ವಿಷಯಕ್ಕೆ ಹೋಗು

ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫೯.] ಯುದ್ಧಕಾಂಡವು. ೨೪೪೧ ನೋಡಿ ರಾವಣನು, ಮುಂದಿನ ಶತ್ರುವನ್ನಿ ದಿರಿಸುವುದರಲ್ಲಿ ಆತುರವುಳ್ಳ ನಾವ ಗಿ,ಮೇಫುಧ್ವನಿಯಂತೆ ಶಬ್ಬಿಸುತ್ತಿರುವ ತನ್ನ ರಥವನ್ನು ಲಕ್ಷಣನಿದ್ದ ಕಡೆ ಗೆಬಿಟ್ಟನು, ಹೀಗೆ ರಾವಣನು ಲಕ್ಷಣ೩ ದಿರಿಸಿ ಹೋಗುತ್ತಿರುವಾಗ, ತನ ಗಡ್ಡಲಾಗಿ ಬಂದ ಸುಗ್ರೀವಾದಿಗಳನ್ನು ನಿಗ್ರಹಿಸಿ ತಡೆದು, ಕೋಪದಿಂ ದ ಜ್ವಲಿಸುತ್ತ, ಸಮಸ್ತಭೂಮಿಯನ್ನೂ ನಡುಗಿಸುವಂತೆ ಧನುಷ್ಯಂ ಕಾರವನು ಮಾಡಿದನು ಇಷ್ಟರಲ್ಲಿ ಮಹಾಬಲಾಢ ನಾದ ಲಕ್ಷಣನು, ತನಗಿಹಿರಾಗಿ ದೊಡ್ಡ ಧನುಷ್ಯ೦ಕಾರದೊಡನೆ ರಥಸ್ಯನಾಗಿ ಬರುತಿದ್ದ ರಾ ವಣನನ್ನು ನೋಡಿ, ರಾಕ್ಷಸೇಂದ್ರಾ ! ಭಲೆ! ಇದೀಗಸರಿ ' ನಿನಗೆ ವಾನರ ರೊಡನೆ ಯುದ್ಧವೇಕ ? ನನ್ನೊಡನೆ ಯುದ್ಧಮಾಡು ” ಎಂದನು ಹೀಗೆ ಲಕ್ಷಣವು ಯುದ್ಧಕ್ಕೆ ಕರೆಯುವುದನ್ನು ನೋಡಿ ರಾವಣನು, ಆ ಲಕ್ಷಣನ ಗಂಭೀರವಾದ ಕ೦ರಸ್ವರವನ್ನೂ ,ಭಯಂಕರವಾದ ಆತನ ಜ್ಞಾಶಬ್ದವನ್ನೂ ಕೇಳಿ, ಯುದ್ಧಸನ್ನದ್ಧನಾಗಿ ನಿಂತಿದ್ದ ಆ ಲಕ್ಷಣನ ಸಮೀಪಕ್ಕೆ ಬಂದು, ಕೋಪದಿಂದ ಅವನನ್ನು ಕುರಿತು (1ಲಕ್ಷಣಾ ' ನಿನಗೆ ವಿನಾಶಕಾಲಕ್ಕಾ ಗಿಯೇ ಈ ವಿಪರೀತಬುದ್ದಿಯು ಹುಟ್ಟಿದಂತಿದೆ. ಭಾಗ್ಯವಶದಿಂದ ಸೀನು ನನ್ನ ಕಣ್ಣಿಗೆ ಗೋಚರಿಸಿದೆ ಈಗಲೇ ನನ್ನ ಬಾಣಗಳಿಂದ ಪೀಡಿತನಾಗಿ ನೀನು ಯಮಪುರಿಗೆ ಹೋಗಬೇಕಾಗುವುದು” ಎಂದನು ಹೀಗೆ ರಾವಣನು ಬಿಳಿಕೆರೆಹಲ್ಲುಗಳಿಂದ ಭಯಂಕರ ನಾಗಿ ಆರ್ಭಟಿಸಿ ಗರ್ಜಿಸುತ್ತ ಬಂ ದು ನಿಂತುದನ್ನು ನೋಡಿಯೂ ಲಕ್ಷ್ಮಣನು ಅವನನ್ನು ಹುಲ್ಲಿಗಿಂತ ಲೂ ಕಡೆಯಾಗಿ ಭಾವಿಸಿ ( ಎಲೇ ರಾಕ್ಷಸರಾಜಾ ? ನಿಜವಾಗಿಯೂ ದೊ ಡ್ಡ ಪ್ರಭಾವವುಳ್ಳವರು ನಿನ್ನ ಹಾಗೆ ಆತ್ಮಸ್ತುತಿಯನ್ನು ಮಾಡಿ ಗರ್ಜಿಸಲಾ ರು, ನೀನು ಮಹಾಪಾಪಿಷ್ಠನಾದುದರಿಂದಲೇ ಹೀಗೆ ಆತ್ಮಸ್ತುತಿ ಯಲ್ಲಿ ಪ್ರವರ್ತಿಸಿರುವೆ' ಎಲೆ ರಾಕ್ಷಸಾ ? ನಿನ್ನ ಬಲಪರಾಕ್ರಮಗಳನ್ನು ನಾನು ಕಾ ಸೆನೆ? ಹಿಂದೆ ನೀನು ನಿರ್ಜನಪ್ರದೇಶದಲ್ಲಿಯೂ ನಮ್ಮ ಭಯಕ್ಕಾಗಿ ಯತಿ ವೇಷದಿಂದ ಬಂದು ಸೀತೆಯನ್ನು ಕದ್ದು ತಂದವನಲ್ಲವೆ ? ಶತ್ರುಗಳನ್ನು ಭಯಪಡಿಸತಕ್ಕ ನಿನ್ನ ಪ್ರತಾಪವು ನನಗೆ ಆಗಲೇ ಚೆನ್ನಾಗಿ ತಿಳಿಯಿತು. ರಾವಣಾ' ಹೆಚ್ಚು ಮೂತಿನಿಂದೇನು? ಇದೊ'ಧನುರ್ಬಾಣಗಳನ್ನು ಹಿಡಿದು ಸಿ “ನಾಗಿ ನಿಂತಿರುವೆನು.ಮುಂದೆ ಬಂದು ಯುದ್ಧಕ್ಕೆ ನಿಲ್ಲು!ವ್ಯರ್ಥವಾದ ನಿನ್ನ 164