ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫೬.} ಯುದ್ಧಕಾಂಡವು. ೨೪೧೧ ಯಿತು. ಇನ್ನು ಅವನೊಡನೆ ಯುದ್ಧ ಮಾಡುವುದೆಂದರೇನು ? ಸಮಸ್ತವಾನ ರರೂ ಆಕಂಪನನ ಬಾಣಗಳಿಂದ ನೊಂದು, ಚೆಲ್ಲಾ ಚದರಾಗಿ ಓಡುವುದ ಕ್ಲಾರಂಭಿಸಿದರು. ಹೀಗೆ ತನ್ನ ಕಡೆಯ ವಾನರರು ಅಕಂಪನನ ಕೈಗೆ ಸಿಕ್ಕಿ ಮೃತ್ಯುವಶರಾಗುತಿದ್ದುದನ್ನು ನೋಡಿ, ಮಹಾಬಲಾಡ್ಯನಾದ ಹನುಮಂ ತನು, ಆ ರಾಕ್ಷಸರನನ್ನು ತಡೆಯುವುದಕ್ಕಾಗಿ ಮುಂದೆ ಬಂದನು. ಈ ಮಹಾ ಕಪಿಯು ತಮಗೆ ಸಹಾಯಕನಾಗಿ ಮುಂದೆ ಬಂದುದನ್ನು ನೋಡಿ, ಆ ವಾನ ರವೀರರೂಕೂಡ, ಸಂತೋಷಗೊಂಡವರಾಗಿ, ಎಲ್ಲರೂ ಹಿಂತಿರುಗಿ ಬಂದು ಗುಂಪುಗೂಡಿ, ಹನುಮಂತನನ್ನು ಸುತ್ತಿನಿಂತರು ಬಲಾಢನಾದ ಆ ಹನು ಮಂತನು ತಮಗೆ ಬೆಂಬಲವಾಗಿ ಮುಂದೆಬಂದು ನಿಂತುದನ್ನು ನೋಡಿದೊಡನೆ ಅಲ್ಲಿದ್ದ ಸಮಸ್ತವಾನರಯೂಥಪತಿಗಳಿಗೂ ಮೊದಲಿದ್ದ ಬಲವು ಇಮ್ಮಡಿ ಯಾದಂತೆ ತೋರಿತು. ಇಷ್ಟರಲ್ಲಿ ಆಕಂಪನನು ತನ್ನ ಮುಂದೆ ಬೆಟ್ಟದಂತೆ ನಿಂತಿದ್ದ ಹನುಮಂತನನ್ನು ನೋಡಿ, ಇಂದ್ರನು ಪರೂತಗಳಮೇಲೆ ಮಳೆಯ ನ್ನು ಸುರಿಸುವಂತೆ, ಅವನಮೇಲೆ ಬಾಣವರ್ಷಗಳನ್ನು ಕರೆದನು, ಬಲಾಡ್ಯ ನಾದ ಹನುಮಂತನಾದರೋ, ತನ್ನ ಮೈಮೇಲೆ ಬಿಳುತಿದ್ದ ತಿಕ್ಷಬಾ ಣಗಳನ್ನೂ ಲಕ್ಷಮಾಡದೆ, ಅಕಂಪನನನ್ನು ಕೊಲ್ಲಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿಕೊಂಡನು. ಅಕ್ಷಣವೇ ತೇಜಸ್ವಿಯಾಗಿಯೂ ವಾಯುಪುತ್ರ ನಾಗಿಯೂ ಇರುವ ಆ ಹನುಮಂತನು ನೆಲವನ್ನು ನಡುಗಿಸುವಂತೆ, ವೇಗ ದಿಂದ ಕಾಲಿಡುತ್ತ, ಆ ರಾಕ್ಷಸನಿಗಿದಿರಾಗಿ ಬಂದನು. ತೇಜಸ್ಸಿನಿಂದ ದೇದೀ ಪ್ಯಮಾನನಾಗಿ, ಆಗಾಗ ಸಿಂಹನಾದಮಾಡುತಿದ್ದ ಈ ಹನುಮಂತನ ರೂ ಪವು, ಆಗ ಮಧ್ಯಾಹ್ನದ ಸೂಕ್ಯನ ತೇಜಸ್ಸಿನಂತೆ ನೋಡಲಸಾಧ್ಯವಾಗಿತ್ತು. ಅತಿಕೋಪಾವಿಷ್ಟನಾದ ಹನುಮಂತನು, ಆಗ ತನ್ನ ಕೈಯಲ್ಲಿ ಯಾವ ಆಯು ಧವೂ ಇಲ್ಲದುದನ್ನು ನೋಡಿ, ಸಮೀಪದಲ್ಲಿದ್ದ ಒಂದುಬೆಟ್ಟವನ್ನು ಕೈಗೆತ್ತಿ ಕೊಂಡನು. ಹೀಗೆ ಆ ವಾಯುಪುತ್ರನು ಒಂದೇಕೈಯಿಂದ ಆ ದೊಡ್ಡಬೆ ಟ್ಯವನ್ನು ಮೇಲಕ್ಕೆತ್ತಿಹಿಡಿದು, ಮಹಾಧ್ವನಿಯಿಂದ ಸಿಂಹನಾದಮಾಡುತ್ತ, ಅದನ್ನು ಗಿರಗಿರನೆ ತಿರುಗಿಸಿದನು. ಹಾಗೆಯೇ ಆ ಆಂಜನೇಯನ್ನು, ನಮುಖಿ ಯನ್ನಿ ಹಿಂಸುವುದಕ್ಕಾಗಿ ವಜ್ರಾಯುಧವನ್ನೆತ್ತಿಕೊಂಡು ಬರುವ ಮಹೇಂ ದ್ರನಂತೆ, ಆ ಮಹಾಪದ್ವತವನ್ನು ಕೈಯಿಂದ ತಿರುಗಿಸುತ್ತ, ರಾಕ್ಷಸಸೇನಾ