ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೧೩ ಶ್ರೀಮದ್ರಾಮಾಯಣವು [ಸರ್ಗ, ೫೩. ಆ ವಾನರರೆಲ್ಲರೂ, ಸಹಜವಾಗಿಯೇ ಥೈಲ್ಯವಿಲ್ಲದವರು, ಯುದ್ಧಕಾಲ್ಯದಲ್ಲಿ ಚೆನ್ನಾಗಿ ಶಿಕ್ಷೆಹೋಂದದವರು, ಬಹಳ ಚಪಲಸ್ವಭಾವವುಳ್ಳವರು. ಆದುದ ರಿಂದ ಸಿಂಹಗರ್ಜನವನ್ನು ಕೇಳಿದ ಆನೆಗಳಂತೆ ನಿನ್ನ ಸಿಂಹನಾದವನ್ನು ಕೇಳಿದಮಾತ್ರದಲ್ಲಿಯೇ ಸಹಿಸಲಾರದೆ ಪಲಾಯನಮಾಡುವರು ಎಲೈ | ಮಂತ್ರಿಶ್ರೇಷ್ಠನೆ! ಹಾಗೆ ವಾನರಸೈನ್ಯವೆಲ್ಲವೂ ಪಲಾಯನಮಾಡಿದ ಉ ತರಕ್ಷಣದಲ್ಲಿಯೇ ರಾಮಲಕ್ಷ್ಮಣರಿಬ್ಬರೂ, ತಮಗೆ ಬೇರೆ ಸಹಾಯವಿಲ್ಲ ದುದಕ್ಕಾಗಿ ನಿನ್ನ ಕೈಗೆ ಸಿಕ್ಕಿಬೀಳುವರು, ಪ್ರಹಸ್ತಾ ' ಒಂದುವೇಳೆ ನೀ ನು ಮುಂದಿನ ಯುದ್ಧದಲ್ಲಿಯೂ ನಮಗೇ ಹಾನಿಯುಂಟಾಗಬಾರದೆ ? ಜಯಾಪಜಯಗಳನ್ನು ಮೊದಲೇ ಹೇಗೆ ನಿರ್ಣಯಿಸಬಹುದು? ಆದುದರಿಂದ ಯುದ್ಧಮಾಡದೆ ಈಗ ತಟಸ್ಥರಾಗಿರುವುದರಲ್ಲಿ ದೋಷವೇನು ?” ಎಂದು ಕೇಳುವೆಯಾ? ಹಾಗಲ್ಲ' ನಾವು ಯುದ್ಧವನ್ನು ಮಾಡದೆ ತಟಸ್ಥರಾದರೂ ಶತ್ರುಗಳು ನಮ್ಮನ್ನು ಸುಮ್ಮನೆ ಬಿಡಲಾರರು, ಅವರಿಂದ ನಮಗೆ ಮರಣವುಂ ಟಾಗುವುದೇ ನಿಶ್ಚಯವು!ಹಾಗಿಲ್ಲದೆ ಈಗ ನಾವು ನಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಿ ಯುದ್ಧವನ್ನು ನಡೆಸಿದಪಕ್ಷದಲ್ಲಿ, ನಮಗೆ ಮರಣವೇ ಉಂ ಟಾಗುವುದೊ, ಜಯವೇ ಉಂಟಾಗುವುದೋ ಎಂದು ನಿಶ್ಚಯಿಸಿ ತಿಳಿಯು ವುದಕ್ಕಿಲ್ಲ.ಆದುದರಿಂದ ನಾವು ಮರಣವನ್ನು ಹೊಂದದೆ ಜಯಶೀಲರಾಗಿ ಬ ರಬಹುದೆಂಬ ಸಂದೇಹವಾದರೂ ಉಂಟು. ಈಗ ನಾವು ಯುದ್ಧವನ್ನು ನಿಲ್ಲಿ ಸಿದಪಕ್ಷದಲ್ಲಿ ನಿಸ್ಸಂದೇಹವಾಗಿ ಮರಣವೇ ಸಂಭವಿಸುವುದು. ಆದುದರಿಂ ದ ನಿಸ್ಸಂದೇಹವಾಗಿ ಸಂಭವಿಸುವ ಮರಣಕ್ಕೆ ತಲೆಯೊಡ್ಡುವುದಕ್ಕಿಂತ ಲೂ, ಸಂದೇಹಾಸ್ಪದವಾದ ಮರಣಕ್ಕೆ ತಲೆಯೊಡ್ಡುವುದು ಮೇಲಲ್ಲವೆ ? ಆದುದರಿಂದ ಈಗ ನಾವು ಸುಮ್ಮನಿರುವುದಕ್ಕಿಂತಲೂ, ಯುದ್ಧಕ್ಕೆ ಹೊರ ಡುವುದೇ ಉಚಿತವು ಇದೇ ನನ್ನ ಭಿಪ್ರಾಯವು. ಇದರಮೇಲೆ ಈ ನನ್ನ ಅಭಿ ಪ್ರಾಯಕ್ಕೆ ಅನುಕೂಲವಾಗಿಯೋ, ಪ್ರತಿಕೂಲವಾಗಿಯೋ ನಿನ್ನ ಮನಸ್ಸಿ ಗೆ ಉಚಿತವೆಂದು ತೋರಿದುದನ್ನು ನನಗೆ ತಿಳಿಸು, ಹೇಗಿದ್ದರೂ ನೀನು ನನ ಗೆ ಹಿತವನ್ನು ಕೋರತಕ್ಕವನಾದುದರಿಂದ,ನಿನ್ನ ಮನೋಭಿಪ್ರಾಯವೇ ನನ ಗೂ ಹಿತವಾಗುವುದು”ಎಂದನು ರಾವಣನು ಹೇಳಿದ ಈ ಮಾತನ್ನು ಕೇಳಿ ಸೇನಾಪತಿಯಾದ ಪ್ರಹಸನು, ಶುಕ್ರಾಚಾರನು ದೈತ್ಯೇಂದ್ರನಿಗೆ ಮಂ