ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಗ ೫೯.] ಯುದ್ದ ಕಾಂಡವು ೨೪೪೯ ವೀರವಾದವನ್ನು ಕೇಳಿದಾಗಲೇ ರಾವಣನಿಗೆ ಅತ್ಯಾಕೋಶವುಂಟಾಯಿತು ಇದಲ್ಲದೆ ಮೊದಲು ಹನುಮಂತನು ತನ್ನನ್ನು ದೃಢವಾದ ಮುಷ್ಟಿಯಿಂದ ಹೊಡೆದುದಲ್ಲದೆ, ಈಗ ರಾಮನಿಗೆ ವಾಹನವಾಗಿಯೂ ಬಂದಿರುವುದನು. ನೋಡಿದಮೇಲೆ, ಆ ಕೋಪವು ಮತ್ತಷ್ಟು ಹೆಚ್ಚಿತು. ಇದರಿಂದ ರಾವಣನು ಮೊದಲು ಆ ಹನುಮಂತನಮೆಲೆಯೇ ತನ್ನ ಕೋಪವನ್ನು ತೋರಿಸುತ್ತ, ಪ ಳಯಕಾಲಾಗ್ನಿ ಯಂತಿರುವ ಕೂರಬಾಣಗಳನ್ನು ತೆಗೆದು ಅವನಮೇಲೆ ಪ್ರಯೋಗಿಸಿದನು. ಹೀಗೆ ರಾವಣನು ಬಾಣಗಳಿಂದ ಹೊಡೆಯುತಿದ್ದರೂ, ಸಹಜತೇಜಸ್ವಿಯಾದ ಹನುಮಂತನಿಗೆ, ಮನಸ್ಸಿನ ಧೈದ್ಯವೂ, ವೀರವೂ ಮೇಲೆಮೇಲೆ ಹೆಚ್ಚು ತಿತ್ತೇಹೊರತು ಸ್ವಲ್ಪಮಾತ್ರವೂ ಕುಂದಲಿಲ್ಲ ಇಷ್ಟರಲ್ಲಿ ಮಹಾತೇಜಸ್ವಿಯಾದ ರಾಮನಿಗೆ ಹನುಮಂತನನ್ನು ರಾವಣನು ಬಾಣಗಳಿಂದ ಎಡೆಬಿಡದೆ ಪ್ರಹರಿಸುವುದನ್ನು ಕಂಡು ಬಹಳಕೊಪಾವೇಶ ವುಂಟಾಯಿತು ಆ ಕಇವೇ ರಾಮನು ಮುಂದೆ ಬಂದು, ತನ್ನ ತೀಕ ಬಾಣ ಗಳಿಂದ, ರಾವಣನ ರಥವನ್ನೂ, ರಥ ಚಕ್ರಗಳನ್ನೂ, ರಥಾಶ್ವಗಳನ್ನೂ, ಧ್ವಜವನ್ನೂ , ಶ್ವೇತಚ್ಛತ್ರವನ್ನೂ, ಪತಾಕೆಗಳನ್ನೂ, ಸಾರಥಿಯನ್ನೂ, ರಥ ದಲ್ಲಿದ್ದ ವಜ್ರ, ಶೂಲ, ಖಡ್ಡಾ ಬ್ಯಾಯುಧಗಳನ್ನೂ ಕ್ರಮವಾಗಿ ಕತ್ತರಿಸಿ ಕಡಹುತ್ತ ಬಂದನು ಮತ್ತು ಆಗ ರಾಮನು ವಜ್ರಾಯುಧಕ್ಕೂ ಸಿಡಿಲಿಗೂ ಸಮಾನವಾದ ಬೇರೊಂದುಬಾಣವನ್ನು ತೆಗೆದು, ದೇವೇಂದ್ರನು ವಜ್ರಾ ಯುಧದಿಂದ ಮಹಾಮೇರುಪರತವನ್ನು ಪ್ರಹರಿಸುವಂತೆ, ಆ ಬಾಣದಿಂದ, ಉಬ್ಬಿ ಆಗಲವಾದ ರಾವಣನ ಎದೆಯನ್ನು ವೇಗದಿಂದ ಪ್ರಹರಿಸಿದನು ೬೪ಹಾ ! ಆ ರಾಮಬಾ ಣದ ವೇಗವನ್ನು ಕೇಳಬೇಕೆ ? ಮೊದಲು ಯಾವನು ದೇವೆಂದ್ರನ ವಜ್ರಾಯುಧದಿಂದ ಪ್ರಹರಿಸಲ್ಪಟ್ಟರೂ, ಅತ್ಯುಗ್ರವಾದ ಸಿಡಿಲು ಬಂದು ಮೇಲೆ ಬಿದ್ದರೂ, ಸ್ವಲ್ಪ ಮಾತ್ರವೂ ಕದಲದೆ, ಸ್ವಲ್ಪ ವಾ ತ್ರವೂ ಧೈಯ್ಯಗುಂದದೆ, ಸ್ವಲ್ಪವೂ ಅಕ್ಷವಿಲ್ಲದೆ ತಡೆಯುತಿದ್ದನೋ, ನಿ೦ತಹ ರಾಕ್ಷಸರಾಜನಾದ ರಾವಣನೂಕೂಡ, ಆ ರಾಮಬಾಣದ ಪ್ರಹಾರ ವನ್ನು ತಡೆದುಕೊಳ್ಳಲಾರದೆ ಬಹಳ ನೊಂದು ನಡುಗಿದನು ಕೈಯಲ್ಲಿ ಧನುಸ್ಸನ್ನೂ ಕೆಳಗೆ ಬಿಟ್ಟನು. ಹೀಗೆ ಶಕ್ತಿಗುಂದಿ ಪರವಶನಾಗಿ ನಿರಾಯು ಧನಾಗಿದ್ದ, ರಾವಣನನ್ನು ರಾಮನು ಆಗಲೇ ಕೊಂದುಬಿಡಬಹುದಾಗಿದ್ದರೂ, 155