ವಿಷಯಕ್ಕೆ ಹೋಗು

ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪೪ ಶ್ರೀಮದ್ರಾಮಾಯಣವು [ಸರ್ಗ, ೫೯. ಗೆ ಲಕ್ಷಣನು ಮೂರ್ಛಿತನಾಗಿ ಬಿದ್ದುದನ್ನು ನೋಡಿದೊಡನೆ ರಾವಣ ನು ಸಂತೋಷದಿಂದ ತಟ್ಟನೆ ಮುಂದೆ ಬಂದು, ತನ್ನ ಎರಡು ತೋಳುಗಳಿಂ ದಲೂ ಆಲಕ್ಷಣವನ್ನು ಹಿಡಿದೆತ್ತಿಕೊಂಡುಹೋಗುವುದಕ್ಕೆ ಯತ್ನಿಸಿದನು. ಆದರೇನು? ಒಂದುವೇಳೆ * ಹಿಮವತ್ಪವ್ವತವನ್ನಾಗಲಿ, ಮಂದರಪಕ್ವತವ

  • ಇಲ್ಲಿ 'ಹಿಮವಾನ್ಮಂದರೋ ಮೇರುಶೈಲೋಕ್ಯಂ ವಾ ಸಹಾಮ' 1 ಶ ಕ್ಯಂ ಭುಜಾಭ್ಯಾಮುದ್ದತುಂ ನ ಸಂಖ್ಯೆ ಭರ ತಾನುಜ ” ಎಂದು ಮೂಲವು ವಿಶೇಷಾ ರ್ಥವು-ಇಲ್ಲಿ ಲಕ್ಷಕನು ತನ್ನ ತೋಳುಗಳಿಂದೆತ್ತಬೇಕೆಂದು ಪ್ರಯತ್ನಿಸಿ ಬಂದ ರಾವಣನನ್ನು ಋಷಿಯು ಸಾಮಾನೊಕ್ಕಿಯಿಂದ ಪರಿಹಾಸಮಾಡುವುದಾಗಿ ಭಾವವು, (ಹಿಮವಾನ್) ಧೈತ್ಯೇಣ ಹಿಮವಾವ” ಎಂಬುದಾಗಿ ಸಮಸ್ತ ಧೀರರಿಗೂ ಉಪಮಾ ನವೆನಿಸಿಕೊಳ್ಳುವ ಹಿಮವತ್ಪರತವನ್ನಾದರೂ ತನ್ನ ಭುಜಗಳಿಂದೆತ್ತುವುದಕ್ಕೆ ರಾವಣನಿಗೆ ಸಾಧ್ಯವಾಗಬಹುದು: ಅದರಲಿ ಏಕದೇಶವಾದ ಕೈಲಾಸವನು ಅವನು ಮೊದಲು ಕದಲ ಸಿರುವುದೇ ಇದಕ್ಕೆ ನಿದರ್ಶನವು ಮತ್ತು (ಮಂದರ:) ಸಮಸ್ತಸಾಗರಗಳಲ್ಲಿಯೂ ಪ್ರಧಾ ನವಾಗಿ, ಬಹಳ ಗಂಭೀರವೆನಿಸಿದ ಕ್ಷೀರಸಮುದ್ರವನ್ನೇ ಮೊದಲು ಕಲಕಿದ ಮಂದರ ಪ ರೈತವನ್ನಾದರೂ ಭುಜಗಳಿಂದೆತ್ತುವುದಕ್ಕೆ ಸಾಧ್ಯವು ಇದಕ್ಕೆ ನಿದರ್ಶನವಾಗಿ ಪೂರ ದಲ್ಲಿ ರಾವಣನಿಂದ ಪರಾಜಿತರಾದ ದೇವತೆಗಳೇ ಅದನ್ನು ಕಿತ್ತು ತಂದು ಸಮುದ್ರದಲ್ಲಿ ಹಾಕಿರುವರು, ಮತ್ತು, (ಮೆರು8) ಸಕಲಕುಲಪರತಗಳಿಗೂ ತಿಲಕವಾಯವಾದ ಮೇರುವನ್ನಾದರೂ ಕಿತ್ತು ತರಬಹುದು, ಇದಕ್ಕೆ ನಿದರ್ಶನವಾಗಿ ಪೂರದಲ್ಲಿ ವಾ ಯುವು ಆ ಮೇರುಪರತದ ಶಿಖರಭೂತವಾದ ಲಂಕೆಯನ್ನು ಸಮುದ್ರಮಧ್ಯದಲ್ಲಿ ತಂದಿಟ್ಟನು (ತೈಲೋಕ್ಯಂ) ಪಂಚಾಶತೊಟಿವಿರ್ಸ್ತೀಣವಳ್ಳದಾಗಿ, ತನಗೆ ಬೇರೊಂ ದು ಪರಿಮಾಣವಿಲ್ಲದೆ ತನಗೆ ತಾನೇ ಪರಿಮಾಣವಾದ ಮೂರುಲೋಕಗಳನ್ನೂ ಕಿತ್ತು ತರುವುದಕ್ಕೆ ಸಾಧ್ಯವಾಗಬಹುದು, ಇದಕ್ಕೆ ನಿದರ್ಶನವಾಗಿ, ವೂಲ್ವದಲ್ಲಿ ಹಿರಣ್ಯಾಕ್ಷನು ಅದ ರಲ್ಲಿ ಏಕದೇಶವಾದ ಭೂಮಿಯನ್ನು ಸುರುಟಿಕೊಂಡು ಹೋಗಿರುವನು ಇದರ ಮೇಲೆ (ಸಹಾಮರೈತ) ತೈಲೋಕ್ಕೆ ನಿರಾಹಕರಾದ ದೇವತೆಗಳೊಡನೆ ಕೂಡಿರುವಾ ಗಲೂ ಆ ತೈಲೋಕ್ಯವನ್ನು ಕದಲಿಸುವುದು ಶಕ್ಯವು ಏಕೆಂದರೆ, ದೇವಾಧಿಪತಿಯಾದ ಇಂದ್ರನು ತನ್ನ (ರಾವಣನ) ಮಗನಿಂದಲೇ ನಿಗ್ರಹಿಸಲ್ಪಟ್ಟಿರುವನು ಹೀ'ದ್ದರೂ (ಭರತಾನುಜಃ ರಾವಣನ ತಮ್ಮ ನಿಗೆ ತಮ್ಮನಾದ ಲಕ್ಷಣನುಮಾತ್ರ ಆ ಯುದ್ಧದಲ್ಲಿ ರಾವಣನ ತೋಳುಗಳಿಂದ ಕದಲಿಸುವುದಕ್ಕೆ ಸಾಧ್ಯವಾಗಲಿಲ್ಲವೆಂದರ್ಥವು ರಾಮನಿಗೆ ಚತುರ್ಭಾಗರೂಪವಾದ ಲಕ್ಷಣವನ್ನು ಕೈಯಿಂದೆತ್ತುವುದಕ್ಕೂ ಶಕ್ತನಾಗದ ರಾವ ಕನು ರಾಮನೊಡನೆ, ಹೇಗೆ ಯುದ್ಧ ಮಾಡಬಲ್ಲನೆಂಬ ಭಾವವೂ ಸೂಚಿತವಾಗುವುದು.