ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೨೪ ಶ್ರೀಮದ್ರಾಮಾಯಣವು [ಸರ್ಗ, ೫೮. ಡ್ಯಧ್ವನಿಯು, ಪ್ರಳಯಕಾಲದಲ್ಲಿ ಕೈಭಹೊಂದಿ ಕೊನೆಮೊದಲಲ್ಲಿದೆ ಕಾಣುತ್ತಿರುವ ಮಹಾಸಾಗರದ ಮೊರೆತದಂತೆ ಅತಿಭಯಂಕರವಾಗಿ ವ್ಯಾಪಿಸಿತು ರಣಪಂಡಿತನಾದ ಪ್ರಹಸನು ಆ ಮಹಾಯುದ್ಧದಲ್ಲಿ ಅತ್ಯಾ ಕ್ರೋಶದಿಂದ ಎಡೆಬಿಡದೆ ಬಾಣವರ್ಷಗಳನ್ನು ಕರೆದು ಕಪಿಗಳನ್ನು ಕೊಲ್ಲು ತಿದ್ದನು ಆ ರಣರಂಗದಲ್ಲಿ ಸತ್ತು ಬಿದ್ದ ಅನೇಕವಾನರರಾಕ್ಷಸರ ದೇಹ ಗಳೇ, ದೊಡ್ಡ ದೊಡ್ಡ ಪಕ್ವತಗಳಂತೆ ಅಲ್ಲಿನ ಸಮಸ್ತಭೂಮಿಯನ್ನೂ ವ್ಯಾಪಿಸಿತು. ಆ ಯುದ್ಧಭೂಮಿಯ ಸಮಸ್ತಭಾಗವೂ ರಕ್ತಪ್ರವಾಹ ದಿಂದ ಮರೆಸಿ ಹೋಗಿರಲು, ಅಲ್ಲಿನ ಪ್ರದೇಶವೆಲ್ಲವೂ, ವಸಂತಕಾಲ ದಲ್ಲಿ ಪುಟ್ಟತಗಳಾದ ಮುತ್ತುಗದ ಮರಗಳಿಂದ ತುಂಬಿದ ವನಪ್ರದೇ ಶದಂತೆ ಕಾಣುತಿತ್ತು: ಆಗಿನ ಆ ಯುದ್ಧಭೂಮಿಯೇ ಒಂದು ಮಹಾ ನದಿಯಂತೆ ಕಾಣಿಸಿತು. ಅಲ್ಲಲ್ಲಿ ಹತರಾಗಿ ಬಿದ್ದ ವೀರರ ಶವಗಳ ದಡಗಳಂ ತಾದುವು, ರಕ್ತವೇ ಪ್ರವಾಹದಂತಾಯಿತು ಯಕೃಹಗಳೆಂದು ಕರೆ ಯಲ್ಪಡುವ ಹೃದಯಮಾಂಸಗಳೇ ಕೆಸರಿನಂತಾದುವು ಹಾಗೆಯೇ ಕೆದ ರಿದ ನರೆಗಳೆಂಬ ಪಾಚಿಗಳಿಂದಲೂ, ಅಲ್ಲಲ್ಲಿ ತುಂಡಾಗಿ ಬಿದ, ತಲೆ, ಕೈ, ಕಾಲು ಮೊದಲಾದ ಅವಯವಗಳೆಂಬ ಮೀನುಗಳಿಂದಲೂ, ಬೆರಳು, ಕೂ ದಲು, ಮುಂತಾದ ಉಪಾಂಗಗಳೆಂಬ ಗರಿಕೆಗಳಿಂದಲೂ ಕೊಡಿ, ಯಮ ಸಾಗರವನ್ನು ಕುರಿತು ಪ್ರವಹಿಸುತ್ತಿರುವ ದೊಡ್ಡ ನದಿಯಂತೆ ತೋರುತಿತ್ತು ಮತ್ತು ಅಲ್ಲಲ್ಲಿ ಸೇರಿದ ಹದ್ದುಗಳೇ ಹಂಸಗಣಗಳಂತೆಯೂರಣಹದ್ದುಗಳೇ ಸಾರಸಗಳಂತೆಯೂ, ಮೇದಸ್ಸುಗಳನೊರೆಗಳಂತೆಯೂ,ಆರ್ತಧ್ವಸಿಯೇ ಪ್ರ ವಾಹದ ಮೊರೆತದಂತೆಯೂ ತೋರಿತು , ಭೀರುಗಳಿಗೆ ಬಾಟಲಸಾಧ್ಯವಾದ ಈ ರಣಭೂಮಿಯೆಂಬ ಮಹಾನದಿಯನ್ನು, ವಾನರರಾಕ್ಷಸರಿಬ್ಬರೂ ಸೇರಿ ನಿರಿಸಿದುದಲ್ಲದೆ, ಮಳೆಗಾಲವು ಮುಗಿದಮೇಲೆ ಜನರು ಹಂಸಸಾರಸಾದಿ ಪಕ್ಷಿಗಳಿಂದ ತುಂಬಿದ ನದಿಯನ್ನು ದಾಟಿ ಹೋಗುವಂತೆ ಪ್ರಯತ್ನ ಪಟ್ಟು ದಾಟುತಿದ್ದರು ಮದದಾನೆಗಳು ಕಮಲಧೂಳಿಯಿಂದ ತುಂಬಿದ ತಾವರೆ ಕೊಳಗಳಲ್ಲಿ ಮುಳುಗಿ ಮೇಲೆದ್ದು ಬಂದಾಗ, ಅವುಗಳ ದೇಹವು ಪುಷ್ಟ ರೇಣುಗಳಿಂದ ಕೆಂಪೇರುವಂತೆ, ಈ ವಾನರರಾಕ್ಷಸರಿಬ್ಬರೂ ಆ ಯುದ್ಧ ನದಿಯನ್ನು ದಾಟಿ ಬರುವಾಗ,ಒಬ್ಬೊಬ್ಬರೂ ರಕ್ತದೇಹವುಳ್ಳವರಾಗಿದ್ದರು.