ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೯೦ ಶ್ರೀಮದ್ರಾಮಾಯಣವು (ಸರ್ಗ ೪. ಯುದ್ಧದಲ್ಲಿ) ದೇವಸೇನೆಯು ಹೇಗೋಹಾಗೆ ಪ್ರಕಾಶಿಸುತ್ತಿರುವುವು ಎಲೈ ಆರನೆ' ಈ ಶುಭನಿಮಿತ್ತಗಳೆಲ್ಲವನ್ನೂ ನೋಡಿದಮೇಲೆ ನಾವು ಅವಶ್ಯವಾಗಿ ಸಂತೊಷಿಸಬೇಕಲ್ಲವೆ?” ಎಂದನು ಹೀಗೆ ಲಕ್ಷಣನು ಸಂತೋಷದಿಂದ ತನ್ನ ಣ್ಣನಾದ ರಾಮನಿಗೆ ಆಗಾಗ ದುಃಖಸಮಾಧಾನವನ್ನು ಮಾಡುತ್ತಿರಲು, ಹಾ ಗೆಯ ನಖದಂಷ್ಟ್ರಾಯುಧಗಳುಳ್ಳ ಕಪಿಗಳಿಂದಲೂ, ಕರಡಿಗಳಿಂದಲೂ, ಹುಲಿಗಳಿಂದಲೂ ತುಂಬಿದ ಆ ದೊಡ್ಕ ಸೈನ್ಯವು, ಅಲ್ಲಿನ ಸಮಸ್ಯಪ್ರದೇ ಶವನ್ನೂ ವ್ಯಾಪಿಸುವಂತೆ ಮುಂದೆಮುಂದೆ ಸಾಗಿಬರುತಿತ್ತು, ಈ ದೊಡ್ಡ ಕಪಿಸೈನ್ಯವು ಹೊರಟುಬರುವಾಗ, ಆದರೆ ಕೈಕಾಲುಗಳ ಬಡಿತಕ್ಕೆ ಸೆಲದಿಂದೆ ಹೈ ಧೂಳಿಯು, ಸೂರತೇಜಸ್ಸನ್ನೂ ಮರೆಸುವಂತೆ ಮಹಾಭಯಂಕರವಾಗಿ ಸಮಸ್ತಲೋಕವನ್ನೂ ವ್ಯಾಪಿಸಿತು ಭಯಂಕರವಾದ ಆ ವಾನರಸೈನ್ಯವು ಮೇಫುಗಳು ಆಕಾಶವನ್ನು ಮರಸುವಂತೆ, ಪ್ರತಗಳಿಂದಲೂ, ವನನಿಗಳಿಂ ದಲೂ ಕೂಡಿದ ದಕ್ಷಿಣದಿಗ್ಯಾಗವೆಲ್ಲವನ್ನೂ ಎಡೆಬಿಡದೆ ಮರೆಸಿತು ಮತ್ತು ಆ ವಾನರಸ್ಯವ್ಯವು ಇಲ್ಲಲ್ಲಿ ಅಡ್ಡಲಾಗಿದ್ದ ನಟಗಳಲ್ಲಿಳಿದು, ಸಾಲಾಗಿ ಎಡೆ ಬಿಡದೆ ನಡೆದು ಹೋಗುವಾಗ, ಆ ನbಪ್ರವಾಹಕ್ಕೆ ಅಣೆಕಟ್ಟು ಕಟ್ಟಿ ದಂ ತಾಗಿ, ಆ ಪ್ರವಾಹಗಳು ಮುಂದೆ ಹೋಗುವುದಕ್ಕೆ ದಾರಿಯಿಲ್ಲದೆ, ಹಿಂಮೊ ಗವಾಗಿ ತಿರುಗಿ, ಬಹುಜನಗಳವರೆಗೆ ಹಿಂದಕ್ಕೆ ಪ್ರವಹಿಸುತಿದ್ದುವು ಆ ವಾನರರೋ, ಅಲ್ಲಲ್ಲಿ ದಾರಿಗಡ್ಡಲಾದ ಕೆಳಗಳನ್ನು ಕಂಡಾಗ, 'ನಡುನೀರಿನ ಔ ಈಜಿಹೋಗುವರು ದೊಡ್ಡ ಕಾಡು ಬೆಟ್ಟಗಳು ಸಿಕ್ಕಿದಾಗ ಅವುಗ ಳನ್ನು ಪಕ್ಕಕ್ಕೆ ಬಿಟ್ಟು, ಸುತ್ತಿಕೊಂಡು ಹೋಗುವರು : ಸಮಪ್ರದೇಶಗಳಲ್ಲಿ ಧಾರಾಳವಾಗಿ ಸುತ್ತಿ ಸುತ್ತಿ ನೋಡುತ್ತ ನಡೆಯುವರು' ಫಲವೃಕ್ಷಗಳನ್ನು ಕಂಡಾಗ ಅವುಗಳ ಕೆಳಗೆ ನುಗ್ಗಿ ಹೋಗುವರು ಹೀಗೆ ಆ ದೊಡ್ಡವಾನರಸ್ತೆ ನ್ಯವು ಅಲ್ಲಿನ ಪ್ರದೇಶವೆಲ್ಲವನ್ನೂ ವ್ಯಾಪಿಸಿ ದಾರಿ ನಡೆಯುತಿತ್ತು. ಮೊದಲೇ ವಾಯುವಿಗೆ ಸಮವಾದ ವೇಗವುಳ್ಳ ಆ ವಾನರರಿಗೆ,ರಾಮಕಾರವನ್ನು ನಡೆಸು ವುದರಲ್ಲಿ ಉಂಟಾದ ಮಹೊತ್ಸಾಹವು, ಅವರ ಪರಾಕ್ರಮವನ್ನೂ ಸಂ ತೋಷವನ್ನೂ ಮತ್ತಷ್ಟು ವಿಶೇಷವಾಗಿಹೆಚ್ಚಿಸಲು,ದಾರಿಯಲ್ಲಿ ನಡೆಯುವಾಗ ಆ ವಾನರರು ಒಬ್ಬರಿಗೊಬ್ಬರು ತಮ್ಮ ಹರ್ಷವನ್ನೂ, ವೀರವನ್ನೂ,