ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫೯.] ಯುದ್ಧಕಾಂಡವು. ೨೪ ಳು ಹೊರಡುವಂತೆ ರಕ್ತಪ್ರವಾಹವು ಸುರಿಯುತಿತ್ತು. ಅದುವರೆಗೂ ರಣೋ ತ್ಸಾಹದಿಂದುಬ್ಬಿ ಹೆಮ್ಮೆಗೊಂಡಿದ್ದ ರಾಕ್ಷಸಸೈನ್ಯವೆಲ್ಲವೂ, ನೀಲನಿಂದ ಪ್ರಹಸನು ಸಂಹೃತನಾದುದನ್ನು ನೋಡಿದೊಡನೆ ಕೊಬ್ಬಡಗಿ, ಭಯ ದಿಂದ ಲಂಕೆಯಕಡೆಗೆ ಓಡಿದುವು ತಮಗೆ ಮುಖ್ಯಾಶ್ರಯನಾಗಿದ್ದ ಪ್ರಹ ಸ್ತನು ಸತ್ತುಬಿದ್ದುದನ್ನು ಕಂಡಮೇಲೆ ಅಲ್ಲಿದ್ದ ಸಮಸ್ತರಾಕ್ಷಸಸೈನಿ ಕರೂ, ವೇಗದಿಂದ ಬರುವ ಜಲಪ್ರವಾಹವು ಅಡ್ಡಲಾಗಿರುವ ಅಣೆಕಟ್ಟಿನ 2 ತಗುಲಿ ಪ್ರತಿಹತವಾಗಿ ಚದರಿಹಿಂದಿರುಗುವಂತೆ ಯುದ್ಧದಲ್ಲಿ ನಿಲ್ಲಲಾರ ದೆ ಥಟ್ಟನೆ ಹಿಂದೆಗೆದು ಪಲಾಯನ ಮಾಡಿದರು. ಪ್ರಧಾನಸೇನಾಧಿಪತಿ ಯು ಹತನಾದುದರಿಂದ ಇತರರಾಕ್ಷಸರೆಲ್ಲರೂ ಅನಾಥರಾಗಿ, ಏನೊಂ ದೂ ತೋರದೆ, ಹಿಂತಿರುಗಿ ರಾವಣನ ಬಳಿಗೆ ಹೋಗಿ, ಚಿಂತಾಪಾರವಶ್ಯ ದಿಂದ ಮೂಗರಂತೆ ಯಾವ ಮಾತನ್ನೂ ಆಡಲಾರದೆ ಮೌನವನ್ನ ವಲಂಬಿ ಸಿ, ತೀವ್ರವಾದ ದುಃಖಸಮುದ್ರದಲ್ಲಿ ಮುಳುಗಿ ಮೂರ್ಛಗೊಂಡವರ ತಿದ್ದರು. ಇತ್ತಲಾಗಿ ಜಯಶೀಲನಾದ ನೀಲನಾದರೋ,ತನ್ನ ಸಾಹಸಕಾರ ಕ್ಯಾಗಿ ಸಮಸ್ತವಾನರರಿಂದಲೂಗೌರವಿಸಲ್ಪಡುತ್ತ ರಾಮಲಕ್ಷ್ಮಣರಬಳಿಗೆ ಬಂದುಸೇರಿ ಪರಮಸಂತೋಷದಿಂದಿದನು.ಇಲ್ಲಿಗೆ ಐವತ್ತೆಂಟನೆಯಸರ್ಗವು. ಪ್ರಹಸನ ವಧವನ್ನು ಕೇಳಿ ರಾವಣನು ತಾನಾಗಿ ಯೇ ಯುದ್ಧಕ್ಕೆ ಹೊರಟುದು, ಸುಗ್ರೀವಾದಿಗಳು | ರಾವಣನಿಂದ ಭಂಗಹೊಂದಿದುದು ರಾವಣನ ಅಮೋ ಭವಾದ ಶಕ್ತಿಯಿಂದ ಲಕ್ಷಣನಿಗೆ ಮರ್ಫಿಯುಂಟಾ | ಗಿದ್ದುದು ರಾಮರಾವಣಯುದ್ಧವು ರಾವಣನ ಕಿ (ರೀಟಭಂಗವ, ರಾಕ್ಷಸರಿಗೆ ಪ್ರಧಾನಸೇನಾಪತಿಯಾದ ಪ್ರಹಸ್ತನು, ವಾನರಯೂ ಧವನಾದ ನೀಲನಿಂದ ಯುದ್ಧದಲ್ಲಿ ಹತನಾಗಿ ಬಿದ್ದುದನ್ನು ಕಂಡೊಡನೆ, ಭಯಂಕರಾಯುಧಗಳನ್ನು ಧರಿಸಿದುದಾಗಿಯೂ, ಸಮುದ್ರದಂತೆ ತಡೆಯಿಲ್ಲ ದ ಮಹಾವೇಗವುಳುದಾಗಿಯೂ ಇದ್ದ ರಾವಣಸೈನ್ಯವೆಲ್ಲವೂ ಭಯದಿಂದ ಲಂಕೆಗೆ ಪಲಾಯನಮಾಡಿದುವು ಈ ರಾಕ್ಷಸಸೇನೆಯೆಲ್ಲವೂ ರಾವಣನ