ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫೪] ಯುದ್ಧಕಾಂಡವು ೨೪on ಬಂದು ಅಂಗದನ ಎದೆಯನ್ನು ಪ್ರಹರಿಸಿದನು. ಕೊನೆಗೆ ವಜ್ರದಂಷ್ಯ ನು ಆ ಗದೆಯನ್ನೂ ಬಿಸುಟು, ಆ೦ಗದದೊಡನೆ ಮುಷ್ಟಿಯುದ್ಧವನ್ನಾರಂಭಿಸಿ ದನು ಆ ವಾನರರಾಕ್ಷಸರಿಬ್ಬರೂ ಒಬ್ಬರನ್ನೊಬ್ಬರು ಬಹಳಕೂರವಾಗಿ ಪ್ರಹರಿಸುತಿದ್ದರು ಪರಸ್ಪರಪ್ರಹಾರಗಳಿಂದ ಇಬ್ಬರ ದೇಹದಲ್ಲಿಯೂ ರಕವು ಕಿತ್ತುಕೊಂಡಿತು ಇಬ್ಬರಿಗೂ ಬಳಲಿಕೆಯುಂಟಾಯಿತು ಇಬ್ಬ ರೂ ರಕ್ತದಿಗ್ಗಗಾತ್ರರಾಗಿ ಆ೦ಗಾರಕಬುಧಗ್ರಹಗಳಂತೆ ಕಾಣುತ್ತಿದ್ದರು. ಆಮೇಲೆ ಮಹಾತೇಜಸ್ವಿಯಾಗಿಯೂ, ಕೆಪಿಶ್ರೇಷ್ಟನಾಗಿಯೂ ಇದ್ದ ಅ೦ ಗದನು, ಅನೇಕ ಪ್ರಷ್ಟಫಲಗಳಿಂದ ತುಂಬಿದ ಒಂದುದೊಡ್ಡ ವೃಕ್ಷವನ್ನೆ ತ್ರಿ ಕೊಂಡು ಯುದ್ಧಕ್ಕೆ ನಿಂತನು ಹಾಗೆಯೇ ವಜ್ರದಂಷ್ಯನೂ ಒಂದುಗೊ ಡ ವೃಕ್ಷವನ್ನು ಹಿಡಿದು ನಿಂತನು' ಅದರಿಂದ ಇಬ್ಬರೂಸ್ವಲ್ಪ ಹೊತ್ತಿನವರೆಗೆ ಯುದ್ಧವನ್ನು ನಡೆಸಿದಮೇಲೆ, ಅಂಗದನು ವೃಷಭಚರ್ಮದಿಂದ ಮಾಡಿದ ಬಂದುಗುರಾಣಿಯನ್ನೂ, ಕಿರುಗಂಟಿಗಳಿಂದ ಕೂಡಿ ಉತ್ತಮವಾದ ಚರ್ಮ ದ ಚೀಲದಲ್ಲಿಡಲ್ಪಟ್ಟ ಒಂದು ದೊಡ್ಡ ಕತ್ತಿಯನ್ನೂ ಹಿಡಿದು ನಿಲ್ಲಲು, ವ ಜದಂಷ್ಯನೂ ಹಾಗೆಯೇ ಕತ್ತಿಯನ್ನೂ, ಗುರಾಣಿಯನ್ನೂ ಕೈಗೆತ್ತಿ ಕೊಂಡನು ಹೀಗೆ ವಾನರಾಕ್ಷಸರಿಬ್ಬರೂ ಒಬ್ಬರನ್ನೊಬ್ಬರು ಜಯಿಸ ಬೇಕೆಂಬ ಹಟದಿಂದ ನಾನಾರೀತಿಯಲ್ಲಿ ಯುದ್ಧಮಾಡುತ್ತ, ಸ್ವಲ್ಪ ಮಾತ್ರ ವೂ ಕರುಣೆಯಿಲ್ಲದೆ ಒಬ್ಬರನ್ನೊಬ್ಬರು ಪ್ರಬಲವಾಗಿ ಹೊಡೆಯುತಿದ್ದರು. ಅವರಿಬ್ಬರೂ ರಕ್ತವನ್ನು ಕಾರುವ ಗಾಯಗಳಿಂದ ತುಂಬಿದ ಮೈಯುಳ್ಳವ ರಾಗಿ, ಪುಷ್ಟಿತಗಳಾದ ಮುತ್ತುಗದ ಮರಗಳಂತೆ ಕಾಣಿಸುತಿದ್ದರು ಇಬ್ಬ ರೂ ಬಹಳಹೊತ್ತಿನವರಿಗೆ ಯುದ್ಧಮಾಡಿ, ಕೊನೆಗೆ ಬಳಲಿ, ನೆಲದಮೇಲೆ ಮಂಡಿಯನ್ನೂರಿ ಕುಳಿತರು ನಿಮಿಷಮಾತ್ರದಲ್ಲಿಯೆಕಪಿಶ್ರೇಷ್ಟನಾದ ಅಂಗದನು ಕೋಪದಿಂದ ಕೆಂಪೇರಿದ ಮೈಯುಳ್ಳವನಾಗಿ, ಕೊಲಿನಿಂದ ಕೆಣಕಿದ ಸರ್ಪದಂತೆ ಮೇಲೆದ್ದು ನಿಂತು, ಚೆನ್ನಾಗಿ ಸಾಣೆಯಿಕ್ಕಿ ಕೊಳೆ ಯಿಲ್ಲದೆ ಹೊಳೆಯುತ್ತಿರುವ ಒಂದು ಖೆಡ್ಡ ದಿಂದ ವಜ್ರದಂಷ್ಯ ನ ತಲೆ

  • ಧೂಮ್ರಾಕ್ಷನು ಹತನಾದ ಮರುದಿನದಲ್ಲಿ ಎಂದರೆ, ತೃತೀಯಾತಿಥಿಯಲ್ಲಿ ವಜ್ರದಂಷ್ಯನ ವಧವೆಂದು ತಿಳಿಯಬೇಕು.