ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೫೭.) ಯುದ್ಧ ಕಂಡವು. ೨೪೧೬ ಶ್ರಾಲೋಚನೆಯನ್ನು ಹೇಳುವಂತೆ, ಅವನನ್ನು ಕುರಿತು, ಎಲೆ ರಾಜೇಂದ್ರ ನೆ!ಇದು ಮೊದಲೇ ನಾವು ಕಾರನಿಪುಣರಾದ ವಿಭೀಷಣಾದಿಮಂತ್ರಿಗಳೊ ಡನೆ ಆಲೋಚಿಸಿದ ವಿಷಯವೇಹೊರತು ಹೊಸದಲ್ಲ ಆ ಕಾಲದಲ್ಲಿ ನಮ್ಮಲ್ಲಿ ಯೇ ಒಬ್ಬರೊಬ್ಬರು ಒಂದೊಂದುಮತವನ್ನು ಹಿಡಿದು ಭಿನ್ನಾಭಿಪ್ರಾಯವು ಳ್ಳವರಾಗಿ, ಐಕಮತ್ಯವಿಲ್ಲದಿದ್ದರು. ಕೊನೆಗೆ ಒಬ್ಬೊಬ್ಬರಿಗೆ ಮನಸ್ತಾಪವೂ ಹುಟ್ಟುವಂತಾಯಿತು. ಇದರಿಂದಲ್ಲವೇ ವಿಭೀಷಣನೂ ನಮ್ಮನ್ನು ಬಿಟ್ಟು ಶ ತುಪಕ್ಷವನ್ನು ಸೇರಿಬಿಟ್ಟನು ನನಗೂ ಆಗ ಸೀತೆಯನ್ನು ರಾಮನಿಗೆ ಹಿಂತಿರು ಗಿ ಕೊಡುವುದೇ ಮೇಲೆಂದೂ, ಹಾಗಿಲ್ಲದಿದ್ದರೆ ಕಲಹಕ್ಕೆ ಕಾರಣವೆಂದೂ ಚೆನ್ನಾಗಿ ತಿಳಿತಿದ್ದಿತು ನನ್ನ ನಿಶ್ಚಯದಂತೆಯೇ ಈಗ ಯುದ್ಧವು ಪ್ರಾಪ್ತವಾ ಗಿರುವುದನ್ನೂ ನಾವು ಕಣ್ಣಾರೆ ನೋಡುತ್ತಿರುವೆವು ಎಲೆ ಮಹಾರಾಜನೆ'ನನ್ನ ಮತವು ಹೇಗಿದ್ದರೇನು?ಮುಖ್ಯವಾಗಿ ಇದುವರೆಗೆ ನೀನು ನನ್ನನ್ನು ಭೂಷಣಾ ಓದಿನಗಳಿಂದಲೂ, ಸಮಾನದಿಂದಲೂ, ಪ್ರಿಯಭಾಷಣದಿಂದಲೂ, ಸಾಂ ತ್ವವಚನಗಳಿಂದಲೂ, ಎಷ್ಟೋ ವಿಧದಲ್ಲಿ ಸತ್ಕರಿಸಿರತಕ್ಕವನು ಹೀಗೆ ನಿನ್ನಿಂದ ಆನೇಕವಿಧದಲ್ಲಿ ಸತ್ಕರಿಸಿಸಲ್ಪಟ್ಟ ನಾನು, ಈಗ ನಿನಗೆ ಕಷ್ಟಕಾಲವು ಬಂ ದೊದಗಿದಾಗ, ನಿನ್ನ ಮನಃಪ್ರೀತಿಗಾಗಿ ಯಾವ ಕಾಠ್ಯವನ್ನು ತಾನೇ ಮಾ ಡಲೊಲ್ಲೆನು? ಯಾವುದನ್ನಾ ಜ್ಞಾಪಿಸಿದರೂ ಸಿದ್ಧನಾಗಿರುವೆನು ಎಲೆ ರಾ ಜೇಂದ್ರಸಿ' ನನಗೆ ನನ್ನ ಪ್ರಾಣಗಳಾಗಲಿ, ನನ್ನ ಮಕ್ಕಳಾಗಲಿ, ನನ್ನ ಪತ್ನಿ ಯರಾಗಲಿ, ನನ್ನ ಧನಧಾನ್ಯಾದಿಸಮೃದ್ಧಿಗಳಾಗಲಿ ನಿನಗಿಂತಲೂ ಹೆಚ್ಚು ಪ್ರೇಮಪಾತ್ರಗಳಲ್ಲ, ನಿನ್ನನ್ನು ಬಿಟ್ಟು, ಅವುಗಳನ್ನು ರಕ್ಷಿಸಬೇಕಾದ ಅವಶ್ಯ ಕವೂ ನನಗಿಲ್ಲ ಎಲೆ ಮಹಾರಾಜನೆ ! ಇದೋ ! ಈಗಲೇ ನಾನು ನಿನಗಾಗಿ ಯುದ್ಧವೆಂಬ ಅಗ್ನಿ ಕುಂಡದಲ್ಲಿ ನನ್ನ ಪ್ರಾಣಗಳನ್ನು ಆಹುತಿಮಾಡುವೆನು ನೋಡು” ಎಂದನು. ಸೇನಾಪತಿಯಾದ ಪ್ರಹಸನು ತನ್ನ ಪ್ರಭುವಾದ ರಾ ವಣನಿಗೆ ಈ ಮಾತನ್ನು ಹೇಳಿ, ಸಮೀಪದಲ್ಲಿದ್ದ ಕೆಲವು ಬಲಾಧ್ಯಕ್ಷರನ್ನು ನೋಡಿ ಎಲೆ ಸೈನ್ಯಾಧಿಕಾರಿಗಳೇ! ಈಗಲೇ ನೀವು ದೊಡ್ಡ ರಾಕ್ಷಸಸೈನ್ಯವ ನು ಸಿದ್ಧಪಡಿಸಿಕೊಂಡು ಬನ್ನಿ ರಿ! ಈಗ ನಾನು ರಣರಂಗಕ್ಕೆ ಹೋಗಿ ಅಲ್ಲಿ ಸಿಡಿಲಿನಂತಿರುವ ನನ್ನ ಬಾಣಗಳ ವೇಗದಿಂದ ಸಮಸ್ತವಾನರಸೈನ್ಯವನ್ನೂ ಕೊಂದು, ಅವರ ರಕ್ತಮಾಂಸಗಳಿಂದ ಹದ್ದು, ಕಾಗೆ, ಮೊದಲಾದ ಮಾಂಸ