ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೨೨ ಶ್ರೀಮದ್ರಾಮಾಯಣವು [ಸರ್ಗ, ೫೮. ದ ಪರಿವೃತನಾಗಿ ಯುದ್ಧೋತ್ಸಾಹದಿಂದ ಗರ್ಜಿಸುತ್ತ ಬರುವುದನ್ನು ವಾನರರೆಲ್ಲರೂ ನೋಡುತಿದ್ದರು, ಆ ರಾಕ್ಷಸರೂ ವಾನರರನ್ನು ಜಯಿಸ ಬೇಕೆಂಬ ಆತುರದಿಂದ ಮುಂದೆ ಬರುವಾಗ, ಅವರವರು ಕೈಯಲ್ಲಿ ಹಿಡಿದಿ ಈ ಕತ್ತಿಗಳು, ಶಕ್ತಾಯುಧಗಳು, ಧನುರ್ಬಾಣಗಳು, ಶೂಲಗಳು, ಕಬ್ಬಿ ಇದೊನಕೆಗಳು, ಗದೆಗಳು, ಪ್ರಾಸಗಳು, ಪರಿಫುಗಳು, ಹಲವುಬಗೆಯ ಗಂ ಡುಗೊಡಲಿಗಳು, ಇವೇ ಮೊದಲಾದ ಆಯುಧಗಳ ಕಾಂತಿಯು, ದೂರದಿಂ ದಲೇ ಮಿಂಚುಹೊಡೆದಂತೆ ಥಳಥಳಿಸುತಿತ್ತು. ಇದನ್ನು ನೋಡಿ ಇತ್ತಲಾ ಗಿ ವಾನರರೂಕೂಡ, ಪಷಿತಗಳಾದ ಗಿಡಗಳನ್ನೂ , ದೊಡ್ಡ ದೊಡ್ಡ ಶಿಲೆ ಗಳನ್ನೂ ಕಿತ್ತುಕೊಂಡು ಯುದ್ಧಕ್ಕೆ ಸಿದ್ಧರಾಗಿ ನಿಂತರು. ಹೀಗೆ ಬಹಳ ಮಂದಿ ವಾನರರೋ, ರಾಕ್ಷಸರೂ, ಯುದ್ಧಸನ್ನದ್ಧರಾಗಿ ಒಬ್ಬರನ್ನೊಬ್ಬರು ಸಮೀಪಿಸಿದಮೇಲೆ, ವಾನರರು ತಿಲಾವರ್ಷಗಳಿಂದಲೂ, ರಾಕ್ಷಸರು ಬಾಣ ವರ್ಷಗಳಿಂದಲೂ, ಒಬ್ಬರಿಗೊಬ್ಬರು ಹೊಡೆದಾಡುವುದಕ್ಕೆ ತೊಡಗಿದರು. ಕ್ರಮಕ್ರಮವಾಗಿ ಯುದ್ಧವು ಪ್ರಬಲವಾಗಿ, ಬಹಳ ಭಯಂಕರವಾಯಿತು. ಅನೇಕರಾಕ್ಷಸರು ಅಲ್ಲಲ್ಲಿ ಸಿಕ್ಕಿದ ಅನೇಕವಾನರರನ್ನು ಕೊಲ್ಲುತ್ತ ಬಂ ದರು. ಹಾಗೆಯೇ ವಾನರರೂ ಅನೇಕರಾಕ್ಷಸರನ್ನು ಕೊಲ್ಲುತ್ತ ಬಂ ದರು. ಕೆಲವು ರಾಕ್ಷಸಸೈನಿಕರು ವಾನರಸೈನ್ಯದಲ್ಲಿ ನುಗ್ಗಿ ಕೆಲವು ವಾನರರನ್ನು ಶೂಲಗಳಿಂದಿರಿದು ಕೊಂದರು ಕೆಲವರನ್ನು ಚಕಾ ಯುಧಗಳಿಂದ ಕತ್ತರಿಸಿದರು ಕೆಲವರನ್ನು ಪರಿಫುಗಳಿಂದ ಬಡಿದರು. ಕೆಲವರನ್ನು ಕೊಡಲಿಗಳಿಂದ ಕಡಿದರು ಹೀಗೆ ರಾಕ್ಷಸರ ಶೂಲಾದ್ಯಾ ಯುಧಗಳಿಗೆ ಸಿಕ್ಕಿದ ವಾನರರಲ್ಲಿ ಕೆಲವರು ಕ್ಷಣಮಾತ್ರದಲ್ಲಿಯೇ ಉಸಿರಡ ಗಿ ನೆಲಕ್ಕೆ ಬಿದ್ದರು. ಕೆಲವರು ಎದೆಯೊಡೆದು ಸತ್ತರು ಕೆಲವರು ಬಾಣ ದಿಂದ ನಾಟಿದ ಮೈಯುಳ್ಳವರಾಗಿ ಸತ್ತು ಬಿದ್ದರು ಕೆಲವರು ಕತ್ತಿಗಳಿಂದ ಎರಡುತುಂಡಾಗಿ ಕತ್ತರಿಸಲ್ಪಟ್ಟ ದೇಹವುಳ್ಳವರಾಗಿ ಪ್ರಾಣಸಂಕಟದಿಂದ ಮಿಲಿಮಿಲಿಯಾಡಿ ಸತ್ತರು. ಕೆಲವರು ರಾಕ್ಷಸರ ಶೂಲಾಯುಧಗಳಿಂದ ಪಾ ರ್ಶ್ವಭಾಗಗಳಲ್ಲಿ ಕತ್ತರಿಸಲ್ಪಟ್ಟು ಕೆಳಗೆ ಬಿದ್ದರು, ಹಾಗೆಯೇ ಅತ್ತಲಾಗಿ ರಾಕ್ಷಸರೂಕೂಡ, ಅತಿಕೋಪಾವಿಷ್ಟರಾದ ವಾನರರ ಕೈಗೆ ಸಿಕ್ಕಿ, ಗಿಡಗ | ಳಿಂದಲೂ, ಪಕ್ವತಶಿಖರಗಳಿಂದಲೂ ಮುರಿದ ಮೈಯುಳ್ಳವರಾಗಿ, ಅಲ್ಲಲ್ಲಿ