ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܕ݁ܰܦܐܦ ಸರ್ಗ, ೫೯.] ಯುದ್ಧಕಾಂಡವ. ಲ್ಲಿ ಶಂಖ ಭೇರೀ ಪಣವಾದಿವಾದ್ಯಧ್ವನಿಗಳೂ, ರಾಕ್ಷಸಯೋಧರ ಭುಜಾ ಸ್ಮಾಲನಧ್ವನಿಗಳೂ, ಸಿಂಹನಾದಧ್ವನಿಗಳೂ ಆರಂಭಿಸಲ್ಪಟ್ಟವು. ಆ ರಥದ ಸುತ್ತಲೂ, ವಂದಿಮಾಗಧರೇ ಮೊದಲಾದ ಸುತಿಪಾಠಕರು ಮನೋ ಜ್ಯಗಳಾದ ಜಯಸ್ತುತಿಗಳನ್ನು ಮಾಡುತ್ತ ಬಂದರು. ಹೀಗೆ ರಾವಣನು ಸಮಸ್ತಪರಿವಾರಗಳಿಂದಲೂ ಪೂಜಿತನಾಗಿ, ಯುದ್ಧಭೂಮಿಗೆ ಹೊರಟು ಬರುವಾಗ, ಅವನ ಸುತ್ತಲೂ ಶಸ್ತ್ರಧಾರಿಗಳಾದ ಅನೇಕರಾಕ್ಷಸಯೋಧರು ಬರುತಿದ್ದರು ಅವರಲ್ಲಿಯೋ ಒಬ್ಬೊಬ್ಬರೂ ಪರೈತದಂತೆ ಮಹೋನ್ನತ ವಾದ ದೇಹವುಳ್ಳವರು ! ಒಬ್ಬೊಬ್ಬರೂ ನರಮಾಂಸಗಳನ್ನು ತಿಂದು ಕೊಬ್ಬಿದವರು ! ಒಬ್ಬೊಬ್ಬರೂ ಕಾಲಮೇಫುದಂತೆ ಕಪ್ಪಾದ ಮೈಯುಳ್ಳ ವರು ಒಬ್ಬೊಬ್ಬರೂ ಕೆಂಡದಂತೆ ಕೆಂಪಾದ ಕಣ್ಣುಳ್ಳವರು, ಇಂತಹ ರಾಕ್ಷಸರಿಂದ ಪರಿವೃತನಾದ ಆ ರಾವಣನು, ಭೂತಗಣಗಳಿಂದ ಪರಿವೃತ ನಾದ ರುದ್ರನಂತೆಯೇ ಕಾಣುತಿದ್ದನು, ಈ ರೀತಿಯಲ್ಲಿ ಮಹಾತೇಜಸ್ವಿ ಯಾದ ರಾವಣನು ವೇಗದಿಂದ ತನ್ನ ಪಟ್ಟಣವನ್ನು ಬಿಟ್ಟು ಹೊರಟು ಬಂದು, ಇಲಾಗಿ ಮಹೋಗ್ರವಾಗಿಯೂ, ಮಹಾಸಮುದ್ರದಂತೆಯೂ ಮೇಘದಂತೆಯೂ ಗಂಭೀರಧ್ವನಿಯುಳ್ಳದಾಗಿಯೂ, ತಿಲೆಗಳನ್ನೂ, ವೃಕ್ಷಗ ಇನ್ನೂ , ಬೆಟ್ಟಗಳನ್ನೂ, ಯುದ್ಯಸಾಧನಗಳನ್ನಾಗಿ ಹಿಡಿದು ಸಿದ್ಧರಾ ಗಿಯೂ ಇದ್ದ ವಾನರಸೈನಿಕರನ್ನು ಕಂಡನು. ಇತ್ತಲಾಗಿ ಸರ್ಪರಾಜನಾದ ವಾಸುಕಿಯಂತೆ ನೀಡಿದ ತೋಳುಗಳುಳ್ಳವನಾಗಿ, ವಾನರಸೇನೆಯ ಮಧ್ಯ ದಲ್ಲಿದ್ದ ಶ್ರೀರಾಮನೂ ಕೂಡ, ಲಂಕೆಯ ಕಡೆಯಿಂದ ಅತಿಪ್ರಚಂಡ ವಾಗಿ ಬರುತಿದ್ದ ಆ ದೊಡ್ಡ ರಾಕ್ಷಸಸೈನ್ಯವನ್ನು ನೋಡಿದನು ಸಪರಿವಾ ರನಾಗಿ ಬರುತಿದ್ದ ಆ ರಾವಣನನ್ನು ಕಂಡೊಡನೆ ಶ್ರೀರಾಮನ ಮುಖವು ಯುದ್ರೋತ್ಸಾಹದಿಂದ ಕಳೆಯೇರಿತು. ಆಗ ರಾಮನು ಶಸ್ತ್ರಧಾರಿಗಳಲ್ಲಿ ಮೇಲೆನಿಸಿದ ವಿಭೀಷಣನನ್ನು ಕುರಿತು, (ವಿಭೀಷಣಾ ! ಯಾರವನು? ಅವನ ಅಟ್ಟಹಾಸವೇನು ? ಚಿತ್ರಗಳಾಗ ಧ್ವಜಪತಾಕೆಗಳಿಂದಲೂ, ವಿವಿಧಾ ಯುಧಗಳಿಂದಲೂ, ಪ್ರಾಸಖಡ್ಗ ತೂಲಗಳೇ ಮೊದಲಾದ ಇತರಾಯುಧ ಗಳಿಂದಲೂ ಶೋಭಿಸುತ್ತಿರುವ ಆ ರಾಕ್ಷಸಸೈನ್ಯವೆಲ್ಲಿಯದು ? ಐರಾವ ತಕ್ಕೆಸೆಯಾದ ಮದದಾನೆಗಳಿಂದ ಕೂಡಿ, ಶೂರರಾಕ್ಷಸರಿಂದ ತುಂಬಿದ