ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫೯.] ಯುದ್ಧಕಾಂಡವು. ೨೪೪ ಟೆದನು ಈ ಬಾಣಹತಿಯಿಂದ ಲಕ್ಷಣನು ಬಹಳ ನೊಂದವನಾಗಿ ಪ್ರಜ್ಞೆ ತಪ್ಪಿದಂತಾದರೂ, ಕೈಯಿಂದ ಸಡಿಲಿ ಬಿಳುತಿದ್ದ ಧನುಸ್ಸನ್ನು ಪ್ರಯ ದಿಂದ ಹಿಡಿದು ನಿಂತು, ತಿರುಗಿ ಕಣಕಾಲದಮೇಲೆ ಚೇತರಿಸಿಕೊಂಡು, ಅತಿತೀಕ್ಷವೇಗವುಳ್ಳ ಒಂದು ಬಾಣವನ್ನು ಪ್ರಯೋಗಿಸಿ, ರಾವಣನ ಕೈಯ ಕ್ಲಿದ್ದ ಧನುಸ್ಸನ್ನು ಕತ್ತರಿಸಿಕೆಡಹಿದನು ಆ ರಾವಣನ ಕೈಯಲ್ಲಿದ್ದ ಬಿಲ್ಲು ಮುರಿದಮೇಲೆ ತಿರುಗಿ ರಾವಣನ ಮೈಗೆ ಗುರಿಯಿಟ್ಟು ಮೂರುಬಾಣಗಳನ್ನು ಪ್ರಯೋಗಿಸಿದನು ಈ ತೀಕ್ಷಬಾಣಗಳಿಂದ ರಾವಣನು ಬಹಳವಾಗಿ ನೋಂ ದು ಮುಹೂರ್ತಕಾಲದವರಗೆ ಮೂರ್ಛಹೊಂದಿದು, ತಿರುಗಿ ಪ್ರಯತ್ನ ದಿಂದ ಚೇತರಿಸಿಕೊಂಡನು ರಾವಣನು ಬಹಳಸಮರ್ಥನಾಗಿಯೂ, ದೇ ವಶತ್ರುವಾಗಿಯೂ ಇದ್ದರೂ, ಲಕ್ಷಣನ ಬಾಣಗಳಿಂದ ಅವನ ಕೈಯಲ್ಲಿ ಈ ಬಿಲ್ಲು ಮುರಿದುಬಿದ್ದಿತು ಅವನ ದೇಹವು ಜರ್ಝರಿತವಾಯಿತು. ಸ ರ್ವಾಂಗಗಳಲ್ಲಿಯೂ ರಕ್ತವು ಕಿತ್ತುಕೊಂಡಿತು. ಅವನ ಮೈಯೆಲ್ಲವೂ ಮೇ ಬಸ್ಸಿನಿಂದ ತೊಯ್ದಂತಾಯಿತು. ಈ ತನ್ನ ದುರವಸ್ಥೆಯನ್ನು ನೋಡಿ ರಾವ ಇನು, ಮಿತಿಮೀರಿದ ಕೋಪಾವೇಶವನ್ನು ಹೊಂದಿ, ಹೇಗಾದರೂ ಲಕ್ಷ ಣನನ್ನು ಕೊಲ್ಲಬೇಕೆಂಬ ನಿರ್ಧರದಿಂದ, ಪೂತ್ವದಲ್ಲಿ ತನಗೆ ಬ್ರಹ್ಮಾನುಗ್ರ ಹದಿಂದ ಲಭಿಸಿದ ಒಂದು ಶಕ್ಕಾಯುಧವನ್ನು ಕೈಗೆತ್ತಿಕೊಂಡನು ಹೊಗೆ ಯಿಲ್ಲದ ಅಗ್ನಿ ಜ್ವಾಲೆಯಂತೆ ದೇದೀಪ್ಯಮಾನವಾಗಿಯೂ, ನೋಡುವಾಗ ಲೇ ಸಮಸ್ತವಾನರರಿಗೂ ಭಯವನ್ನು ಹುಟ್ಟಿಸತಕ್ಕುದಾಗಿಯೂ ಇದ್ದ ಆಶಕ್ತಿಯನ್ನು ಮಹಾವೇಗದಿಂದ ಲಕ್ಷಣನ ಕಡೆಗೆ ಪ್ರಯೋಗಿಸಿದನು. ಈ ಮಹಾದ್ಭುತಶಕ್ತಿಯು ತನ್ನ ಮೇಲೆ ಬರುವುದನ್ನು ನೋಡಿದೊಡನೆ ಲಕ್ಷಣವು ಅದನ್ನು ಖಂಡಿಸಬೇಕೆಂದೆಣಿಸಿ, ಹುತಮಾಡಿದ ಬೆಂಕಿಗೆ ಸ ಮಾನಗಳಾದ ಅನೇಕತೀಕ ಬಾಣಗಳನ್ನು ಪ್ರಯೋಗಿಸಿದನು. ಏನಾದ ರೇನು ' ಲಕ್ಷಣನು ಎಷ್ಟೆ ಬಾಣಗಳಿಂದ ತಡೆಯುತಿದ್ದರೂ, ಆ ಶಕ್ತಿ ಯು ತನ್ನ ವೇಗವನ್ನು ಬಿಡದೆ ಲಕ್ಷಣನ ವಿಶಾಲವಾದ ಎದೆಯಲ್ಲಿ ನಾಟಿ ತು, ರಘುಕುಲವೀರನಾದ ಲಕ್ಷಣನು ಬಹಳ ಶಕ್ತಿಮಂತನಾಗಿದ್ದರೂ, ರಾವಣಪ್ರಯುಕ್ತವಾದ ಶಕ್ತಿಯ ವೇಗವನ್ನು ತಡೆಯಲಾರದೆ, ಅದ ರಿಂದ ಪ್ರಕೃತನಾಗಿ ಅದರ ಮಹಾಜ್ವಾಲೆಗೆ ಸಿಕ್ಕಿ ಮೂರ್ಟೆಬಿದ್ದನು. ಹೀ