ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೫೯.] ಯುದ್ಧಕಾಂಡವು. ೨೪೧ ಹಿಡಿದು, ಪರೂತದಂತಿರುವ ದೊಡ್ಡ ವೃಷಭವನ್ನೇರಿ ಬರುತ್ತಿರುವವನು ತ್ರಿಶಿರನೆಂಬ ರಾಕ್ಷಸನು, ವೀಳ್ಯದಲ್ಲಿ ಈತನು ಬಹಳ ಪ್ರಖ್ಯಾತಿಹೊಂದಿ ದವನು ಅದೋ ! ಅಲ್ಲಿ ಕಾಲಮೇಫುದಂತೆ ಕಪ್ಪು ಮೈಯುಳ್ಳವನಾ ಗಿಯೂ, ಅಗಲವಾಗಿ ಉಬ್ಬಿದ ಎದೆಯುಳ್ಳವನಾಗಿಯೂ, ಸರ್ಪಚಿಹ್ನೆ ವುಳ್ಳ ಧ್ವಜದಿಂದ ಶೋಭಿತನಾಗಿಯೂ, ಸಾಯುಧಸನ್ನದ್ಧನಾಗಿಯೂ, ಆಗಾಗ ತನ್ನ ಬಿಲ್ಲಿನ ಹೆದೆಯನ್ನು ಆಕರ್ಣಾಂತವಾಗಿ ಎಳೆದು ಲೀಲೆ ಯಿಂದ ಧನುಷಂಕಾರಮಾಡುವವನಾಗಿಯೂ ಎಚ್ಚರಿಕೆಯಿಂದ ಬರುತ್ತಿರುವ ಆ ರಾಕ್ಷಸನು ಕುಂಭನೆಂದು ಹೆಸರುಗೊಂಡವನು ಅದೋ ! ಅಲ್ಲಿ ಚಿನ್ನ ದಿಂದಲೂ, ವಜ್ರಮಣಿಗಳಿಂದಲೂ ಅಲಂಕೃತವಾಗಿ, ಕಾಂತಿಯಿಂದ ದೇ ಜೀಪ್ಯಮಾನವಾಗಿ, ಹೊಗೆಯಾಡುವಂತೆ ಕಾಣುತ್ತಿರುವ ದೊಡ್ಡ ಪರಿಫು ವನ್ನು ಹಿಡಿದು ಬರುತ್ತಿರುವವನಿಗೆ ನಿಕುಂಭನೆಂದು ಹೆಸರು ರಾಕ್ಷಸಸ್ಯೆ ವ್ಯಕ್ಕೆ ಇವನೇ ಧ್ವಜದಂತೆ ಪ್ರಧಾನಭೂತನಾಗಿರುವನು ಇವನ ವೀರಕಾರ ಗಳು ಮಹಾದ್ಭುತಗಳಾಗಿಯೂ, ಆತಿಭಯಂಕರಳಾಗಿಯೂ ಇರುವುವು. ಅದೋ ! ಅಲ್ಲಿ ಧನುರ್ಬಾಣಗಳಿಂದಲೂ, ಕತ್ತಿಗಳಿಂದಲೂ ತುಂಬಿದುದಾಗಿ, ಧ್ವಜಾಲಂಕೃತವಾಗಿ, ಅಗ್ನಿ ಯಂತೆ ಧಗಧಗಿಸುತ್ತಿರುವ ರಥವನ್ನೇರಿ ಘೋರ ಸ್ವರೂಪದಿಂದ ಬರುತ್ತಿರುವ ಆ ರಾಕ್ಷಸಸಿಗೆ ನರಾಂತಕನೆಂದು ಹೆಸರು. ಇವ ನು ವೀಡ್ಯದಲ್ಲಿ ಸಮಸ್ತರಾಕ್ಷಸರಿಗಿಂತಲೂ ಮೇಲೆನಿಸಿಕೊಂಡವನು. ಈತನು, ಶತ್ರುಗಳು ಸಿಕ್ಕದಿರುವಾಗ ತನ್ನ ಮೈ ನವೆಯನ್ನಾ ರಿಸಿಕೊಳ್ಳುವುದಕ್ಕಾಗಿ, ಆ ಗಾಗ ಪಕ್ವತಶಿಖರಗಳನ್ನು ಗುದ್ದಿ ಹೋರಾಡುವಸ್ವಭಾವವುಳ್ಳವನು ನಾನಾ ವಿಧಭಯಂಕರಸ್ವರೂಪವುಳ್ಳವುಗಳಾಗಿಯೂ, ಹೆಬ್ಬುಲಿಗಳಂತೆಯೂ, ಒಂಟಿ ಗಳಂತೆಯೂ, ಆನೆಗಳಂತೆಯೂ, ಮೃಗಗಳಂತೆಯೂ, ಕುದುರೆಗಳಂತೆಯೂ ಮುಖವುಳ್ಳವುಗಳಾಗಿಯೂ, ಯಾವಾಗಲೂ ಕೋಪದಿಂದ ತಿರುಗುತ್ತಿರುವ ಕಣ್ಣಾಲೆಗಳುಳ್ಳುವಾಗಿಯೂ ಇರುವ ಅನೇಕಭೂತಗಳಿಂದ ಪರಿವೇಷ್ಟಿತನಾ ಗಿ ಆಸೇನೆಯಮಧ್ಯದಲ್ಲಿ ಬರುತ್ತಿರುವ ಪ್ರಧಾನರಾಕ್ಷಸನನ್ನು ನೋಡಿದೆಯಾ? ಅವನೇ ನಿನಗೆ ಪರಮವೈರಿಯಾದ ರಾವಣನು. ಅವನೇ ಸಮಸ್ತದೇವತೆಗಳ ಕೆಚ್ಚನ್ನೂ ಮುರಿದವನು ಅದೋ ! ಪೂರ್ಣಚಂದ್ರನಂತೆ ಪ್ರಕಾಶಿಸುತ್ತ ಸಣ್ಣಸಣ್ಣ ಸಲಾಕೆಗಳಿಂದ ಕೂಡಿದ ಸರೊತ್ತಮವಾದ ಶ್ವೇತಛತ್ರವು