ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೯೪ ಶ್ರೀಮದ್ರಾಮಾಯಣವು (ಸರ್ಗ, ೪. ವು ಕಾಣಿಸಿತು. ಹಾಗೆಯೇ ಸಮಸ್ತವಾನರಸೈನ್ಯವೂ ಕ್ರಮವಾಗಿ ಸಹ್ಯ ಮಲಯಪಲ್ವೇತಗಳನ್ನು ದಾಟಿ ಭಯಂಕರಧ್ವನಿಯಿಂದ ಮೊರೆಯುತ್ತಿರುವ ಆ ಸಮುದ್ರವನ್ನು ಕಂಡಿತು ಲೋಕರಂಜಕನಾದ ಶ್ರೀರಾಮನು ಆ ಸ ಮುದ್ರವನ್ನು ಕಂಡೊಡನೆ ಕುತೂಹಲಗೊಂಡು, ಲಕ್ಷಣಸುಗ್ರೀವರೆಡ ಗೂಡಿ ಆಗಲೇ ಆ ಪಕ್ವತಶಿಖರದಿಂದ ಬೇಗನೆ ಕೆಳಕ್ಕಿಳಿದು ಸಮುದ್ರ ತೀರದ ಕಾಡಿಗೆ ಬಂದನು, ಆಗಾಗ ಅಲೆಗಳು ಬಂದು ಹೊಡೆಯುವದ ರಿಂದ ಶುದ್ಧವಾಗಿ ತೊಳೆಯಲ್ಪಟ್ಟ ಕಲ್ಲು ಬಂಡೆಗಳುಳ್ಳ ಆ ತೀರಪ್ರದೇಶವ ನ್ನು ಸೇರಿದಮೇಲೆ ರಾಮನು ಸುಗ್ರೀವನನ್ನು ಕುರಿತು, “ಎಲೈ ಮಿತ್ರನೆ | ಇದೋ' ನಾವು ಸಮುದ್ರದ ಸಮೀಪಕ್ಕೂ ಬಂದುಬಿಟ್ಟೆವು. ನಾವು ಮೊದ ಲು ಮಾಡಿದ ಆಲೋಚನೆಯನ್ನು ಈಗ ಮುಗಿಸಬೇಕಾಗಿರುವುದು ಈ ಸಮುದ್ರವೋ ಅತ್ತಲಾಗಿ ತೀರವೇ ಇಲ್ಲದಂತೆ ಅಪಾರವಾಗಿ ಕಾಣುತ್ತಿರುವು ದು, ಉಪಾಯದಿಂದಲ್ಲದೆ ಇದನ್ನು ದಾಟುವುದು ಸಾಧ್ಯವಲ್ಲ ! ಆದುದರಿಂ ದ ಇಲ್ಲಿಯೇ ನಮ್ಮ ಸೈನ್ಯವನ್ನಿಳಿಸಿ, ಮುಂದೆ ಈ ವಾನರಸೈನ್ಯವೆಲ್ಲವನ್ನೂ ದಾಟಿಸುವುದಕ್ಕೆ ಮಾರ್ಗವನ್ನು ಯೋಚಿಸಬೇಕು” ಎಂದನು. ಸೀತಾ ವಿರಹದಿಂದ ಬಹಳವಾಗಿ ಕೃತಿಸಿದ ಮಹಾಬಾಹುವಾದ ಆ ರಾಮನು ಅಲ್ಲಿಯೇ ಸೈನ್ಯವನ್ನಿಳಿಸುವುದಕ್ಕಾಗಿ ಸುಗ್ರೀವನನ್ನು ಕುರಿತು, (ಎಲೈ ಕಪಿ ರಾಜನೆ ' ನಮ್ಮ ಸೈನ್ಯವೆಲ್ಲವನ್ನೂ ಇಲ್ಲಿಯೇ ನಿಲ್ಲುವಂತೆ ನಿಯಮಿಸು ' ನಾ ವು ಈ ಸಮುದ್ರವನ್ನು ದಾಟುವುದಕ್ಕಾಗಿ ತಕ್ಕ ಉಪಾಯವನ್ನು ಚೆನ್ನಾಗಿ ಆಲೋಚಿಸಿ ನಿಶ್ಚಯಿಸಬೇಕಾದ ಕಾಲವು ಬಂದಿರುವುದು ಅದುವರೆಗೆ ಇಲ್ಲಿ ಯಾವ ವಾನರಯೂಥಪತಿಯಾಗಲಿ, ತನ್ನ ತನ್ನ ಸೇನೆಯನ್ನಗಲಿ ಅತ್ರಿ ತ ಕದಲಕೂಡದು ಶೂರರಾದ ಕೆಲವು ವಾನರರು ಅಲ್ಲಲ್ಲಿ ಎಚ್ಚರಿಕೆಯಿಂ ದ ಸುತ್ತಿ ತಿರುಗುತ್ತ, ನಮ್ಮ ವಿಷಯದಲ್ಲಿ ಶತ್ರುಗಳು ರಹಸ್ಯವಾಗಿ ಅಲ್ಲಲ್ಲಿ ಕಲ್ಪಿಸಿರಬಹುದಾದ ಅಪಾಯಗಳನ್ನು ತಿಳಿಯುತ್ತಿರಬೇಕು ” ಎಂದನು. ಇದನ್ನು ಕೇಳಿ ಸುಗ್ರೀವನು ಲಕ್ಷಣಸಹಿತನಾಗಿ ಹೊರಟು, ತನ್ನ ಸಮಸ್ಯೆ ಸೈನ್ಯವನ್ನೂ ನಾನಾವೃಕ್ಷಗಳಿಂದ ನಿಬಿಡವಾದ ಆ ಸಮುದ್ರತೀರದಲ್ಲಿ ಅ ಲಲ್ಲಿ ನಿಲ್ಲಿಸಿದ್ದನು. ಮಹಾಸಾಗರದ ಸಮೀಪದಲ್ಲಿದ್ದ ಆ ದೊಡ್ಡ ವಾನರಸ್ಯ