ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೩೦ ಶ್ರೀಮದ್ರಾಮಾಯಣವು [ಸರ್ಗ, ೫೯. ಆ ಸೈನ್ಯವು ಯಾರಿಗೆ ಸೇರಿದುದು?”ಎಂದು ಕೇಳಿದನು. ಇದನ್ನು ಕೇಳಿ ಇಂದ್ರನಿಗಣೆಯಾದ ಪರಾಕ್ರಮವುಳ್ಳ ವಿಭೀಷಣನು, ರಾಮನಿಗೆ ಆ ರಾಕ್ಷಸ ಸೈನ್ಯದ ಮಹಾಮಹಿಮೆಯನ್ನು ವರ್ಣಿಸಿ ಹೇಳತೊಡಗಿ ಎಲೆ ಮಹಾ ರಾಜನೆ ! ಅದೋ ನೋಡು ! ಬಾಲಸೂರನಂತೆ ಕೆಂಪೇರಿದ ಮುಖವುಳ್ಳವ ನಾಗಿ, ಗಜಾರೂಢನಾಗಿ, ತನ್ನ ದೇಹಭಾರದಿಂದ ಆ ಆನೆಯ ತಲೆಯನ್ನೂ ನಡುಗಿಸುವಂತೆ ಅದ್ಭುತಾಕಾರವುಳ್ಳವನಾಗಿ ಬರುತ್ತಿರುವವನಿಗೆ ಆಕಂ ಪನನೆಂದು ಹೆಸರು. ಅವನು ರಾವಣನ ಮಗನು, ಅದೋ ! ಅಲ್ಲಿ ಇಂದ್ರ ಧನುಸುಸ್ಸಿನಂತಿರುವ ದೊಡ್ಡ ಧನುಸ್ಸನ್ನು ಹಿಡಿದು, ಸಿಂಹಧ್ವಜವುಳ್ಳ ರಥವನ್ನೇರಿ, ದೊಡ್ಡ ಕೊಂಬುಳ್ಳ ಮದದಾನೆಯಂತೆ ಭಯಂಕರವಾಗಿ ಬಿಚ್ಚಿದ ಕೊರೆಯುಳ್ಳವನಾಗಿ, ಬರುತ್ತಿರುವವನೇ ಇಂದ್ರಜಿತ್ತೆಂಬವನು. ಇವನು ಬ್ರಹ್ಮಾನುಗ್ರಹದಿಂದ ಶತ್ರುಗಳ ಕಣ್ಣಿಗೆ ಕಾಣದೆ ಯುದ್ಧಮಾಡುವ ಅಸಾಧಾರಣವರವನ್ನು ಪಡೆದವನು, ರಾಮಾ ! ಅದೋ ನೋಡು' ವಿಂಧ್ಯ ಪರೈತದಂತೆ ಮಹೋನ್ನತನಾಗಿಯೂ, ಅಸ್ತಮಯಪರತದಂತೆ ಇತರರ ತೇಜಸ್ಸನ್ನು ತಗ್ಗಿಸತಕ್ಕವನಾಗಿಯೂ, ಮಹೇಂದ್ರಸರತದಂತೆ ನಿಶ್ಚಲ ನಾಗಿಯೂ ರಥದಲ್ಲಿ ಕುಳಿತು, ಧನುರ್ಧಾರಿಯಾಗಿ ಬರುತ್ತಿರುವವನೇ ಅತಿಕಾಯನೆಂಬವನು, ರಾಕ್ಷಸರಲ್ಲಿ ಈತನು ಅತಿರಥನೆನಿಸಿರುವನು, ಮಹಾ ವೀರನು ಇವನ ದೊಡ್ಡ ದೇಹದಿಂದಲೇ ಇವನಿಗೆ ಅತಿಕಾಯನೆಂಬ ಹೆಸರು ಬಂದಿರುವುದು, ಅದೊ ! ಅಲ್ಲಿ, ಆಗಲೇ ಉದಿಸಿದ ಸೂರನಂತೆ ಕೆಂಪೇ ರಿದ ಕಣ್ಣಾಲೆಯುಳ್ಳವನಾಗಿ, ಫಂಟಾಧ್ವನಿಯಿಂದೊಪ್ಪುತ್ತಿರುವ ಮದ ದಾನೆಯ ಮೇಲೆ ಕುಳಿತು, ಅಟ್ಟಹಾಸದಿಂದ ಗರ್ಜಿಸುತ್ತ ಬರುವವನಿಗೆ ಮಹೋದರನೆಂದು ಹೆಸರು ಈತನೂ ಮಹಾವೀರನು. ಅದೋ ! ಅಲ್ಲಿ ನಾನಾವಿಧಗಳಾದ ಚಿನ್ನ ದೊಡವೆಗಳಿಂದಲಂಕೃತವಾಗಿ, ಸಂಧ್ಯಾರಾಗದಿಂದ ಕೂಡಿದ ಬೆಟ್ಟದಂತೆ ಮಹೋನ್ನತವಾದ ಕುದುರೆಯನ್ನೇರಿ, ಥಳಥಳಿಸುವ ಪ್ರಾಸವನ್ನು ಕೈಯಲ್ಲಿ ಹಿಡಿದು, ಸಿಡಿಲಿನಂತೆ ಮಹಾವೇಗದಿಂದ ರಾಕ್ಷಸ ನೊಬ್ಬನು ಬರುವನಲ್ಲವೆ? ಅವನಿಗೆ ಪಿಶಾಚನೆಂದು ಹೆಸರು. ಅದೋ! ಅಲ್ಲಿ ಇಂ ದ್ರನ ವಜ್ರಾಥಯುವನ್ನೂ ಕೂಡ ತನ್ನ ಕೈಗೆಳಗಿಟ್ಟುಕೊಳ್ಳುವಂತೆ ಮಹಾ ವೇಗವುಳ್ಳುದಾಗಿ, ಮಿಂಚಿನಂತೆ ಥಳಥಳಿಸುವ ತೀಕ್ಷಶೂಲವನ್ನು ಕೈಯಲ್ಲಿ