ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫೯.] ಯುದ್ದ ಕಂಡವು. ೨೪೩೩ ಅಪಕೀರ್ತಿಯಾದರೂ ನಿನಗೆ ಸ್ಥಿರವಾಗಿ ನಿಲ್ಲಲಿ' ನನಗೂ ನಿನ್ನ ಶಕ್ತಿಯೆಷ್ಮೆಂ ದು ತಿಳಿಯುವುದು ಆಮೇಲೆ ನಾನು ನಿನ್ನನ್ನು ನೋಡಿಕೊಳ್ಳುವೆನು ” ಎಂದ ನು, ರಾವಣನ ಮಾತನ್ನು ಕೇಳಿ ತಿರುಗಿ ಆಂಜನೇಯನು ಅವನನ್ನು ಕುರಿತು «(ರಾವಣಾ ' ಸೀನು ನನ್ನ ಶಕ್ತಿಯನ್ನು ಈಗ ಹೊಸದಾಗಿ ತಿಳಿಯಬೇಕೆ ? ಮೊದಲೇ ನಾನು ನಿನ್ನ ಮಗನಾದ ಅಕ್ಷ ಕುಮಾರನನ್ನು ಇದೇ ಮುಷ್ಟಿ ಯಿಂದ ಕೊಂದು ಕೆಡಹಿದೆನಲ್ಲವೆ ? ಅದನ್ನು ಸ್ಮರಿಸಿಕೊಂಡು ನೋಡು” ಎಂದನು ಈ ಮಾತನ್ನು ಕೇಳಿದಕ್ಷಣವೇ ರಾವಣನು ತನ್ನ ಭುಜವನೈತಿ ಆಂಜನೇಯನ ಎದೆಯಮೇಲೆ ಅಂಗೈಯಿಂದ ಹೊಡೆದನು. ರಾವಣನ ಅಂಗೈ ಪೆಟ್ಟಿಗೆ ಹನುಮಂತನ ದೇಹವು ಆಹರಿಹೋಯಿತು ಹಾಗಿದ್ದರೂ ಆಂಜನೇ ಯನು ಮಹಾವೀರವುಳ್ಳವನಾಗಿಯೂ, ಧೀರನಾಗಿಯೂ ಇದ್ದುದರಿಂದ, ಕ್ಷಣಮಾತ್ರದವರೆಗೆ ಹಾಗೆಯೇ ನಿಂತಿದ್ದು, ಮನಸ್ಸಿಗೆ ಸೈಲ್ಯವನ್ನು ತಂದು ಕೊಂಡು, ಕೋಪದಿಂದ ಕೈಯನ್ನೆ ತಿ ರಾವಣನನ್ನ ಸ್ಪಳಿಸಿದನು. ಭೂಕಂಪ ವುಂಟಾದಾಗ ಪ್ರತವು ನಡುಗುವಂತೆ, ಬಲಾಡ್ಯ ನಾದ ಹನುಮಂತನ ಹಸ್ತಪ್ರಹಾರಕ್ಕೆ ರಾವಣನ ದೇಹವು ನಡುಗಿಹೋಯಿತು. ಅವನಿಗುಂಟಾದ ಈ ಭಂಗವನ್ನು ನೋಡಿ, ಅಲ್ಲಿದ್ದ ವಾನರರೂ, ಋಷಿಗಳೂ, ಸಿದ್ದರೂ, ದೇವತೆಗಳ, ಅಸುರರೂ, ಸಂತೋಷದಿಂದ ಕೋಲಾಹಲವನ್ನು ಮಾಡಿದ ರು ಇಷ್ಟರಲ್ಲಿಯೇ ಮಹಾತೇಜಸ್ವಿಯಾದ ರಾವಣನು ಚೇತರಿಸಿಕೊಂಡು, ಹನುಮಂತನನ್ನು ನೋಡಿ, ಕವಾನರಾ ' ಭಲೆ ' ಶಹಬಾಸ್ ' ಸೀನು ಶತ್ರು ವಾಗಿದ್ದರೂ ನಿನ್ನ ವೀರಕ್ಕೆ ಮೆಚ್ಚಿದೆನು” ಎಂದನು ಇದನ್ನು ಕೇಳಿ ವಾಯುಪುತ್ರನು ರಾವಣನನ್ನು ನೋಡಿ “ರಾವಣಾ' ಛೀ' ಬಿಡು ' ಈ ನನ್ನ ವೀರವನ್ನು ಸುಡಬೇಕು ! ನನ್ನ ಪರಾಕ್ರಮವು ಹಾಳಾಯಿತು ' ಈ ನನ್ನ ಮುಷ್ಠಿಪ್ರಹಾರದಿಂದಲೂ ನೀನು ಸಾಯದೆ ಬದುಕಿದ್ದ ಮೇಲೆ, ಈ ನನ್ನ ವೀಠ್ಯವೊಂದು ವೀಳ್ಯವೆ? ಎಲೆ ದುರಾತ್ಮಾ *ಇನ್ನೊ ಮ್ಮೆಯಾದರೂ ಈಗ ನೀ ನು ನನ್ನನ್ನು ಪ್ರಹರಿಸಿನೋಡು' ಸುಮ್ಮನೆ ನಿನಗೆ ನೀನೇ ಹೊಗಳಿಕೊಳ್ಳುವು

  • ಇಲ್ಲಿ ಶತ್ರವು ತಾನಾಗಿ ಮುಂದೆ ಬಂದು ತನ್ನನ್ನು ಹೊಡೆದಮೇಲೆಯೇ, ತಾನೂ ಅವನ ಮೇಲೆ ಕೈಮಾಡಿ ಪ್ರಹರಿಸುವುದೇ ವಿಕ್ರಮಪರಿಸಾಟಿಯೆಂಬುದಕ್ಕಾಗಿ ಹನುಮಂತನು ಈ ಮಾತನ್ನಾಡಿದುದಾಗಿ ಗ್ರಾಹ್ಯವು.