ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪so ಶ್ರೀಮದ್ರಾಮಾಯಣನ [ಸರ್ಗ ೫೭. ಮಾಡುತ್ತ ಪ್ರಹಸನ ರಥದಮೇಲೆಯೂ,ಆ ರಥದ ಮುಂದಿರುವವರ ಮೇ ಲೆಯೂ, ರಕ್ತದ ಮಳೆಯನ್ನು ಕರೆಯುತಿದ್ದುವು. ಆ ಪ್ರಹಸ್ತನ ಧ್ವಜಾ ಗ್ರದಮೇಲೆ ಒಂದಾನೊಂದು ಗೃಧಪಕ್ಷಿಯು ದಕ್ಷಿಣಾಭಿಮುಖವಾಗಿ ಕಳಿತು, ತನ್ನ ಕೊಕ್ಕನ್ನು ಬಗ್ಗಿಸಿ, ತನ್ನ ರೆಕ್ಕೆಗಳೆರಡನ್ನೂ ಕೊಕ್ಕಿನಿಂದ ಕೆದರುತಿತ್ತು, ಈ ಸ್ಥಿತಿಯನ್ನು ನೋಡಿದೊಡನೆ, ಪ್ರಹಸನ ಮುಖಕಾಂತಿ ಯು ಕಂಡಿ ಅವನ ಮುಖದಲ್ಲಿ ದೈನ್ಯವು ಕಂಡಿತು. ಇದಲ್ಲದೆ, ರಥವನ್ನು ನಡೆ ಸುತಿದ್ದ ಸಾರಥಿಯ ಕೈಯಿಂದ ಆಗಾಗ ಕುದುರೆಯನ್ನು ಹೊಡೆಯುವಚಾ ಟೆಯು ಜಾರಿ ಕೆಳಗೆ ಬಿಳುತಿದ್ದಿತು, ಈ ಪ್ರಹಸನು ಆಗಾಗ ಜೈತ್ರಯಾತ್ರೆಗೆ ಹೊರಟಾಗ, ಅಷ್ಟು ವಸುಗಳಿಗೂ ದುರಭವಾದ ಯಾವ ಮುಖಕಾಂತಿಯು ಅವನಿಗೆ ಸಹಜವಾಗಿರುತಿತೋ, ಆ ಕಾಂತಿಯಲ್ಲವೂ ಮುಹೂರ್ತಮಾತ್ರ ದಲ್ಲಿ ಕಂಡಿಹೋಯಿತು ಅವನ ಮುಖವು ಬಣ್ಣಗೆಟ್ಟಿತು ಅವನ ಮನಸ್ಸಿನ ಉತ್ಸಾಹವೂ ಅಡಗುತ್ತ ಬಂದಿತು ಅವನ ರಥಾಶ್ವಗಳು ಸಮಸ್ಥಳದಲ್ಲಿ ಯೂ ಕೂಡ ಆಗಾಗ ಕಾಲೆಡವಿ ಮುಗ್ಗರಿಸಿ ಬಿಳುತಿದ್ದುವು, ಬಲಪ ಇರು ಷಗಳಿಂದ ಪ್ರಖ್ಯಾತಿಹೊಂದಿದ ಪ್ರಹಸನು, ಹೀಗೆ ದೊಡ್ಡ ಸೈನ್ಯದೊಡನೆ ಬರುವುದನ್ನು ನೋಡಿ, ಇತ್ತಲಾಗಿ ಸಮಸ್ತವಾನರಸೈನಿಕರೂ ವಿವಿಧಾಯು ಧಗಳನ್ನು ಧರಿಸಿ, ಯುದ್ದೋನ್ಮುಖರಾಗಿ ನಿಂತರು ಈ ವಾನರರು, ತಮ್ಮ ಯುದ್ಧಸಾಧನಗಳಿಗಾಗಿ, ಅತ್ಯಾತುರದಿಂದ ದೊಡ್ಡದೊಡ್ಡ ವೃಕ್ಷಗಳನ್ನೂ, ಶಿಲೆಗಳನ್ನೂ ಕಿಳುವಾಗ, ಅದರಿಂದ ಒಂದು ದೊಡ್ಡ ತುಮುಲಧ್ವನಿಯು ಹೊರಟಿತು. ಅತ್ತಲಾಗಿ ರಾಕ್ಷಸರೂ, ಇತ್ತಲಾಗಿ ವಾನರರೂ, ಮೇಲೆ ಮೇಲೆ ಪರಸ್ವರಸ್ಪರ್ಧೆಯಿಂದ ಸಿಂಹನಾದಗಳನ್ನು ಮಾಡುತ್ತಿರುವಾಗ, ಒಬ್ಬರ ಧ್ವನಿಯನ್ನು ಕೇಳಿ ಮತ್ತೊಬ್ಬರಿಗೆ ಮೇಲೆಮೇಲೆ ರಣೋತ್ಸಾಹವೂ, ಸಂತೋಷವೂ ಹೆಚ್ಚುತಿತ್ತು. ವೇಗಶಾಲಿಗಳಾಗಿಯೂ, ಸಮರ್ಥರಾಗಿಯೂ ಇದ್ದ ವಾನರರಾಕ್ಷಸರಿಬ್ಬರೂ, ಯುದ್ಧದಲ್ಲಿ ಪರಸ್ಪರಜಯಾಕಾಂಕ್ಷೆಯಿಂದ ಮಾಡುತಿದ್ದ ಮಹಾಧ್ವನಿಯು ಮೇಲೆಮೇಲೆ ಪ್ರಬಲವಾಯಿತು. ಹೀಗೆ ಪ್ರಹಸನು ದುರ್ಬುದ್ಧಿಯುಳ್ಳವನಾಗಿ, ವಾನರರನ್ನು ಗೆಲ್ಲಬೇಕೆಂಬ ದುರಾ ಸೆಯಿಂದ ಸುಗ್ರೀವನ ಸೈನ್ಯಕ್ಕಿದಿರಾಗಿ ಹೊರಟು, ಅಗ್ನಿ ಜ್ವಾಲೆಯಲ್ಲಿ ಬಿಳು