ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪ ] ಯುದ್ದಕಾಂಡವು. ೨೦೯೧ ಬಲವನ್ನೂ ತೋರಿಸಿಕೊಳ್ಳುತ್ತ, ಪ್ರಾಯದ ಕೊಬ್ಬಿನಿಂದುಂಟಾದ ನಾ ನಾಚೇಷ್ಟೆಗಳನ್ನಾ ರಂಭಿಸಿಬಿಟ್ಟರು. ಆಗ ಮುಂದಾಗಿ ಓಡುವವರು ಕೆಲವ ರ' ಹಾರುವವರು ಕೆಲವರು ' ಕಿಲಕಿಲಧ್ವನಿಯನ್ನು ಮಾಡುವವರು ಕೆ ಅವರು ತಮ್ಮ ಬಾಲಗಳನ್ನೆತ್ತಿ ನೆಲಕ್ಕಪ್ಪಳಿಸುವವರು ಕೆಲವರು ' ಕಾಲ ನ್ನು ನೆಲಕ್ಕೆ ಬಡಿಯುವವರು ಕೆಲವರು ! ತೋಳುಗಳನ್ನು ಬೀಸಿ ಬೆಟ್ಟಗಳ ನ್ನು ರುಳಿಸುವವರು ಕೆಲವರು ಮರಗಳನ್ನು ಮುರಿಯುವವರು ಕೆಲವರು ! ಮತ್ತು ಪ್ರತವಾಸಿಗಳಾದ ಕೆಲವು ವಾನರರು ಅಲ್ಲಲ್ಲಿ ಬೆಟ್ಟದ ತುದಿಯ ವೈರಿ ನಿಂತು ಕೇಕೆಹಾಕುವರು ! ಕೆಲವರು ಸಿಂಹನಾದವನ್ನು ಮಾಡುವ ರು' ಕೆಲವರು ತಮ್ಮ ತೊಡೆಯ ವೇಗದಿಂದಲೇ ಅಲ್ಲಲ್ಲಿ ದಾರಿಗಡ್ಡಲಾಗಿದೆ ಬಳ್ಳಿಗಳನ್ನು ನಾನಾವಿಧವಾಗಿ ತಿಕ್ಕಿ ಕೆಡಹುವರು ' ಕೆಲವರು ವೀರದ ಕೊಬ್ಬಿನಿಂದ ಕಲ್ಲುಗಳನ್ನೂ , ಮರಗಳನ್ನೂ ಕೈಗೆತ್ತಿಕೊಂಡು ಅದರಿಂದ ಲೇ ನಾನಾವಿಧವಾಗಿ ಆಟವಾಡುವರು ! ಹೀಗೆ ಭಯಂಕರಸ್ವರೂಪವುಳ್ಳ ಅನೇಕವಾನರಸೈನ್ಯವು, ನೂರುನೂರಾಗಿಯೂ, ಸಾವಿರೆಸಾರವಾಗಿಯೂ, ಲಕ್ಷಲಕ್ಷವಾಗಿಯೂ, ಕೋಟಿಕೋಟಿಯಾಗಿಯೂ, ಅಲ್ಲಲ್ಲಿ ಗುಂಪುಕಟ್ಟಿ, ಕೊಂಡು ಬರುತ್ತಿರಲು, ಆ ಭೂಭಾಗವೆಲ್ಲವೂ ಕಪಿಮಯವಾದಂತೆ ಅಪೂ ರೈಶೋಭೆಯನ್ನು ಹೊಂದಿತು ಸುಗ್ರೀವನಿಂದ ಸುರಕ್ಷಿತವಾದ ಆ ದೊ ಡ್ಯ ವಾನರಸೈನ್ಯವು, ಪ್ರಭುವಾದ ರಾಮನ ಸಹವಾಸದಿಂದ ಮತ್ತಷ್ಟು ಸಂತೋಷವನ್ನು ಹೊಂದಿ, ಹಗಲುರಾತ್ರಿಯನ್ನದೆ ಎಡೆಬಿಡದೆ ಪ್ರಯಾಣ ಮಾಡಿ ಬರುತಿತ್ತು ಮೊದಲೇ ಆ ವಾನರರೆಲ್ಲರೂ ಬಹಳವಾದ ಯುದ್ದೋಂ ತ್ಸಾಹದಿಂದ ಬೇಗಬೇಗನೆ ಹಜ್ಜೆಯಿಡುತಿದ್ದರಲ್ಲದೆ, ಅವರಲ್ಲಿ ಒಬ್ಬೊಬ್ಬ ರಿಗೂ ಸೀತೆಯ ಸೆರೆಯನ್ನು ಬಿಡಿಸಬೇಕೆಂಬ ಆತುರವೂ ಮೇಲೆಮೇಲೆ ಹೆ ಚು ತಿದ್ದುದರಿಂದ, ಎಲ್ಲಿಯೂ, ಮುಹೂರ್ತಮಾತ್ರವೂ ನಿಲ್ಲದೆ, ದಾರಿನಡೆ ಯುತಿದ್ದರು, ಹೀಗೆ ವಾನರರೆಲ್ಲರೂ ಪ್ರಯಾಣಮಾಡಿ ಬರುತ್ತ, ಮುಂದೆ ಆನೇಕವೃಕ್ಷಗಳಿಂದ ನಿಬಿಡವಾಗಿಯೂ, ಬಗೆಬಗೆಯ ಮೃಗಗಳಿಂದ ತುಂಬಿ ದುದಾಗಿಯೂ ಇದ್ದ ಸಹ್ಯಪಕ್ವತವನ್ನೂ ಮಲಯಪಾತವನ್ನೂ ಸೇರಿದ ರು, ರಾಮನೂ ಆ ಸಯ್ಯಮಲಯಪರೂತಗಳ ಮೇಲಿನ ವಿಚಿತ್ರಾರಣ್ಯಗಳ