ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೧೪ ಶ್ರೀಮದ್ರಾಮಾಯಣವು [ಸರ್ಗ, ೫೭. ಭಯದಿಂದ ಪಲಾಯನಮಾಡಿ ಲಂಕೆಯನ್ನು ಸೇರಿದಮೇಲೆ, ಇತ್ತಲಾಗಿ ಬ ಲಾಡ್ಯರಾದ ಸಮಸ್ಯವಾನರರೂ ಸೇರಿ ಹನುಮಂತನನ್ನು ಬಹಳವಾಗಿ ಪೂಜಿಸಿದರು, ಬಲಾಢನಾದ ಹನುಮಂತನೂಕೂಡ ಅವರ ಸತ್ಕಾರಕ್ಕೆ ಸಂತೋಷಪಟ್ಟವನಾಗಿ ಅವರನ್ನು ಕುರಿತು (ಎಲೆ ಮಿತ್ರರೆ ನಿಮ್ಮ ಸಾ ಹಾಯ್ಯದ ಬಲದಿಂದಲೇ ನನಗೆ ಈ ಜಯವುಂಟಾಯಿತೇ ಹೊರತು ಬೇರೆ ಯಲ್ಲ.” ಎಂದು ಹೇಳಿ, ಅವರೆಲ್ಲರನ್ನೂ ಅವರವರ ಗೌರವಕ್ಕೆ ತಕ್ಕಂತೆ ಮ ೩ ಸಿದನು ಜಯಶೀಲರಾದ ಸಮಸ್ತವಾನರರೂ, ಹನುಮಂತನಿಗುಂಟಾದ ಜಯವನ್ನು ತಮ್ಮ ಸಮಸ್ಯಸೈನ್ಯಕ್ಕೂ ತಿಳಿಸುವಂತೆ ತಮ್ಮ ಶಕ್ತಿಯನ್ನು ಮೀರಿ ಸಿಂಹನಾದಗಳನ್ನು ಮಾಡಿದರು ಆ ಸಿಂಹನಾದಧ್ವನಿಯಿಂದಲೇ ಬಲಾಡ್ಯರಾದ ಅನೇಕರಾಕ್ಷಸರನ್ನು ನಡುಗಿಸುತಿದ್ರರು ಹೀಗೆ ವಾಯುಪು ತ್ರನಾದ ಆ ಮಹಾಕಸಿಯು, ಆಕಂಪನನನೊಡನೆ ಅನೇಕರಾಕ್ಷಸರನ್ನು ಸಂಹರಿಸಿ, ಪೂವ್ವದಲ್ಲಿ ಭಯಂಕರನಾಗಿಯೂ ಶತ್ರುನಾಶಕನಾಗಿಯೂ ಇದ್ದ ಕೈಟಭಾಸುರನನ್ನು ಕೊಂದ ಮಹಾವಿಷ್ಣುವಿನಂತೆ ವಿರಲಕ್ಷ್ಮಿ ವಿರಾಜಿ ತನಾಗಿ, ಆ ರಣರಂಗದಲ್ಲಿ ಶೋಭಿಸುತ್ತಿದ್ದನು ಸಸ್ಯದೇವತೆಗಳೂ ಆ ಹನುಮಂತನನ್ನು ಕೊಂಡಾಡಿ ಪೂಜಿಸುತಿದ್ದರು ರಾಮಲಕ್ಷ್ಮಣರೂ,ಸುಗ್ರೀ ವಾದಿವಾನರರೂ, ಮಹಾಬಲಾಢನಾದ ವಿಭೀಷಣನೂ ಆ ಹನುಮಂತನ ವೀರಕ್ಕೆ ಮೆಚ್ಚಿ, ಅವನನ್ನು ಬಹಳವಾಗಿ ಪೂಜಿಸಿ ಮನ್ನಿಸಿದರು, ಇಲ್ಲಿಗೆ ಐವತ್ತಾರನೆಯ ಸರ್ಗವು + ಪ್ರಹಸ್ತನು ಯುದ್ಧಕ್ಕೆ ಹೊರಟುದು, +u ರಾಕ್ಷಸೇಶ್ವರನಾದ ರಾವಣನು ಆಕಂಪನನ ವಧವನ್ನು ಕೇಳಿದೊಡನೆ ತಡೆಯಲಾರದ ಕೋಪವನ್ನು ಹೊಂದಿದನು. ಭಯದಿಂದ ಅವನ ಮುಖ ದಲ್ಲಿ ಸ್ವಲ್ಪವಾಗಿ ದೈನ್ಯವೂ ತೋರಿತು. ಮುಂದಿದ್ದ ತನ್ನ ಸಮಸ್ಯಮಂತ್ರಿ ಗಳನ್ನೂ ಕಣ್ಣಿಟ್ಟು ನೋಡಿದನು. ತನ್ನಲ್ಲಿ ತಾನೇ ಮುಹೂರ್ತಕಾಲದವರೆಗೆ ಚಿಂತಿಸಿದನು. ಹೀಗೆ ರಾವಣನು ಕ್ಷಣಕಾಲದವರೆಗೆ ವಿಚಾರಮಗ್ನ ನಾಗಿ ಈು, ಕೊನೆಗೆ ಮಂತ್ರಿಗಳೊಡನೆ ಆಲೋಚಿಸಿ, ಮರುದಿನದ ಪ್ರಾತಃಕಾ