ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫೬ ] ಯುದ್ದ ಭಾಂಡವ ೨೪೧೩ ಪರೆಯಾಗಿ ಬಾಣಗಳು ಬಂದು ನಾಟಲು, ಅನೇಕವೃಕ್ಷಗಳಿಂದ ತುಂಬಿದ ದೊಡ್ಡ ಪಕ್ವತದಂತೆ ಕಾಣುತಿದನು ಮಹಾಕಾಯವುಳ್ಳವನಾಗಿಯೂ, ಮಹಾವೀರವುಳ್ಳವನಾಗಿಯೂ, ಮಹಾದೈತ್ಯಶಾಲಿಯಾಗಿಯೂ ಇದ್ದ ಆ ಹನುಮಂತನು, ಅಕಂಪನನ ಬಾಣಗಳಿಂದ ನಾಟಿದ ದೇಹವುಳ್ಳವನಾಗಿ ಪ ಹಿತವಾದ ಮುತ್ತುಗದ ಮರದಂತೆಯೂ, ಹೊಗೆಯಿಲ್ಲದೆ ಉರಿಯುತ್ತಿರುವ ಅಗ್ನಿ ಹೋತ್ರನಂತೆಯೂ ಕಾಣಿಸಿದನು ಆಮೇಲೆ ವೀರನಾದ ಹನುಮಂ ತನು, ಮಿತಿಮೀರಿದ ತನ್ನ ವೇಗವನ್ನವಲಂಬಿಸಿ, ಮತ್ತೊಂದು ದೊಡ್ಡ ಮ ರವನ್ನು ಕಿತ್ತು ತಂದು, ಅದರಿಂದ ರಾಕ್ಷಸನ ಸೇನಾಪತಿಯಾದ ಆ ಅಕಂಪ ನನ ತಲೆಯಮೇಲೆ ಪ್ರಹರಿಸಿದನು ಮಹಾತ್ಮ ನಾಗಿಯೂ, ವಾನ ರೋತ್ತಮನಾಗಿಯೂ ಇದ್ದ ಆ ಹನುಮಂತನು, ವೃಕ್ಷದಿಂದ ಪ್ರಹರಿಸಿ ದೊಡನೆಯೇ, ಅಕಂಪನನು ಅದರಿಂದ ಹತನಾಗಿ ನೆಲಕ್ಕೆ ಬಿದ್ದನು ಈ ರಾಕ್ಷಸಶ್ರೇಷ್ಠ ನಾದ ಆಕಂಪನನು ಹನುಮಂತನಿಂದ ಹತನಾಗಿಬಿದ್ದು ದನ್ನು ನೋಡಿ,ಅಲ್ಲಿದ್ದ ಸಮಸ್ವರಾಕ್ಷಸರಿಗೂ ಮಹಾಭಯವು ಹುಟ್ಟಿತು. ಭೂಕಂಪವುಂಟಾದಾಗ ಭೂಮಿಯ ಮೇಲಿನ ವೃಕ್ಷಗಳೆಲ್ಲವೂ ನಡುಗುವಂತೆ, ಎಲ್ಲರೂ ಭಯದಿಂದ ಗಡಗಡನೆ ನಡುಗುತಿದ್ದರು ಎಲ್ಲರ ಮನಸ್ಸಿಗೂ ಮ ಹಾವ್ಯಧೆಯುಂಟಾಯಿತು ಆ ರಾಕ್ಷಸರೆಲ್ಲರೂ ಹೀಗೆ ಪರಾಜಯವನ್ನು ಹೊಂಟ, ತಾವು ಹಿಡಿದಿದ್ದ ಆಯುಧಗಳನ್ನು ಅಲ್ಲಲ್ಲಿಯೇ ಬಿಸುಟು, ಅಲ್ಲಲ್ಲಿ ತ ಮ್ಮನ್ನು ಬೆನ್ನಟ್ಟಿ ಬರುತಿದ್ದ ವಾನರು ಹಾವಳಿಯನ್ನು ತಡೆ ಯಲಾರದೆ, ಲಂ ಕೆಗೆ ಹಿಂತಿರುಗಿ ಓಡಿಹೋದರು ಹೀಗೆ ಪರಾಜಿತರಾಗಿ ಓಡುತಿದ್ಯ ಆ ರಾಕ್ಷ ಸರ ದುರವಸ್ಥೆಯನ್ನು ಕೇಳಬೇಕೆ? ಆ ರಾಕ್ಷಸರೆಲ್ಲರೂ ತಾವು ಬದುಕಿದರೆ ಸಾಕೆಂದು ದಿಕ್ಕುದಿಕ್ಕಿಗೆ ಪಲಾಯನಮಾಡುವಾಗ, ಒಬ್ಬೊಬ್ಬರೂ ಬಿಚ್ಚಿದ ತಲೆಕೂದಲುಳ್ಳವರಾಗಿದ್ದರು. ಒಬ್ಬೊಬ್ಬರೂ ಭಯದಿಂದ ತಡಬಡಿಸುತಿ ದರು. ಒಬ್ಬೊಬ್ಬರ ಮೈಯಲ್ಲಿಯೂ ಬೆವರು ಕಿತ್ತುಕೊಂಡಿತು. ಒಬ್ಬೊ ಬ್ಬರೂ ನಿಟ್ಟುಸಿರನ್ನು ಬಿಡುತ್ತ, ಮಾನದಮೇಲೆಯೂ ದೃಷ್ಟಿಯಿಲ್ಲದೆ, ಒಬ್ಬ ರನ್ನೊಬ್ಬರು ನೂಕಿಕೊಂಡು ಪಲಾಯನಮಾಡುತಿದ್ದರು ಮತ್ತು ಆ ರಾಕ್ಷ ಸರು ತಮ್ಮನ್ನು ಬೆನ್ನಟ್ಟಿ ಬರುತಿದ್ದ ವಾನರರನ್ನು ಆಗಾಗ ಹಿಂತಿರುಗಿ ನೋ ಡುತ್ತ,ತಮ್ಮ ಮೈಮೇಲೆ ಪ್ರಜ್ಞೆಯಿಲ್ಲದೆ ಓಡಿದರು. ಹೀಗೆ ರಾಕ್ಷಸರೆಲ್ಲರೂ