ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪ಂ ಶ್ರೀಮದ್ರಾಮಾಯಣವು [ಸರ್ಗ ೫೯. ವನ್ನೆತ್ತಿ, ಧ್ವಜಾಗ್ರದಲ್ಲಿದ್ದ' ನೀಲನನ್ನು ನಮ್ಮ ಕಣ್ಣಿಂದ ದುಗದುರನೆ ನೋಡಿ ದನು, ಮತ್ತು ಮಹಾತೇಜಸ್ವಿಯಾದ ಆ ರಾಕ್ಷಸಚಕ್ರವರ್ತಿಯು, ನೀಲ ನನ್ನು ನೋಡಿ ಕೋಪದಿಂದ (ಎಲೈ ಚಪಲಸ್ವಭಾವವುಳ್ಳ ವಾನರನೆ ! * ನೀನು ದೊಡ್ಡ ಮಾಯೆಯನ್ನು ಹಿಡಿದು ಇಷ್ಟೊಂದು ಚಾತುರವನ್ನು ತೋರಿಸುವಂತಿದೆ ಆದರೇನು ? ಈಗಲೂ ನಿನಗೆ ಶಕ್ತಿಯಿದ್ದ ಪಕ್ಷದಲ್ಲಿ ನಿನ್ನ ಪ್ರಾಣವನ್ನು ನೀನು ರಕ್ಷಿಸಿಕೊಳ್ಳುವವನಾರು? ಎಲೆ ವಾನರಾ ! ನೀನು ನಿನ್ನ ರೂಪಗಳನ್ನು ಬೇರೆಬೇರೆ ವಿಧದಿಂದ ಕ್ಷಣಕ್ಷಣಕ್ಕೂ ಮಾರ್ಪಡಿಸಿ ಕೊಂಡು ಅನೇಕವಿಧವಾದ ಮಾಯೆಯನ್ನು ತೋರಿಸುವೆಯಷ್ಟೆ? ಹಾಗಿದ್ಯ ರೂ ಈಗ ನಾನು ಅಗ್ನಿ ಮಂತ್ರದಿಂದಭಿಮಂತ್ರಿಸಿ ಪ್ರಯೋಗಿಸಿರುವ ಈ ಬಾಣವು ನಿನ್ನನ್ನು ಬಿಡಲಾರದು, ಸೀನು ಎಷ್ಟೇ ತಂತ್ರಗಳನ್ನು ನಡೆಸಿದ ರೂ ನಿನ್ನ ಪ್ರಾಣಗಳನ್ನು ರಕ್ಷಿಸಿಕೊಳ್ಳಲಾರೆ. ಇದು ನಿನ್ನ ಜೀವವನ್ನು ನೀಗಿಸುವುದರಲ್ಲಿ ಸಂದೇಹವಿಲ್ಲ” ಎಂದನು ಮಹಾಬಾಹುವಾದ ಆ ರಾಕ್ಷ ಸೇಶ್ವರನು ಹೀಗೆಂದು ಹೇಳಿ, ಅಗ್ನಿ ಮಂತ್ರದಿಂದ ಬಾಣವನ್ನ ಭಿಮಂ ತ್ರಿಸಿ, ಬಿಲ್ಲಿನಲ್ಲಿ ಸಂಧಾನಮಾಡಿ ನೀಲನಮೇಲೆ ಪ್ರಯೋಗಿಸಿದನು. ಅಗ್ನಿ ಮಂತ್ರದಿಂದ ಮಂತ್ರಿಸಲ್ಪಟ್ಟ ಆ ಬಾಣವು ನೀಲನ ಎಯಲ್ಲಿ ನಾಟಿ ದೊಡನೆಯೇ, ಆತನು ಅದರ ಜ್ವಾಲೆಯಿಂದ ಬೆಂದು, ತಟ್ಟನೆ ಧ್ವಜಾ ಗ್ರದಿಂದ ಕೆಳಗೆ ಬಿದ್ದನು ಆದರೆ ಆ ನೀಲನು ಅಗ್ನಿ ದೇವನ ಮಗನಾದುದ ರಿಂದ, ತಂದೆಯಾದ ಆ ಅಗ್ನಿ ಯ ಅನುಗ್ರಹದಿಂದಲೂ, ತನ್ನ ತೇಜಃ ಪ್ರಭಾವದಿಂದಲೂ ನೆಲದಮೇಲೆ ಬಿದ್ದಾಗಲೂ ಮೊಳಕಾಲುಗಳನ್ನೂರಿ ಆಗಲೂ ಪ್ರಾಣಸಹಿತನಾಗಿಯೇ ನಿಂತಿದ್ದನು. ಆದರೆ ಅವನಿಗೆ ಮೈಮೇ ಲೆ ಪ್ರಜ್ಞೆಯು ತಪ್ಪಿತು ಹೀಗೆ ಸೀಲನು ಮೂರ್ಛಿತನಾಗಿರುವುದನ್ನು

  • ಇಲ್ಲಿ ನೀಲನು ತನ್ನ ದೇಹಲಾಭವದಿಂದ ಕ್ಷಣಕ್ಷಣಕ್ಕೂ ಧ್ವಜಾಗ್ರದಲ್ಲಿಯೂ, ಧನುರಗ್ರದಲ್ಲಿಯೂ, ಕಿರೀಟಾಗ್ರದಲ್ಲಿಯೂ ಕಾಣಿಸಿಕೊಳ್ಳುವುದನ್ನು ನೋಡಿದಾಗ ರಾವಕರನಿಗೆ, ನೀಲನು ಮಾಯಾಬಲದಿಂದಲೇ ಹಾಗೆ ಅನೇಕರೂಪಗಳನ್ನು ಸೃಷ್ಟಿಸಿ ಕೊಂಡು ಎಲ್ಲಾ ಕಡೆಗಳಲ್ಲಿಯೂ ಕಾಣುತ್ತಿರುವನೆಂಬ ಭ್ರಾಂತಿಯು ಹುಟ್ಟಿ ಹೀಗೆ ಹೇಳಿದುದಾಗಿ ತಿಳಿಯಬೇಕು.