ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೫೧ ಶ್ರೀಮದ್ರಾಮಾಯಣವು (ಸರ್ಗ ೫೯ ಆತನು ಬಳಹ ದಯಾಳುವಾಗಿಯೂ, ದರ್ಮಬುದ್ಧಿಯುಳ್ಳವನಾಗಿಯೂ ಇದ್ದುದರಿಂದ, ಆಸ್ಥಿತಿಯಲ್ಲಿ ಅವನನ್ನು ಕೊಲ್ಲಲಾರದೆ ಅವನಲ್ಲಿ ಮರುಕ ಗೊಂಡು, ಸರವರ್ಣದಿಂದ ಜ್ವಲಿಸುತ್ತಿದ ಒಂದು ಅರ್ಧಚಂದ್ರ ಬಾಣವನ್ನು ತೆಗೆದು ಅದರಿಂದ ರಾವಣನ ಕಿರೀಟವನ್ನು ಭೇದಿಸಿ, ಮಾನ ಭಂಗವನ್ನು ಮಾತ್ರ ಮಾಡಿದನು ಆ ರಾವಣನಿಗೆ ಕೈಯಲ್ಲಿ ಧನುಸೂ ಜಾರಿ, ತಲೆಯ ಕಿರೀಟವೂ ಕೆಳಗೆ ಬಿದ್ದ ಮೇಲೆ, ಏಷದ ಹಲ್ಲನ್ನು ಕಿತ್ಯ ಸರ್ಪದಂತೆಯೂ, ಉರಿಯಿಲ್ಲದ ಬೆಂಕಿ ಯಂತೆಯೂ, ಕಾಂತಿ ಗುದ ಸೂರ ನಂತೆಯೂ, ಆತನು ಕೇವಲತೇಜೋಹೀನನಾಗಿದ್ದನು # ಹೀಗೆ ದುರ ವಸ್ಥೆಯಿಂದ ರಾವಣನನ್ನು ನೋಡಿ ಪರಮದಯಾಳುವಾದ ತೀರಾ ಮನು, ಆತನನ್ನು ಕುರಿತು ಸಾಂತೃವಾಕ್ಯದಿಂದ, ಎಲೆ ರಾಕ್ಷಸರಾಜನ? ನೀನು ಇದುವರೆಗೂ ಯುದ್ಧದಲ್ಲಿ ಬಹಳ ಭಯಂಕರಕಾರಗಳನ್ನು ನಡೆಸಿ, ನನ್ನ ಕಡೆಯಲ್ಲಿ ಬಹಳಮಂದಿ ಪ್ರಬಲ ಯೋಧರನ್ನೂ ಕೊಂಡಿರುವೆ.ಇದ ರಿಂದ ನೀನು ಈ ಯುದ್ಧದಲ್ಲಿ ಬಹಳವಾಗಿ ಬಳಲಿರುವೆಯೆಂದು ನನಗೆ ತೋರು ವುದು ಈ ಸ್ಥಿತಿಯಲ್ಲಿ ನಾನು ನಿನ್ನನ್ನು ಬಾಣಗಳಿಂದ ಕೊಲ್ಲಬ ರದೆಂದು ಬಿ ಟ್ವಿರುವೆನು. ಹೋಗು' ಈಗಲೂ ನಾನು ಅವಜ್ಞೆಯನ್ನು ಕೊಟ್ಟಿರುವೆನು ಅಲ ಕೆಗೆ ಹೋಗಿ ಸ್ವಲ್ಪ ಕಾಲದವರೆಗೆ ವಿಶ್ರಮಿಸಿಕೊಂಡಿದ್ದು,ಬಳಲಿಕೆಯನ್ನು, ತಿ; ರಿಸಿಕೊಂಡು, ತಿರುಗಿ ರಥವನ್ನೆ ರಿ ಧನುರ್ಧಾರಿಯಾಗಿ ಹೊರಟುತಾ ' ಸೀನು ಪೂರ್ಣವಾದ ಯುದ್ಧ ಸನ್ನಾ ಹದೊಡನೆ ಬಂದಮೇಲೆಯೇ ನಾನು ನನ್ನ ಬಲವನ್ನು ನಿನಗೆ ತೋರಿಸುವೆನು ಆಗ ನೀನು ನನ್ನ ವೀಠ್ಯವನ್ನು ಚೆನ್ನಾಗಿ ನೋಡಬಹುದು” ಎಂದನು ಈ ಮಾತನ್ನು ಕೇಳಿ ರಾವಣನಿಗೆ ಮನಸ್ಸಿನಲ್ಲಿ

  • ಇಲ್ಲಿ ರಾವಣನು ಇದುವರೆಗೆ ಧನುರ್ಧಾರಿಯಾಗಿ, ತಾನೇ ತನ್ನನ್ನು ರಕ್ಷಿಸಿ ಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದು, ಕೊನೆಗೆ ನಿರಾಯುಧನಾದುದಗಿಂದ ಆ ಪ್ರಯ ತ್ಯವನ್ನೂ ಬಿಟ್ಟಂತಾಯಿತು ಆಗ ರಾಮನು ತಾನೇ ಬಂದು ರಕ್ಷಿಸಬೇಕಾಯಿತು ಹೀಗೆ ಅನನ್ಯಶರಣನಾದ ರಾವಣನನ್ನು ನೋಡಿ ರಾಮನು ವಯಾಳುವಾಗಿ, ಅವನ ಪ್ರಾಣ ವನ್ನು ತೆಗೆಯಲಾರದೆ ಕೇವಲಮಾನಭಂಗವನ್ನು ಮಾತ್ರ ಮಾಡಿದನು ಇದರಿಂದ ತಾನು ತನ್ನ ರಕ್ಷಣಕ್ಕೆ ಪ್ರಯತ್ನವನ್ನು ಬಿಟ್ಟು ಬಿಡುವುದೇ ಭಗವದನುಗ್ರಹಪಾತ್ರತೆಗೆ ಮುಖ್ಯ ನಿಮಿತ್ತವಾಗಿಯೂ, ಸುಲಭೋಪಾಯವಾಗಿಯೂ ಇರುವುದೆಂದು ಸೂಚಿತವ.