ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ: ೫೯ | ಯುದ್ಧಕಾಂಡವು. ೨೪೫ ಮೇಲೆಮೇಲೆ ಪೀಡಿಸುತ್ತಿದ್ದನು. ವಾನರರೆಲ್ಲರೂ ಆ ರಾಕ್ಷಸನ ಬಾಣ ಗಳಿಂದ ಭೇದಿಸಲ್ಪಟ್ಟ ಮೈಯುಳ್ಳವರಾಗಿ ಕೈಸಾಗದೆ ಕೆಳಗೆ ಬಿದ್ದರು. ಅತ್ತಲಾಗಿ ರಾವಣನೂ ಕೂಡ, ಈ ಸಮಸ್ತ ವಾನರಸೈನ್ಯವನ್ನೂ ಎಡೆಬಿ ಡದೆ ತನ್ನ ಬಾಣಗಳಿಂದ ಮುಚ್ಚು ತಿದ್ದನು ಹೀಗೆ ಮಹಾವೀರರೆನಿಸಿಕೊಂಡ ಪ್ರಸಿದ್ಧವಾನರರೆಲ್ಲರೂ ರಾವಣನ ಬಾಣಪ್ರಹಾರದಿಂದ ನೊಂದು ಕೆಳಗೆ ಬಿದ್ದು ಕೂಗಿಡುತ್ತ, ಪ್ರಾಣಭಯವೆಂಬ ಶಲ್ಯದಿಂದ ನಾಟಿದ ಹೃದಯವು ಇವರಾಗಿ, ಲೋಕರ್ಶಣ್ಯನಾದ ರಾಮನ ಕಾಲುಗಳಲ್ಲಿ ಬಿದ್ದು ಮರೆಹೊಕ್ಕ ರು ಆಗ ಮಹಾತ್ಮನಾಗಿಯೂ, ಮಹಾಧನುರ್ಧಾರಿಯಾಗಿಯೂ ಇರುವ ರಾಮನು, ಆ ವಾನರರನ್ನು ರಕ್ಷಿಸುವುದಕ್ಕಾಗಿ, ತನ್ನ ಬಿಲ್ಲನ್ನು ತೆಗೆದುಕೊಂ ಡು ಬೇಗನೆ ಮುಂದೆ ಹೊರಟನು ಇಷ್ಟರಲ್ಲಿ ಲಕ್ಷ್ಮಣನು ರಾಮನ ಬಳಿಗೆ ಬಂದು ಕೈಮುಗಿದು, ಸಾರಯುಕ್ತವಾದ ಮಾತಿನಿಂದ ಆತನನ್ನು ಕುರಿತು ಆಣ್ಣಾದುರಾತ್ಮನಾದ ಈ ರಾವಣನನ್ನು ವಧಿಸುವುದೇನೂ ನಿನಗೊಂದು ದೊಡ್ಡದಲ್ಲ' ಪೂಜ್ಯನಾದ ನಿನ್ನ ಪರಾಕ್ರಮಕ್ಕೆ ಇದು ಅತ್ಯಲ್ಪ ಕಾಠ್ಯವು. ಈ ನೀಚನಿಗಿದಿರಾಗಿ ನಿಂತು ಯುದ್ಧ ಮಾಡುವುದೇ ನಿನಗೆ ಯೋಗ್ಯವಲ್ಲ. ಆದುದರಿಂದ ಆ ಕಾಠ್ಯಕ್ಕೆ ನನ್ನನ್ನು ನಿಯಮಿಸು! ನಾನೇ ಅವನನ್ನು ಕೊಂ ದು ಬರುವೆನು. ಅದಕ್ಕೆ ತಕ್ಕ ಶಕ್ತಿಯು ನನಗುಂಟು ಆದರೆ ನಿನ್ನಾ ಜೊಯಿ ಲ್ಲದೆ ನಾನೇ ಸ್ವತಂತ್ರಿಸಲಾರೆನು.” ಎಂದನು ಆಗ ಮಹಾತೇಜಸ್ವಿಯಾಗಿ ಯೂ, ಸತ್ಯಪರಾಕ್ರಮನಾಗಿಯ ಇರುವ ರಾಮನು,ಲಕ್ಷಣನ ವಿನಯ ವಾಕ್ಯಕ್ಕೆ ಸಂತೋಷಗೊಂಡವನಾಗಿ « ವತ್ನ ಲಕ್ಷಣಾ ! ಒಳ್ಳೆಯದು ! ನೀನೇ ಹೋಗಿ ಯುದ್ಧ ಮಾಡು' ಅಲ್ಪ ಪರಾಕ್ರಮವುಳ್ಳವನೆಂದು ಅವನಲ್ಲಿ ಅಲಕ್ಷವನ್ನು ಮಾತ್ರ ತೋರಿಸದೆ,ಯುದ್ಧದಲ್ಲಿ ಎಚ್ಚರಿಕೆಯಿಂದಿರು. ಅವನು ಸಾಮಾನ್ಯನೆಂದು ತಿಳಿಯಬೇಡ ! ಮಹಾವೀರವುಳ್ಳವನು ಆಶ್ರಕರವಾದ ಪರಾಕ್ರಮವುಳ್ಳವನು. ಅವನು ಕ್ರುದ್ಧನಾದಪಕ್ಷದಲ್ಲಿ ಮೂರುಲೋಕ ವೂ ಒಂದಾಗಿ ದಂಡೆತ್ತಿ ಬಂದರೂ ಅವನನ್ನಿ ದಿರಿಸಿ ನಿಲ್ಲಲಾರದು, ಆ ರಾವ ಇನು ಒಂದಸ್ತವನ್ನು ಸಂಧಾನಮಾಡುವಂತೆ ತೋರಿಸಿ, ಬೇರೊಂದಸ್ತ ವನ್ನು ಸಂಧಾನಮಾಡುವನು. ಒಂದಸ್ತವನ್ನು ಪ್ರಯೋಗಿಸಿದಂತೆ ನಟಿಸಿ, ಬೇರೊಂದಸ್ತವನ್ನು ಪ್ರಯೋಗಿಸುವನು.ಆದುದರಿಂದ ನೀನು ಆಗಾಗ ಅವ