ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೨೬ ಶ್ರೀಮದ್ರಾಮಾಯಣವು (ಸರ್ಗ ಇ೮. ಮುರಿದುಬಿಸುಟು, ಬಾರಿಬಾರಿಗೂ ಸಿಂಹನಾದಗಳನ್ನು ಮಾಡುತಿದ್ದನು. ರಾಕ್ಷಸಸೇನಾಧಿಪತಿಯಾದ ಪ್ರಹಸನಿಗೆ, ಕೈಯಲ್ಲಿದ್ದ ಬಿಲ್ಲೂ, ರಥಾಶ್ವಗ ಭೂ ಪ್ರತಿಹತಗಳಾಗಲು,ಅವನು ತನ್ನ ರಥದಲ್ಲಿದ್ದ ಭಯಂಕರವಾದ ಮುಸ ಲಾಯುಧವನ್ನು ಕೈಗೆತ್ತಿಕೊಂಡು, ರಥದಿಂದ ಕೆಳಗಿಳಿದನು. ವೇಗಶಾ ತಿಗಳಾಗಿಯೂ, ಸಿಂಹಶಾರ್ದೂಲಗಳಂತೆ ಶಕ್ತಿಯುಳ್ಳವರಾಗಿಯೂ, ಸಿಂ ಹಶಾರ್ದೂಲಗಳಂತೆಯೇ ವೀರಕಾರವುಳ್ಳವರಾಗಿಯೂ, ಯಾವ ಯುದ್ಧ ಗಳಲ್ಲಿಯೂ ಹಿಂಜರಿಯದ ನೀರಸ್ವಭಾವವುಳ್ಳವರಾಗಿಯೂ, ವೃತ್ರಾಸು ರ ದೇವೇಂದ್ರರಿಗೆ ಸಮಾನರಾಗಿಯೂ ಇದ್ದ ಆ ಸೇನಾಪತಿಗಳಿಬ್ಬರೂ ಪರ ಸ್ಪರಬದ್ಧವೈರವುಳ್ಳವರಾಗಿ, ಸಾಂಗಗಳಲ್ಲಿಯೂ ರಕ್ತವನ್ನು ಸುರಿಸು ತ, ಮದದಾನೆಗಳಂತೆ ಒಬ್ಬರನ್ನೊಬ್ಬರು ತಡೆದು, ಒಬ್ಬರನ್ನೊಬ್ಬರು ತೀ ಕದಂಷ್ಟ್ರಗಳಿಂದ ಭೇದಿಸುತ್ಯ, ಯಶಃಕಾಮರಾಗಿ ಯುದ್ಧವನ್ನು ನಡೆ ಸಿದರು ಇಷ್ಟರಲ್ಲಿ ಪ್ರಹಸನು, ತಾನು ಹಿಡಿದಿದ್ದ ಮುಸಲಾಯುಧದಿಂದ ನೀಲನ ನಡುನೆತ್ತಿಯ ಮೇಲೆ ಪ್ರಹರಿಸಲು, ಅವನ ನೆತ್ತಿಯಿಂದ ರಕ್ತವು ಸು ರಿಯಲಾರಂಭಿಸಿತು. ನೀಲನು ಆ ಪ್ರಹಾರವನ್ನೂ ಲಕ್ಷಮಾಡದೆ, ರಕ ದಿಂದ ತೊಯ್ದ ಮೃಯುಳ್ಳವನಾಗಿಯ ಒಂದು ದೊಡ್ಡ ವೃಕ್ಷವನ್ನು ಕಿ ತುತಂದು ಪ್ರಹಸನ ಎದೆಯಮೇಲೆ ಬೀಸಿದನು. ಪ್ರಹಸ್ಯನೂ ಆ ಪೆಟ್ಟ, ನ್ನು ಲಕ್ಷ ಮಾಡದೆ, ತಾನು ಹಿಡಿದಿದ್ದ ಮುಸಲಾಯುಧದೊಡನೆ ನೀಲ ನ ಮೇಲೆ ನುಗ್ಗಿ ಬಂದನು. ಇಷ್ಟರಲ್ಲಿ ಸೋಲನು, ಪ್ರಹಸನು ತನ್ನ ಮೇಲೆ ಅತ್ಯಾತುರದಿಂದ ನುಗ್ಗಿ ಬರುವುದನ್ನು ನೋಡಿ, ಒಂದು ದೊಡ್ಡ ಶಿಲೆಯ ನು ಕೈಗೆತ್ತಿಕೊಂಡು, ತನ್ನ ಮೇಲೆ ಯುದ್ಧಾ ಕಾಂಕ್ಷಿಯಾಗಿ ಮುಸಲವನ್ನು ಹಿಡಿದು ಬರುತಿದ್ದ ಪ್ರಹಸನ ತಲೆಯಮೇಲೆ ಬಿಸುಟನು ಆಗ ಈ ದೊ ಈ ಶಿಲೆಯ ಪ್ರಹಾರಕ್ಕೆ ಪ್ರಹಸ್ತನ ತಲೆಯು ಸಹಸ್ರಭಾಗವಾಗಿ ಸೀಳಿತು. * ಆ ಪ್ರಹಸನ ಕಾಂತಿಯೂ,ಇಂದ್ರಿಯಗಳೂ ಕೆಟ್ಟು,ಅವನು ಗತಪ್ರಾಣ ನಾಗಿ, ಬುಡವನ್ನು ಕಡಿದ ಮರದಂತೆ ಕೆಳಗೆ ಬಿದ್ದನು. ಶಸ್ತಪ್ರಹಾರದಿಂದ ಭಿನ್ನವಾದ ಆ ಪ್ರಹಸನ ತಲೆಯಿಂದ, ಪಕ್ವತಪ್ರಾಂತದಿಂದ ಗಿರಿನದಿಗ

  • ಪಂಚಮಿಯದಿನದಲ್ಲಿ ಪ್ರಹಸ್ಯವಧವೆಂದು ತಿಳಿಯಬೇಕು.