾಕ್ಷಸನು ಮೂರ್ಛತಿಳಿದವನಾಗಿ, ಆ ಗದೆಯನ್ನೆತ್ತಿಕೊಂಡು ಕೋಪದಿಂದ ಮುಂದೆ