ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೩೬ ಶ್ರೀಮದ್ರಾಮಾಯಣವು [ಸರ್ಗ ೫೯. ನ ಸಂಚುಗಳನ್ನು ತಿಳಿದು ಯತ್ನದಿಂದ ಯುದ್ಧ ಮಾಡಬೇಕು! ನೀನೂ ಅವ ನಿಗೆ ಸಂಚನ್ನು ಕೊಡದಂತೆ ಎಚ್ಚರಿಕೆಯಿಂದಿರಬೇಕು, ವತ್ಸ ಅಕ್ಷಣಾ ಹೀಗೆ ನೀನು ಎಚ್ಚರಿಕೆಯಿಂದ ಕಣ್ಣಿಟ್ಟು ಕಾಯುತ್ತ, ನಿನ್ನ ಧನುರ್ವಿದ್ಯೆ ಯ ಚಾತುರದಿಂದಲೇ ನಿನ್ನನ್ನು ರಕ್ಷಿಸಿಕೊಳ್ಳಬೇಕು” ಎಂದನು ರಾಮನು ಹೇಳಿದ ಬುದ್ದಿವಾದನ್ನು ಕೇಳಿ ಲಕ್ಷಣನು ಸಂತೋಷದಿಂದ ಆತನನ್ನ ಪ್ಪಿ ಕೊಂಡು, ಅವನಿಗೆ ಪ್ರದಕ್ಷಿಣವನ್ನು ಮಾಡಿ, ನಮಸ್ಕರಿಸಿ ಯುದ್ಧಕ್ಕೆ ಹೊರಟನು ಆನೆಯ ಸುಂಡಿಲಿನಂತೆ ಭುಜವುಳ್ಳ ಆ ಲಕ್ಷಣನು ಮುಂದೆ ಹೋಗಿ, ಅಲ್ಲಿ ದೇದೀಪ್ಯಮಾನವಾದ ಭಯಂಕರಧನುಸ್ಸನ್ನು ಕೈಯಿಂದೆ ಹಿಡಿದು ವಾನರರಮೇಲೆ ಬಾಣವರ್ಷವನ್ನು ಕರೆಯುತ್ತಿದ್ದ ರಾವಣನನೂ , ಬಾಣದಿಂದ ಗಾಯಪಟ್ಟು ಚದುರುತ್ತಿರುವ ವಾನರರನ್ನೂ ನೋಡಿದನು. ಇಷ್ಟರಲ್ಲಿ ಮಹಾತೇಜಸ್ವಿಯಾಗಿಯೂ, ವಾಯುಪುತ್ರನಾಗಿಯೂ ಇರುವ ಹನುಮಂತನು, ವಾನರರಮೇಲೆ ಬಾಣವರ್ಷವನ್ನು ಕರೆ ಯುತ್ತಿರುವ ರಾವಣ ನನ್ನಿ ಹರಿಸುವುದಕ್ಕಾಗಿ,ಲಕ್ಷಣವು ಬರುತ್ತಿರುವು ದನ್ನು ನೋಡಿ, ತಾನೇ ಮೊ ದಲು ಮುಂದುಬಿದ್ದು, ರಾವಣನ ಬಾಣಸಮೂಹಗಳನ್ನು ತಡೆದು ಅವನಿಗಿದಿ ರಾಗಿ ಓಡಿದನು ಥೀಮಂತನಾದ ಆ ಹನುಮಂತನು ರಾವಣನ ರಥವನ್ನು ಸಮೀಪಿಸಿದೊಡನೆ ತನ್ನ ಬಲದೊಳನ್ನು ಮೇಲಕ್ಕೆತ್ತಿ, ರಾವಣನನ್ನು ಹೆದರಿ ಸುತ್ತ, ಅವನನ್ನು ಕುರಿತು, (ಎಲೆ ರಾವಣಾ ! ಸಾಕು ನಿಲ್ಲಿಸು ' ನೀನು ದೇವಟನವಯಕ್ಷಗಂಥರಾಕ್ಷಸರಲ್ಲಿ ಯಾರೊಬ್ಬರಿಂದಲೂ ಮರಣವಿಲ್ಲ ದಂತೆ ವರವನ್ನು ಪಡೆದು ಬಂದಿರಬಹುದು ಆದರೇನು? ವಾನರರಿಂದಮಾತ್ರ ನಿನಗೆ ಎಂದಿಗೂ ಭಯವು ತಪ್ಪದು. ಇದೋ 'ಐದುಕವಲುಗಳುಳ್ಳ ಈ ನನ್ನ ಬಲದೊಳನ್ನೆ ತಿರುವೆನು ನೋಡು, ಈ ನನ್ನ ಭುಜವೇ ನಿನ್ನನ್ನು ಕೊಂದು, ನಿನ್ನ ದೇಹದಲ್ಲಿ ಬಹುಕಾಲದಿಂದ ಸೇರಿಕೊಂಡಿರುವ ಜೀವಾತ್ಮನನ್ನು ಹೊರ ಕೈ ಕಿತ್ತೆಸೆಯುವುದು” ಎಂದನು ಹನುಮಂತನ ವಾಕ್ಯವನ್ನು ಕೇಳಿ ಭಯಂ ಕರಪರಾಕ್ರಮವುಳ್ಳ ರಾವಣನು, ಕೋಪದಿಂದ ಕೆಂಪೇರಿದ ಕಣ್ಣುಳ್ಳವನಾ ಗಿ, ('ಎಲೆ ವಾನರಾ ! ಹಾಗೆಯೇ ಆಗಲಿ ! ನಿರ್ಭಯವಾಗಿ ನಿಂತು ನಿನ್ನಿ೦ ದಾದಮಟ್ಟಿಗೆ ಶೀಘ್ರದಲ್ಲಿಯೇ ಪ್ರಹರಿಸು ! ಯಾವುದೋ ಒಂದುಕಾಡು ಕಪಿಯು ರಾಕ್ಷಸಚಕ್ರವರ್ತಿಯಾದ ರಾವಣನನ್ನು ಕೈಯೆತ್ತಿ ಹೊಡೆಯಿತೆಂಬ