ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೧೮ ಶ್ರೀಮದ್ರಾಮಾಯಣವು (ಸರ್ಗ, ೫೬, ಭಕ್ಷಕಗಳಾದ ಪಕ್ಷಿಗಳೆಲ್ಲಕ್ಕೂ ಔತಸವನ್ನು ಮಾಡಿಸುವೆನು. ಈಗಲೇ ಆ ರ ಣಾಂಗಣದಲ್ಲಿರುವ ಮಾಂಸಭಕ್ಷಕಭೂತಗಳೆಲ್ಲವೂ ವಾನರರ ರಕ್ತಮಾಂಸ ಗಳನ್ನು ತಿಂದು ತೇಗಿ ತೃಪ್ತಿ ಹೊಂದಲಿ?”ಎಂದನು ಹೀಗೆ ಪ್ರಧಾನಸೇನಾ ಪತಿಯಾದ ಪ್ರಹಸ್ತನು ಹೇಳಿದೊಡನೆ, ಆ ಸೇನಾಧಿಕಾರಿಗಳೆಲ್ಲರೂ ಅತಿತ್ವ ರೆಯಿಂದ ಹೋಗಿ, ಅನೇಕರಾಕ್ಷಸಸೈನ್ಯಗಳನ್ನು ಸೇರಿಸಿ ತಂದು ರಾಕ್ಷಸನ ಅರಮನೆಯ ಮುಂದೆ ನಿಲ್ಲಿಸಿದರು ಕ್ಷಣಮಾತ್ರದಲ್ಲಿ ಆ ಲಂಕೆಯೆಲ್ಲವೂ ಮದ ದಾನೆಗಳಿಂದ ತುಂಬಿದಂತೆ, ತೀಕ್ಷಗಳಾದ ನಾನಾವಿಧಶಸ್ತ್ರಗಳನ್ನು ಧರಿ ಸಿದ ರಾಕ್ಷಸಸೈನಿಕರಿಂದ ಎಡೆಬಿಡದೆ ತುಂಬಿದಂತಾಯಿತು ಆಗ ಯುದ್ಧಸ ನದ್ಧರಾದ ರಾಕ್ಷಸವೀರರೆಲ್ಲರೂ, ಆಗ್ನಿ ಹೋತ್ರಗಳಲ್ಲಿ ನಾನಾವಿಧಶಾಂತಿ ಹೋಮಗಳನ್ನು ಮಾಡುತಿದ್ದುದರಿಂದಲೂ, ಅಲ್ಲಲ್ಲಿ ಬ್ರಾಹ್ಮಣರನ್ನು ಗಂ ಥಪುಷ್ಪಾಹಿಗಳಿಂದ ಸತ್ಕರಿಸುತಿದ್ದುದರಿಂದಲೂ, ಆ ಲಂಕಯೊಳಗಿನ ವಾ ಯವು, ಅಜ್ಯಗಂಧದಿಂದಲೂ, ಗಂಧಪುಷ್ಪಾದಿಗಳ ಸುವಾಸನೆಯಿಂದಲೂ, ಕೂಡಿ ಮನೋಹರವಾಗಿ ಬೀಸುತಿತ್ತು. ಆಗ ಯುದ್ಧಸನ್ನ ಇರಾದ ರಾಕ್ಷ ಸರೆಲ್ಲರೂಮಹೊತ್ಸಾಹಗೊಂಡು, ವಿಜಯಮಂತ್ರದಿಂದ ಮಂತ್ರಿತಗಳಾದ ನಾನಾವಿಧಪಷ್ಟಮಾಲಿಕೆಗಳನ್ನು ಧರಿಸಿ,ಧನುರ್ಬಾಣಗಳನ್ನು ಹಿಡಿದು, ಯು ಈಕವಚಗಳನ್ನಿಟ್ಟು, ಎಲ್ಲರೂ ಒಟ್ಟಾಗಿ ಸೇರಿ ಬಂದು, ತಮಗೆ ರಾಜನಾದ ರಾವಣನಿಗೆ ನಮಸ್ಕರಿಸಿ ಪ್ರಹಸ್ತವನ್ನು ಸುತ್ತಿನಿಂತರು. ಆಮೇಲೆ ಸೇನಾ ಪತಿಯಾದ ಪ್ರಹಸನು ಪ್ರಭುವಾದ ರಾವಣನಿಗೆ ನಮಸ್ಕರಿಸಿ, ಆ ವನ ಅನುಜ್ಞೆಯನ್ನು ಪಡೆದು, ಅತ್ತಲಾಗಿ ಭಯಂಕರವಾದ ರಣಭೇರಿಯು ನುಡಿಸಲ್ಪಡುತ್ತಿರಲು, ಸರಾಯುಧಗಳಿಂದ ಸಿದ್ಧವಾದ ತನ್ನ ದಿವ್ಯರಥವ ಸ್ನೇರಿ ಕುಳಿತನು ಅತ್ಯಂತವೇಗವುಳ್ಳ ಕುದುರೆಗಳಮೇಲೆದೂಡಲ್ಪಟ್ಟು,ಉತ್ತ ಮಸಾರಥಿಯಿಂದ ಕೂಡಿ,ಮೇಫುಗರ್ಜನೆಯಂತೆ ಗಂಭೀರಧ್ವನಿಯುಳ್ಳುದಾಗಿ ದೃಢವಾಗಿದ್ದ ಆ ಪ್ರಹಸ್ತನ ರಥವು,ಚಂದ್ರನಂತೆ ಆಹ್ಲಾದಕರವಾಗಿಯೂ ಸೂ‌ನಂತೆ ತೇಜೋವಿಶಿಷ್ಟವಾಗಿಯೂ ಶೋಭಿಸುತ್ತಿತ್ತು, ಮತ್ತು ಮೇಲೆ ಕಟ್ಟಿದ ಅತಿದೃಢವಾದ ಸರ್ವಧ್ವಜದಿಂದಲೂ, ಮೇಲಾದ ಮುಚ್ಚಳದಿಂ ದಲ,ಉತ್ತಮವಾದ ಚಕ್ರದಿಂದಲೂ, ಚಿನ್ನದ ಕಿಟಿಕಿಗಳಿಂದಲೂ ಕೂಡಿ ದ ಆ ರಥವು, ಲೋಕದಲ್ಲಿ ಶಾಂತಿವಿಶಿಷ್ಯಗಳಾದ ಬೇರೆ ಎಾ ವಸ್ತುಗಳ