೨೪೨ ಶ್ರೀಮದ್ರಾಮಾಯಣವು (ಸರ್ಗ, ೫೯. ಕಾಣುವುದು ನೋಡು, ಆ ಛತ್ರದಿಂದ ಶೋಭಿತವಾದ ರಥದಲ್ಲಿ ಕುಳಿತಿರು ವವನೇ ರಾಕ್ಷಸಚಕ್ರವರ್ತಿಯು. ಆವನೇ ಅಷ್ಟೊಂದು ಮಹಾಪ್ರಭಾವ ರಿಂದ ಪ್ರಸಿದ್ಧನಾಗಿ, ಭೂತಗಳಿಂದ ಪರಿವೃತನಾದ ರುದ್ರನಂತೆ ಅನೇಕ ವೀರ ರಾಕ್ಷಸರಿಂದ ಪರಿವೃತನಾಗಿರುವನು. ಅದೋ ! ಅವನ ತಲೆಯಲ್ಲಿರುವ ಅನಘುವಾದ ಕಿರೀಟದ ಸೊಗಸನ್ನು ನೋಡು' ಆಡುತ್ತಿರುವ ಕರ್ಣ ಕುಂಡಲಗಳಿಂದ ಕಳೆಯೇರಿದ ಅವನ ಮುಖವನ್ನು ನೋಡು ! ಹಿಮವತ್ಪ ರೈತದಂತೆಯೂ, ವಿಂಧ್ಯಪರತದಂತೆಯೂ, ಕಾಣುತ್ತಿರುವ ಅವನ ಭಯಂ ಕರವಾದ ಆಕಾರವನ್ನು ನೋಡು | ರಾಮಾ ! ಆತನು ಸಾಮಾನ್ಯನಲ್ಲ ! ಆಗಾಗ ಮಹೇಂದ್ರಯವಾದಿಗಳ ಕೊಬ್ಬನ್ನು ಮುರಿದು ಬಂದವನು. ಸೂಯ್ಯನಂತೆ ಮಹಾದ್ಭುತತೇಜಸ್ಸಿನಿಂದ ಕೂಡಿದ ಆ ನಿನ್ನ ವೈರಿಯನ್ನು ಚೆನ್ನಾಗಿ ನೋಡು ' ” ಎಂದನು ಆಗ ರಾಮನು ರಾವಣನ ಮಹಾದತ ತೇಜಸ್ಸನ್ನೂ, ಅಟ್ಟಹಾಸವನ್ನೂ ನೋಡಿ ಆಶ್ಚರಗೊಂಡವನಾಗಿ, ಪಿಭೀ ಹಣನನ್ನು ಕುರಿತು, (ವಿಭೀಷಣಾ ' ನಿಜವಾಗಿಯೂ ರಾಕ್ಷಸಚಕ್ರವರ್ತಿ ಯಾದ ಈ ರಾವಣನ ತೇಜಸ್ಸು ಅತ್ಯದ್ಭುತವಾಗಿರುವುದು. ಆಹಾ ! ಅವನ ತೇಜಸ್ಸೇನು ? ಅವನ ಪ್ರತಾಪವೇನು " ಸೂರನು ತನ್ನ ಕಿರಣಗಳಿಂದ ನೋಡುವವರ ಕಣ್ಣನ್ನು ಕೋರೈಸುವಂತೆ ಇವನ ಕಾಂತಿಯೂ ಕೂಡ ಕಣ್ಣಿಂದ ನೋಡಲಸಾಧ್ಯವಾಗಿರುವುದು ' ಇವನ ರೂಪವು ಸುತ್ತಲೂ ಮಹಾದ್ಭುತತೇಜಸ್ಸಿನಿಂದ ಮರೆಗೊಂಡಂತಿದ್ದರೂ ವ್ಯಕ್ತವಾಗಿ ಕಾಣು ತಿರುವುದು. ಆಹಾ ! ರಾಕ್ಷಸಚಕ್ರವರ್ತಿಯೆನಿಸಿದ ಈತನ ದೇಹಕಾಂತಿ ಯನ್ನು ನೋಡಿದರೆ, ದೇವದಾನವರಲ್ಲಿ ಬೇರೆ ಯಾರಿಗೂ ಇಷ್ಟೊಂದು ಮಹಾದ್ಭುತವಾದ ತೇಜಸ್ಸಿರುವಂತೆ ತೋರಲಿಲ್ಲ. ಇಂತಗ ಆದ್ದು ತದೇಹವು ಬೇರೆ ಯಾರಿಗೂ ಇರದು' ಇವನನ್ನು ಸುತ್ತಿ ಬರುತ್ತಿರುವ ರಾಕ್ಷಸಯೋ ಧರ ರೂಪವಾದರೂ ಸಾಮಾನ್ಯವಲ್ಲ ! ಒಬ್ಬೊಬ್ಬರೂ ಪರೂತದಂತೆ ಮಹಾ ಕಾಯವುಳ್ಳವರು ! ಒಬ್ಬೊಬ್ಬರೂ ಪಕ್ವತಗಳನ್ನೆತ್ತಿ ಹೋರಾಡುವಷ್ಟು ದೇಹ ಬಲವುಳ್ಳವರು ! ಒಬ್ಬೊಬ್ಬರೂ ಥಳಥಳಿಸುವ ಮಹಾಯುಧಗಳನ್ನು ಹಿಡಿದು ಬಂದಿರುವರು ! ಒಬ್ಬೊಬ್ಬರೂ ಮಹಾತೇಜಸ್ಸಿನಿಂದ ಬೆಳಗು ತಿರುವರು ! ಇಂತಹ ಮಹಾದ್ಭುತತೇಜಸ್ಸುಳ್ಳವರಾಗಿಯೂ, ಭಯಂಕರ
ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೦೯
ಗೋಚರ