ಸರ್ಗ ೫ ] ಯುದ್ದ ಕಂಡವು. ೨೪೨೪ ಹೀಗೆ ಮಹಾಯುದ್ಧವು ನಡೆಯುತ್ತಿರುವಾಗ, ಪ್ರಹಸನು' ರಥದಲ್ಲಿದ್ದು, ತನ್ನ ಬಾಣಪರಂಪರೆಗಳಿಂದ ವಾನರಸೈನ್ಯವನ್ನು ಕೊಲ್ಲುತ್ತಿರಲು, ವಾನ ರಸೇನಾಪತಿಯಾದ ನೀಲನು ಅದನ್ನು ನೋಡಿ ಕೋಪದಿಂದುಬ್ಬಿದವ ನಾಗಿ, ಅವನನ್ನು ಏರಿಸಿದನು ಹೀಗೆ ನೀಲನು ಅಂತರಿಕ್ಷದಲ್ಲಿರುವ ಮನು ಸಮೂಹಗಳಮೇಲೆ ಬಂದು ಬೀಳುವ ಬಿರುಗಾಳಿಯಂತೆ ತನ್ನ ಮೇಲೆ ಬರುವುದನ್ನು ನೋಡಿ, ರಾಕ್ಷಸಸೇನಾಪತಿಯಾದ ಪ್ರಹಸನು, ಸ ರನಂತೆ ಹೊಳೆಯುವ ತನ್ನ ರಥವನ್ನು ಧೈಯ್ಯದಿಂದ ಮುಂದೆ ಬಿಟ್ಟು ಕೊಂಡು ನೀಲನಿಗಿದಿರಾಗಿ ಬಂದನು ಧನುರ್ಧಾರಿಗಳಲ್ಲಿ ಮೇಲೆನಿಸಿ ಕೊಂಡ ಆ ಪ್ರಹಸನು, ತನ್ನ ಬಿಲ್ಲನ್ನು ಆಕರ್ಣಾ೦ತವಾಗಿ ಎಳೆದು, ನೀಲ ನಮೇಲೆ ಅನೇಕಬಾಣಗಳನ್ನು ಪ್ರಯೋಗಿಸಿದನು ಪ್ರಹಸನು ಪ್ರಯೋ ಗಿಸಿದ ಬಾಣಗಳೆಲ್ಲವೂ, ಕೋಪಗೊಂಡ ಕಾಲಸರ್ಪಗಳಂತೆ ವೇಗದಿಂದ ಹೊರಟು, ಸೀಲನ ದೇಹವನ್ನು ಭೇದಿಸಿಕೊಂಡು ಭೂಮಿಗೂ ನಾಟಿಕೊಂ ಡುವು ಅಗ್ನಿ ಯಂತೆ ಜ್ವಲಿಸುವ ಈ ತೀಕ್ಷಬಾಣಗಳಿಂದ ಪ್ರಹರಿಸಲ್ಪಡು ತಿರುವಾಗಲೂ, ನೀಲನು ಅವುಗಳನ್ನು ಲಕ್ಷ ಮಾಡದೆ, ಕುಪಿತನಾಗಿ, ಒಂ ದು ದೊಡ್ಡ ಮರವನ್ನು ಕಿತ್ತುಕೊಂಡು ತನಗಿದಿರಾಗಿ ಬರುತಿದ್ದ ಪ್ರಹಸ್ಯ ನನ್ನು ಪ್ರಹರಿಸಿದನು ರಾಕ್ಷಸಪುಂಗವನಾದ ಪ್ರಹಸ್ತನು ಈ ವೃಕಪ್ಪ ಹಾರದಿಂದ ನೊಂದು,ಕೋಪದಿಂದ ಸಿಂಹನಾದಮಾಡುತ್ತ, ನೀಲನಮೇಲೆ ಎಡೆಬಿಡದೆ ಬಾಣವರ್ಷಗಳನ್ನು ಕರೆಯುತ್ತಲೇ ಇದ್ದನು. ಸೀಲನು ಮಹಾ ಬಲಾಡ್ಯನಾಗಿದ್ದರೂ,ಪ್ರಹಸ್ತನ ಬಾಣಗಳನ್ನು ಮೀರಿ ಮುಂದೆ ಹೋಗಲ ಸಮರ್ಥನಾಗಿ, ಶರತ್ಕಾಲದಲ್ಲಿ ಕ್ಷಣಕ್ಷಣಕ್ಕೆ ಬಂದು ಹೋಗುವ ಮಳೆಯ ಬ ಡಿತವನ್ನು ,ವೃಷಭವು ಕಣ್ಮುಚ್ಚಿ ಸಹಿಸಿಕೊಂಡಿರುವಂತೆ, ಆ ಬಾಣವರ್ಷಗಳ ನ್ನು ತಾಳ್ಮೆಯಿಂದ ಕಣ್ಮುಚ್ಚಿ ಸಹಿಸುತಿದ್ದನು. ನೀಲನು ಬಹಳಥೈಲ್ಯಶಾಲಿ ಯಾದುದರಿಂದ,ಆ ಬಾಣವರ್ಷದ ನೋವನ್ನೂ ಲಕ್ಷಮಾಡದೆ, ರೋಷದಿಂ ದುಬ್ಬಿ, ಒಂದು ಮಹಾವೃಕ್ಷವನ್ನು ಕಿತ್ತುಕೊಂಡು, ಮನೋವೇಗವುಳ್ಳ ಪ್ರಹಸನ ರಥಾಶ್ವಗಳನ್ನು ಅದರಿಂದ ಕೊಂದುಕೆಡಹಿದನು, ಮತ್ತು ಮಹಾಬಲಶಾಲಿಯಾದ ಆ ನೀಲನು, ಥೈಲ್ಯದಿಂದ ಮುಂದೆ ಹೋಗಿ, ಪ್ರಹ »ನು ಹಿಡಿದಿದ್ದ ಮಹಾಧನುಸ್ಸನ್ನು ಕೈಯಿಂದ ಕಿತ್ತುಕೊಂಡು, ಅದನ್ನು 163
ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೦೨
ಗೋಚರ