ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೫೫.] ಯುದ್ದ ಕಾಂಡವು. ೨೪oe ಮಹೋತ್ಸಾಹವುಳ್ಳವನು ಎಂತಹ ಶತ್ರುಗಳನ್ನಾ ದರೂ ನಿಗ್ರಹಿಸದೆಬಿಡು ವವನಲ್ಲ ಅವನು ಸಂದೇಹವಿಲ್ಲದೆ, ಆ ರಾಮಲಕ್ಷ್ಮಣರನ್ನೂ, ಬಲಾಡ್ಯವೆನಿ ಸಿಕೊಂಡ ಸುಗ್ರೀವವನೂ ಜಯಿಸಿ, ಭಯಂಕರರಾದ ಇತರವಾನರರನ ಕೊಂದು ಬರುವನು ” ಎಂದನು ಈ ರಾವಣಾಜ್ಞೆಯನ್ನು ಕೇಳಿದೊಡನೆ ಪ್ರಹಸನು, ಆ ರಾಜಾಜ್ಞೆಯಂತೆಯೆ ಶೀಘ್ರದಲ್ಲಿ ಸೇನೆಗಳನ್ನು ಸಿ ದಪಡಿಸಿದನು ಬಲಾಧ್ಯಕ್ಷನಾದ ಪ್ರಹಸನ ಆಜ್ಞೆಯಂತೆ ಅನೇಕವೀರ ರಾಕ್ಷಸರು, ವಿವಿಧಾಯುಧಗಳನ್ನು ಹಿಡಿದು, ಭಯಂಕರವಾದ ಆಕಾರದಿಂದ ಊಘೋರಸ್ವರೂಪವುಳ, ಕಣ್ಣುಗಳಿಂದಲೂ ಕೂಡಿ, ಪಟ್ಟಣದಿಂದ ಯು ದೈಕ್ಕಾಗಿ ಹೊರಟರು ಆಗ ಮೇಫುದಂತೆ ದೊಡ್ಡ ದೇಹವುಳ್ಳವನಾಗಿಯೂ ಕಾಳಮೇಫುದಂತೆ ಕಪ್ಪಮೈಯುಳ್ಳವನಾಗಿಯೂ, ಮೇಫುಧ್ವನಿಯಂತೆ ಮ ಹಾಧ್ವನಿಯುಳ್ಳವನಾಗಿಯೂ ಇದೂ ಅಕಂಸವನು, ಉತ್ತಮಗಳಾದ ಸುವ ರ್ಣಕುಂಡಲಗಳನ್ನು ಧರಿಸಿ,ದೊಡ್ಡ ರಥವನ್ನೇರಿ ಅನೇಕರಾಕ್ಷಸರಿಂದ ಪರಿವೃ ತನಾಗಿ ಸೇನೆಯಮುಂದೆ ಹೊರಟನು ಆ ಅಕಂಪನನ ಅಸಾಧಾರಣವೀರ ವನ್ನು ಹೇಳಬೇಕಾದುದೇನು ' ಯುದ್ಧದಲ್ಲಿ ದೇವತೆಗಳಾದರೂ ಅವನನ್ನು ಕದಲಿಸಲಾರರು ! ಇದರಿಂದಲೇ ಆತನಿಗೆ ಆಕಂಪನನೆಂಬ ಹೆಸರು ಬಂದಿರು ವುದು. ಆ ರಾಕ್ಷಸಸೇನೆಯ ಮಧ್ಯದಲ್ಲಿ ಅವನು ತನ್ನ ತೇಜಸ್ಸಿನಿಂದ ಸೂರ ನಂತೆ ಜ್ವಲಿಸುತ್ತಿರುವನು ಹೀಗೆ ಎಣೆಯಿಲ್ಲದ ವೀರದಿಂದಲೂ, ಪರಾಕ್ರಮ ಹಿಂದಲೂ ಪ್ರಸಿದ್ಧನಾದ ಆ ಅಕಂಪನನು, ಯುದ್ಧಾತುರದಿಂದ ರಥವ ನೈರಿ ಬರುತಿದ್ದಾಗ, ನಡುದಾರಿಯಲ್ಲಿ ಆತನಿಗೂ « ಅಲ್ಲಲ್ಲಿ ದುಶ್ಯಕುನಗಳು ಕಾಣಿಸಲಾರಂಭಿಸಿದುವು ಅವನ ರಥವನ್ನೆಳೆಯುತಿದ್ದ ಕುದುರೆಗಳ ಮುಖದ ಕ್ಲಿ ಆಕಸ್ಮಿಕವಾಗಿ ದೈನ್ಯವು ತೋರಿತು ಅಕಂಪನನ ಎಡದಕಣ್ಣು ಇದ್ದಕ್ಕಿ ಹಾಗೆ ಅದಿರಿತು, ಅವನ ಮುಖವರ್ಣವು ಕಂಡಿತು, ಅವನ ಕ೦ರಸ್ವರವು ಕುಗ್ಗಿ ತು.ಇವನು ಹೊರಡುವುದಕ್ಕೆ ಮೊದಲು ಅತ್ಯಂತಪ್ರಕಾಶವಿಶಿಷ್ಟವಾಗಿ ಕಾಣುತಿದ್ದ ಹಗಲು, ಅಕಸ್ಮಾತಾಗಿ ಭಯಂಕರವಾದ ಬಿರುಗಾಳಿಯಿಂದ ಮೋಡಮುಚ್ಚಿ ಕತ್ತಲೆಕವಿದಂತಾಯಿತು. ದಾರಿಯಲ್ಲಿ ಮೃಗಪಕ್ಷಗಳೆಲ್ಲವೂ ಭಯಂಕರಧ್ವನಿಯಿಂದ ಕೂಗಿಡುತಿದ್ದುವು ಸಿಂಹದಂತೆ ಉಬ್ಬಿ ದಹೆಗಲುಳ್ಳ ವನಾಗಿಯೂ,ಹೆಬ್ಬುಲಿ ಯಂತೆ ಪರಾಕ್ರಮವುಳ್ಳವನಾಗಿಯೂ ಇದ್ದ ಅಕಂ