ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೦೬ ಶ್ರೀಮದ್ರಾಮಾಯಣವು (ಸರ್ಗ, ೫೫ ಯನ್ನು ಕತ್ತರಿಸಿಕೆಡಹಿದನು ಸಾಂಗಗಳಲ್ಲಿಯೂ ರಕ್ತವು ಸುರಿಯುತ್ತಿರ ಲು, ಆ ವಜ್ರದಂಷ್ಯನ ತಲೆಯು ಅವನ ದೇಹದಿಂದ ಬೇರೆಯಾಗಿ ರೋ ಷದಿಂದ ತಿರುಗುವ ಕಣ್ಣಾಲೆಗಳೊಡನೆ ಕೆಳಗೆ ಬಿದ್ದಿತು. ವಜ್ರದಂಷ್ಟ್ರು ನು ಹತನಾದುದನ್ನು ನೋಡಿ ಅಲ್ಲಿದ್ದ ಸಮಸ್ಯರಾಕ್ಷಸರಿಗೂ ಮನಸ್ಸಿನಲ್ಲಿ ಭಯವು ಹುಟ್ಟಿತು. ಅವರೆಲ್ಲರೂ ಭಯದಿಂದ ಮೃತಿಳಿಯದೆ ನಾ ನಾಕಡೆಗಳ ಲ್ಲಿಯೂ ವಾನರರಿಂದ ಪ್ರಹರಿಸಲ್ಪಡುತ್ಯ, ದೈಹಿಂದ ಬಾಡಿದ ಮು ಖವುಳ್ಳವರಾಗಿ, ನಾಚಿಕೆಯಿಂದ ತಲೆಯೆತ್ತಲಾರದೆ, ಹಿಂತಿರುಗಿ ಲಂಕೆಗೆ ಪಲಾಯನಮಾಡಿದರು. ಇತ್ತಲಾಗಿ ಮಹೇಂದ್ರ ಪರಾಕ್ರಮವುಳ್ಳ ಬಲಾ ಡೈನಾದ ಅಂಗದನು, ವಜ್ರದಂಷ್ಟವನ್ನು ಕೊಂದುದಕ್ಕಾಗಿ ಸಮಸ್ಯ ವಾನರಸೈನ್ಯದಿಂದಲೂ ಪೂಜಿಸಲ್ಪಡುತ್ಯ, ದೇವತೆಗಳ ನಡುವೆ ನಿಂತ ದೇ। ವೇಂದ್ರನಂತೆ ಆ ದೊಡ್ಡವಾನರಸೈನ್ಯದ ಮಧ್ಯದಲ್ಲಿ ಪರಮಸಂತೋಷದಿಂ ಡಿದನು ಇಲ್ಲಿಗೆ ಐವತ್ತು ನಾಲ್ಕನೆಯಸರ್ಗವು ( ರಾವಣಾಜ್ಞೆಯಿಂದ ಅಕಂಪನನು ಲಂಕೆಯ ಪಶ್ಚಿಮ mM ದ್ವಾರಕ್ಕೆ ಬಂದು, ಅಲ್ಲಿದ್ದ ಹನುಮಂತನೊಡನೆ | ' ಯುದ್ಧ ಮಾಡಿದುದು - ವಜ್ರದಂಷ್ಯನು ಅಂಗದನಿಂದ ಹತನಾದುದನ್ನು ಕೇಳಿ ರಾವಣನು ತನ್ನ ಮುಂದೆ ಕೈಮುಗಿದು ನಿಂತಿದ್ದ ಬಲಾಡ್ಯನಾದ ಪ್ರಹಸನನ್ನು ನೋ ಡಿ ಎಲೆ ಸೇನಾಪತೀ । ಈಗಲೇ ನೀನು ಭಯಂಕರಪರಾಕ್ರಮದಿಂದ ದುರ್ಜಯರಾದ ಕೆಲವು ರಾಕ್ಷಸಯೋಧರನ್ನು ಕರೆಸಿ, ಸರ್ವಶಸ್ವನಿಪ ಣನಾದ ಆಕಂಪನನನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೊರಡುವಂತೆ ನಿಯಮಿಸು : ಆ ಅಕಂಪನನಲ್ಲಿ ನನಗೆ ಸಂಪೂರ್ಣವಾದ ಭರವಸವುಂಟು. ಅವನು ಯುದ್ಧದಲ್ಲಿ ಶತ್ರುಗಳೆಲ್ಲರನ್ನೂ ಅಡಗಿಸಬಲ್ಲನು ತನ್ನ ಸೇನೆಗೂ ಆಪಾ ಯವಿಲ್ಲದೆ ರಕ್ಷಿಸಿಕೊಳ್ಳಬಲ್ಲನು. ಸೇನೆಯನ್ನು ನಡೆಸುವುದರಲ್ಲಿಯೂ ಸಮ ರ್ಧನು! ಅನೇಕಯುದ್ಧಗಳಲ್ಲಿ ಪ್ರಸಿದ್ಧಿ ಹೊಂದಿದವನು. ಯಾವಾಗಲೂ ನ ನಗೆ ಮನಃಪೂಲ್ವಿಕವಾಗಿ ಹಿತವನ್ನು ಕೋರತಕ್ಕವನು. ಯುದ್ಧದಲ್ಲಿಯೂ