ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೯೨ ಶ್ರೀಮದ್ರಾಮಾಯಣವು (ಸರ್ಗ, ೪ ನ್ಯೂ , ನದಿಗಳನ್ನೂ , ಗಿರಿನದಿಗಳನ್ನೂ ನೋಡುತ್ತ ಮುಂದೆ ಹೋಗುತಿದ್ದ ನು, ವಾನರರು ಅಲ್ಲಿನ ಕಾಡುಗಳಲ್ಲಿ, ಹೋಗುವಾಗ ದಾರಿಯಲ್ಲಿ ಸಿ ಕ್ಕಿದ ಪಗಡೆಯಮರಗಳನ್ನೂ, ತಿಲಕವೃಕ್ಷಗಳನ್ನೂ , ಮಾವು, ಆಸುಗೆ, ದಾಸವಾಳ, ನೀಲಿ, ಕಣಗಿಲೆ, ನೇಮಿ, ಅಂಕೊಲೆ, ಕರಂಜಕ, ಆಲ,ಬಸರಿ, ಸೂರ್ಜಕ, ನೇರಳೆ,ನಲ್ಲಿ,ಕಡವು, ಮುಂತಾದ ಮರಗಳನ್ನೂ ಮುರಿದುಹಾ ಕುತ್ತ ಹೋದರು, ಮನೋಹರಗಳಾದ ಆ ಪರತಪ್ರಾಂತಗಳಲ್ಲಿದ್ದ ಬಗೆ ಬಗೆಯ ಕಾಡುಮರಗಳು ಗಾಳಿಯಿಂದಲುಗುತ್ತ, ಆ ವಾನರರಮಲೆ ಪು ಪ್ರವರ್ಷವನ್ನು ಕರೆಯುತಿದ್ದುವು. ಮದ್ಯಗಂಧವುಳ್ಳ ಅಲ್ಲಿನ ಕಾಡುಗಳಲ್ಲಿ ಚಂದನದಂತೆ ಶೀತಲವಾದ ವಾಯುವು, ಭಮರರೈಸಿಗಳೊಡನೆ ಸುಖಸ್ಸ ರ್ಶವಾಗಿ ಬೀಸುತಿತ್ತು ಅಲ್ಲಲ್ಲಿ ಕಾಣುತಿದ್ಯ ಗೈರಿಕಾದಧಾತುಗಳ ವಿಚಿತ್ರ ವರ್ಣಗಳಿಂದ ಆ ಪಕ್ವತವೇ ಅಲಂಕೃತವಾದಂತೆ ತೋರುತಿತ್ತು ಗಾಳಿ ಯ ಬಡಿತದಿಂದ ಮೇಲೆ ಹೊರಟ ಆ ಧಾತುರೇಣುಗಳೇ ದೊಡ್ಡವಾನರಸೇ ನೆಯನ್ನು ಸುತ್ತಲೂ ಆವರಿಸಿ ಮುಚ್ಚಿದಂತೆ ಕಾಣುತಿತ್ತು ಆ ಪರತದ ತ ಸ್ಪಲುಗಳ ಸುತ್ತಲೂ ಚೆನ್ನಾಗಿ ಪಷಿಸಿದ ತಾಳೆ, ನೀರುಗಂಟಿ, ಆಂದ ವಾದ ವಾಸಂತಿಕೆ, ಸುವಾಸನೆಯುಳ್ಳ ಮಾಧವೀಲತೆಗಳು, ಪ್ರಪ್ಪಭರಿತಗ ಳಾದ ಮೊಲ್ಲೆ ಯ ಪೊದರುಗಳು, ನಕ್ಕಮಾಲಗಳು, ಮಧೂಕವೃಕ್ಷಗಳು, ವಾಸೀರವೃಕ್ಷಗಳು, ಬಂದೂಕಗಳು, ಸ್ಕೂಕಗಳು, ನಾಗಕೇಸು, ಪಾದ ರಿ, ಕೋವಿದಾರ, ಖರ್ಜೂರ, ಅರ್ಜುನವೃಕ್ಷಗಳು, ತಿಂಶುಪಾವೃಕಗಳು, ಗಿರಿಮಲ್ಲಿಕೆಗಳು, ಹಿಪ್ಪೆ, ಮತ್ತಿ, ಬೂರಗ, ಕೆಂಪುಗೋರಂಟಿ, ಶ್ರೀತಾಳೆ, ಸೇವಿ, ಹಿಂತಾಳೆ, ಕಡವು, ಚೂರ್ಣಕ, ದೀಪಕ, ಅಂಕೋಲೆ, ನೆಲ್ಲಿ, ಪ ದ್ಯಕ,ಮುಂತಾದ ಗಿಡಗಳೆಲ್ಲವೂ ಈ ವಾನರರ ಹಾರಾಟದಿಂದ ತುಂಡುತುಂ ಡಾಗಿ ಮುರಿದು ಬಿಳುತಿದ್ದುವು ಆಪತದಮೇಲಿದ್ದ ಕೆರೆ, ಕಟ್ಟೆ, ಬಾವಿ ಮುಂ ತಾದ ಜಲಪ್ರದೇಶಗಳೆಲ್ಲವೂ, ತಂಪಾದ ನೀರುಳ್ಳುದಾಗಿ, ಚಕ್ರವಾಕಗಳಿಂ ದಲೂ, ಹಂಸಕಾರಂಡವಗಳಿಂದಲೂ, ಇನ್ನೂ ನೀರುಕಾಗೆಗಳು, ಕೌಂ ಚಗಳು, ಮೊದಲಾದ ನಾನಾಜಲಚರಪಕ್ಷಿಗಳಿಂದಲೂ ಶೋಭಿಸುತಿದ್ದುವು ಅವುಗಳ ಸುತ್ತಿನ ತೀರಪ್ರದೇಶಗಳಲ್ಲಿ,ಹಂದಿ, ಹುಲ್ಲೆ,ಕರಡಿ,ತಿವಂಗಿ, ಸಿಂಹ,