ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

sad ಶ್ರೀಮದ್ರಾಮಾಯಣವು [ಸರ್ಗ ೫೯. ದರಿಂದೇನು ಒಂದೇಮುಷ್ಠಿಪ್ರಹಾರದಿಂದ ನಾನು ನಿನ್ನನ್ನು ಯಮಪುರಿಗೆ ಕಳುಹಿಸಿಬಿಡುವೆನು” ಎಂದನು. ಈ ಮಾತನ್ನು ಕೇಳಿ ರಾವಣನಿಗೆ ಮಿತಿಮೀರಿದ ಕೋಪವು ಹುಟ್ಟಿತು. ಅವನ ಕಣ್ಣುಗಳೆಲ್ಲವೂ ಕೆಂಡದಂತೆ ಕೆಂಪಾದುವು. ಆಗ ವೀಠ್ಯವಂತನಾದ ರಾವಣನು, ತನ್ನ ಬಲಗೈಯನ್ನು ಮೇಲಕ್ಕೆತ್ತಿ ದೃಢ ವಾದ ಮುಷ್ಟಿಯನ್ನು ಹಿಡಿದು ಹನುಮಂತನ ಎದೆಯಮೇಲೆ ಗುದ್ದಿದನು. ಆ ಪ್ರಹಾರದಿಂದ ತಿರುಗಿ ಹನುಮಂತನ ದೇಹವು ನಡುಗಿ ನಿಶೆಷ್ಟವಾಯಿತು. ಇಷ್ಟರಲ್ಲಿ ಅತಿರಥನಾದ ರಾವಣನು, ಹನುಮಂತನು ಮೂರ್ಛಿತನಾದನೆಂದು ತಿಳಿದು, ಶೀಘ್ರದಲ್ಲಿ ತನ್ನ ರಥವನ್ನು ನಡೆಸಿಕೊಂಡು ನೀಲನೆಂಬ ವಾನರಸೇ ನಾಪತಿಯಮೇಲೆ ನುಗ್ಗಿ ದನು. ಬಹಳ ಪರಾಕ್ರಮಿಯಾದ ಆ ದಶಕಂರನು, ಮರ್ಮಬೇಧಕಗಳಾಗಿಯೂ, ಸರ್ಪಗಳಂತೆ ಕೂರಗಳಾಗಿಯೂ, ಭಯಂ ಕರಗಳಾಗಿಯೂ ಇರುವ ಬಾಣಗಳಿಂದ ವಾನರಬಲಾಧ್ಯಕ್ಷನಾದ ನೀಲ ನನ್ನು ಪ್ರಹರಿಸಿದನು ಈ ಬಾಣಗಳಿಂದ ಪೀಡಿತನಾದ ನೀಲನು, ಒಂದೇ ಕೈಯಿಂದ ಒಂದು ದೊಡ್ಡ ಪರತಶಿಖರವನ್ನು ಕಿತ್ತು ತಂದು, ರಾವಣನ ಮೇಲೆ ಬೀಸಿದನು ಇಷ್ಟರಲ್ಲಿ ಅತ್ತಲಾಗಿ ಮಹಾತೇಜಸ್ವಿಯಾಗಿಯೂ, ಥೀರ ನಾಗಿಯೂ ಇದ್ದ ಆಂಜನೇಯನು, ಮೆಲ್ಲಗೆ ಚೇತರಿಸಿಕೊಂಡು ಯುದ್ಧಾತು ರದಿಂದ ನಾಲ್ಕು ಕಡೆಗಳನ್ನೂ ತಿರುಗಿ ನೋಡುತ್ತ, ಅಷ್ಟರೊಳಗಾಗಿ ಸೀಲ ನಿಗಿದಿರಾಗಿ ನಿಂತು ಯುದ್ಧಮಾಡುತಿದ್ದ ರಾವಣನನ್ನು ಕಂಡು ಕೋಪ ದೊಡನೆ ಎಲೆ ರಾವಣಾ' ಇಷ್ಟರಲ್ಲಿಯೇ ನನ್ನನ್ನು ಜಯಿಸಿದೆನೆಂದು ತಿಳಿದು ಬೇರೊಬ್ಬರೊಡನೆ ಯುದ್ಧಕ್ಕೆ ಹೊರಟೆಯಾ ? ಹಾಗಾದರೆ ನಿನ್ನಿ ಪ್ಯದಂತೆ ಯುದ್ಧಮಾಡು, ಮತ್ತೊಬ್ಬರೊಡನೆ ಯುದ್ಧ ಮಾಡುವಾಗ ನಾನೂ ಬಂದು ನಿನ್ನ ೩ ದಿರಿಸುವುದು ಧರ್ಮವಲ್ಲ, ಆದುದರಿಂದ ಪ್ರಕೃತದಲ್ಲಿ ನಿನ್ನನ್ನು ಬಿಟ್ಟಿ ರುವೆನು” ಎಂದನು ಇಷ್ಟರಲ್ಲಿ ರಾವಣನು, ನೀಲನಿಂದ ಪ್ರಯುಕ್ತವಾಗಿದ್ದ ಆ ಪರತಶಿಖರವನ್ನು ತೀಕ್ಷವಾದ ಅಲಗುಗಳುಳ್ಳ ಏಳುಬಾಣಗಳಿಂದ ತು ಮುರುತುಮುರಾಗುವಂತೆ ಕತ್ತರಿಸಿ ಕೆಡಹಿದನು ಹೀಗೆ ತಾನು ಪ್ರಯೋಗಿ ಸಿದ ಪಕ್ವತವು ರಾವಣಬಾಣದಿಂದ ಪ್ರತಿಹತವಾಗಿ ಬಿದ್ದುದನ್ನು ನೋಡಿ, ವಾನರಸೇನಾಪತಿಯಾದ ನೀಲನಿಗೆ ಅತ್ಯಾಕ್ರೋಶವು ಹುಟ್ಟಿತು. ಕೋಪ ದಿಂದ ಕಾಲಾಗ್ನಿ ಯಂತೆ ಜ್ವಲಿಸುತಿದ್ದನು. ಈ ಕೋಪಕ್ಕಾಗಿ ಅವನು ಅಲ್ಲಲ್ಲಿ