ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪೬ ಶ್ರೀಮದ್ರಾಮಾಯಣವು [ಸರ್ಗ: ೫೯. ಸಿಕೊಂಡನು. ಹಾಗೆ ಲಕ್ಷಣನು ತನ್ನ ದಿವ್ಯಸ್ವರೂಪವನ್ನು ಸ್ಮರಿಸಿಕೊಂ ಡುದರಿಂದಲೇ, ರಾವಣನು ಅವನನ್ನೆತ್ತುವುದಕ್ಕಾಗಿ ತನ್ನ ಸಮಸ್ತಭುಜಗಳ ನ್ಯೂ ಉಪಯೋಗಿಸಿ ಎಷ್ಟೇ ಪ್ರಯತ್ನ ಪಟ್ಟರೂ, ದಾನವರ ಕೆಚ್ಚನ್ನಡಗಿ ಸುವುದಕ್ಕಾಗಿಯೇ ಮನುಷ್ಯರೂಪದಿಂದವತರಿಸಿದ ಆ ಲಕ್ಷಣವನ್ನು ಸಾಗಿ ಸಿಕೊಂಡು ಹೋಗುವುದಕ್ಕೆ ಅವನಿಗೆ ಸಾಧ್ಯವಿಲ್ಲದೆ ಹೋಯಿತು ಇಷ್ಟರಲ್ಲಿ ವಾಯುಪುತ್ರನಾದ ಹನುಮಂತನು ರಾವಣನ ಕೂರಕಾರವನ್ನು ನೋಡಿ ಕೋಪಗೊಂಡವನಾಗಿ, ಮೈ ತಿಳಿಯದೆ ಮುಂದೆ ನುಗ್ಗಿ, ವಜದಂತಿರುವ ತನ ಮುಷಿಯಿಂದ ರಾವಣನ ಎದೆಯಮೇಲೆ ಹೊಡೆದು ಈ ಮುಷಿ ಪ. ಹಾರದಿಂದ ರಾಕ್ಷಸೇಶ್ವರನಾದ ರಾವಣನ ಮೈಕಟ್ಟು ಸಡಿಲಿತು.ಅವನ ದೇ ಹವು ನಡುಗಿತು. ಸಿಲ್ಲಲಾರದೆ ಮೊಳಕಾಲೂರಿ ಕೆಳಗೆ ಬಿದ್ಯನು ಅವನ ಕಣ್ಣೆ ವೆಗಳಲ್ಲಿ ರಕ್ತವು ಕಿತ್ತುಕೊಂಡಿತು, ನೋವಿನಿಂದ ತುಳಿಸುತ್ತ, ತನ್ನ ರಥದ ಮೇಲೆಯೇ ನಿಶ್ಲೇಷ್ಮನಾಗಿ ಬಿಟ್ಟಿದ್ದನು ಅವನಿಗೆ ಮೈಮೇಲೆ ಪ್ರಜ್ಞೆಯೂ ತಪ್ಪಿತು. ಅವನ ಮನಸ್ಸಿನ ಸೈನ್ಯವೂ ತಪ್ಪಿತು. ಹೀಗೆ ಭಯಂಕರಪರಾ ಕ್ರಮವುಳ್ಳ ಆ ರಾವಣನು ಮೂರ್ಛಿತನಾಗಿ ಬಿದ್ದುದನ್ನು ನೋಡಿ, ಆಕಾ ಶದಲ್ಲಿದ್ದ ಮಹರ್ಷಿಗಳೂ, ಸಿದ್ಧಚಾರಣಾದಿಗಳೂ, ಇಂದ್ರಾದಿದೇವತೆಗ ಭೂ, ವಾನರರೂ ಸಂತೋಷದಿಂದ ಸಿಂಹನಾದಗಳನ್ನು ಮಾಡಿದರು. ಈ ನಡುವೆ ಇತ್ತಲಾಗಿ ತೇಜಸ್ವಿಯಾದ ಹನುಮಂತನು, ರಾವಣನ ಶಕ್ಕಾ ಯುಧದಿಂದ ನೊಂದು ಮಲಗಿದ್ದ ಲಕ್ಷಣವನ್ನು ತನ್ನ ಎರಡು ತೋಳುಗೆ ಳಿಂದಲೂ ಎತ್ತಿ ತಂದು ರಾಮನ ಸಮೀಪದಲ್ಲಿ ಬಿಟ್ಟನು. ಆ ಲಕ್ಷಣನ ದೇಹವನ್ನೆತ್ತಿಹಿಡಿಯುವುದಕ್ಕೆ ಅಂತಹ ಮಹಾಬಲವುಳ್ಳ ರಾವಣನಿಗೆ ಸಾ ಥ್ಯವಲ್ಲದೆ ಹೋದರೂ,* ಹನುಮಂತನು ಆತನಿಗೆ ಅನುಕೂಲಮನಸ್ಸುಳ್ಳವ ನೆಯು ಲೌಕಿಕರಿಗೆ ತಿಳಿಯಲಾರದಾದುದರಿಂದ ಹಾಗೂ ಹೇಳುವುದು ಸರಿಯಲ್ಲ ಇದ ಲ್ಲದ ಮನುಷ್ಯ ಭಾವನೆಯೆಂಬುದಕ್ಕೆ ಉಪಾಯತ್ವವನ್ನೂ ಹೇಳಲಾಗದು. ಆದುದರಿಂದ ಆ ವಸ್ತುವು ಸ್ವಭಾವದಿಂದಲೇ ಭಕ್ತರಿಗೆ ಹಗುರವಾಗಿಯೂ, ವಿರೋಧಿಗಳಿಗೆ ಭಾರವಾ ಗಿಯೂ ಇರುವುದೆಂದು ತಿಳಿಯಬೇಕು, ಇದಕ್ಕಾಗಿಯೇ ಅಚಿಂತ್ಯವೆಂಬ ವಿಶೇಷಣವು.

  • ಇದಕ್ಕೆ ಮೊದಲು ಲಕ್ಷಣನು ಹಿಮವದಾದಿಗಳಿಗಿಂತಲೂ ಭಾರವುಳ್ಳವನಾ ದುದರಿಂದ ಅಕಂಪ್ಯನೆಂದು ಹೇಳಲ್ಪಟ್ಟಿತು, ಇಲ್ಲಿ ಅಂತಹ ಲಕ್ಷಣವನ್ನು ಒಂದು ಸಾ