ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೧೨ ಶ್ರೀಮದ್ರಾಮಾಯಣನ [ಸರ್ಗ, ೫೬, ಪತಿಯಾದ ಅಕಂಪನಮೇಲೆ ನುಗ್ಗಿ ದನು. ಅಕಂಪನನಾದರೋ ಹಿಗೆ ದೊಡ್ಡ ಬೆಟ್ಟವನ್ನು ಹಿಡಿದು ತನ್ನ ಮೇಲೆ ಬರುತಿದ್ದ ಹನುಮಂತನ ನ್ನು ದೂರದಿಂದಲೇ ಕಂಡು, ಅಕ್ಷಣವೇ ಅರ್ಧಚಂದ್ರಬಾಣಗಳನ್ನು ಪ್ರ ಯೋಗಿಸಿ, ಆ ಹನುಮಂತನು ಹಿಡಿದಿದ್ದ ಬೆಟ್ಟವನ್ನು ತುಂಡುಮಾಡಿ ಕೆಡಹಿ ದನು. ಆಗ ಹನುಮಂತನು ತಾನು ಮೇಲಕ್ಕೆತ್ತಿ ಹಿಡಿದಿದ್ದ ಪರತಶಿಖರವು ಅಂಕರಿಕ್ಷದಲ್ಲಿಯೇ ರಾಕ್ಷಸನ ಬಾಣದಿಂದ ಭಿನ್ನ ವಾಗಿ ಬಿದ್ದುದನ್ನು ನೋಡಿ ಅತ್ಯಾಕ್ರೋಶವನ್ನು ಹೊಂದಿದನು. ಹೀಗೆ ಕೋಪಗೊಂಡ ಹನುಮಂತನು ಆಗಲೂ ತನ ದರ್ಪವನ್ನು ಬಿಡದೆ, ವೇಗದಿಂದ ಹೋಗಿ,ಸಮೀಪದಲ್ಲಿ ಬೆಟ್ಟ ದಂತೆ ಮಹೋನ್ನ ತವಾಗಿ ಬೆಳೆದಿದ್ದ ಒಂದು ಆಲದ ಮರವನ್ನು ಕಿತ್ತು ಕೊಂಡನು. ದೊಡ್ಡದೊಡ್ಡ ಶಾಖೆಗಳಿಂದ ಕೂಡಿದ ಆ ವೃಕ್ಷವನ್ನೆತ್ತಿ ಮ ಹೋತ್ಸಾಹದಿಂದ ಕೂಡಿದವನಾಗಿ, ಅದನ್ನು ಗಿರಗಿರನೆ ತಿರುಗಿಸುತ್ತ, ತನ್ನ ತೊಡೆಯ ವೇಗದಿಂದಲೇ ಸಮೀಪದಲ್ಲಿದ್ದ ಇತರವೃಕ್ಷಗಳೆಲ್ಲವೂ ಮುರಿದು ಬಿಳುವಂತೆಯೂ ತನ್ನ ಕಾಲಿನ ತುಳಿತಕ್ಕ ಭೂಮಿಯು ಭೇಟಸುವಂತೆಯೂ ಮಹಾವೇಗದಿಂದ ಅಕೆಂಪನನ ದಿರಿಸಿ ಮುಂದೆ ಹೋದನು. ಹೀಗೆ ಹನು ಮಂತನು ಕೋಪದಿಂದ ಮುಂದೆ ಹೋಗುವಾಗಲೇ, ಅಲ್ಲಲ್ಲಿ ಸಿಕ್ಕಿದ ಆನೆಗ ಇನ್ನೂ , ಆನೆಗಳಮೇಲೆ ಕುಳಿತಿದ್ದ ಮಾವುತರನ್ನೂ, ಅಲ್ಲಲ್ಲಿ ಸಿಕ್ಕಿದ ರಥಗಳ ನ್ಯೂ , ರಥಾರೂಢರಾಗಿದ್ಯ ರಥಿಕರನ್ನೂ , ತನಗಿದಿರಾಗಿ ನಿಂತಿದ್ದ ಪದಾತಿಗೆ ಳನ್ನೂ , ಕ್ರಮಕ್ರಮವಾಗಿ ಕೊಂದು ಕೆಡಹುತ್ತ ಬಂದನು ಕೋಪಗೊಂಡ ಕಾಲಾಂತಕನಂತೆ ಆ ಯುದ್ಧಭೂಮಿಯಲ್ಲಿ ರಾಕ್ಷಸಸೈನ್ಯವನ್ನು ಕೊಂದು ಕೆಡಹುತಿದ್ದ ಆ ಹನುಮಂತನನ್ನು ನೋಡಿ, ರಾಕ್ಷಸರೆಲ್ಲರಿಗೂ ಭಯವು ಹು ಟೈತು. ಅನೇಕರಾಕ್ಷಸರು ಇವನಮುಂದೆ ನಿಲ್ಲಹಾರದೆ ಭಯದಿಂದ, ಪಲಾ ಯನಮಾಡುತಿದ್ದರು. ಇಷ್ಟರಲ್ಲಿ ರಾಕ್ಷಸವೀರನಾದ ಆಕಂಪನು ತನ್ನ ಕಡೆಯ ರಾಕ್ಷಸರೆಲ್ಲರೂ ಭಯದಿಂದ ಪಲಾಯನಮಾಡುತ್ತಿರುವುದನ್ನೂ, ಹನುಮಂತನು ಕೋಪದಿಂದ ಮುಂದೆ ಬರುವುದನ್ನ ನೋಡಿ, ಅತ್ಯಾ ಕೋಶವನ್ನು ಹೊಂದಿದವನಾಗಿ, ದೊಡ್ಡ ಸಿಂಹನಾದವನ್ನು ಮಾಡಿದನು. ಒಡನೆಯೇ ಆ ಆಕಂಪನನು, ಮರ್ಮಭೇದಕಗಳಾದ ಹದಿನಾಲ್ಕು ತೀಕ್ಷಬಾ ಣಗಳಿಂದ ಹನುಮಂತನನ್ನು ಪ್ರಹರಿಸಿದನು. ಹನುಮಂತನ ದೇಹದಲ್ಲಿ ಪರಂ